ಬೆಳಗಾವಿ : ಸೀಲ್ಡೌನ್ ಪ್ರದೇಶದಲ್ಲಿ ವೃದ್ಧನೋರ್ವ ಹಸಿವಿನಿಂದ ಗೋಗರಿಯುತ್ತಿರುವ ಕರುಳು ಹಿಂಡುವ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಹೊಟ್ಟೆ ಹಸಿದಿದ್ದು, ತಿನ್ನಲು ಊಟದ ವ್ಯವಸ್ಥೆ ಮಾಡಿ ಸ್ವಾಮಿ ಅಂತಾ ವೃದ್ಧ ಗೋಗರೆದಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಗೆ ಆಗ್ರಹಿಸಿ ಸ್ಥಳೀಯರು ಬ್ಯಾರಿಕೇಡ್ ಬಳಿ ನಿಂತು ಪ್ರತಿಭಟನೆ ನಡೆಸುವ ವೇಳೆ ಈ ಘಟನೆ ನಡೆದಿದೆ.
ಕಿತ್ತೂರಿನ ರಾವಳ್ ಓಣಿಯ ಮಹಿಳೆಯೋರ್ವಳಿಗೆ ಕೊರೊನಾ ದೃಢವಾದ ಹಿನ್ನೆಲೆ ಅಧಿಕಾರಿಗಳು ಸೋಮವಾರದಿಂದ ಸೀಲ್ಡೌನ್ ಮಾಡಿದ್ದರು. ಆದರೆ, ಇಲ್ಲಿ ಅಗತ್ಯ ವಸ್ತು ಪೂರೈಸಿಲ್ಲ ಎಂದು ತಾಲೂಕಾಡಳಿತ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.