ಬೆಳಗಾವಿ: ನೆರೆಯ ಮಹಾರಾಷ್ಟ್ರದಿಂದ ಮರಳಿದ್ದ ಒಂದು ವರ್ಷದ ಮಗು ಸೇರಿ ಜಿಲ್ಲೆಯ 13 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರ ನಂಜು ಬೆಳಗಾವಿಯನ್ನು ಬಿಟ್ಟು ಬಿಡದೇ ಕಾಡುತ್ತಿದ್ದು, ಇಂದು ಒಂದೇ ದಿನ 13 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. 13 ಸೋಂಕಿತರ ಪೈಕಿ 11 ಜನ ಮಹಾರಾಷ್ಟ್ರದಿಂದ ಮರಳಿದ್ದವರು, ಇಬ್ಬರು ದೆಹಲಿಯಿಂದ ಮರಳಿದವರಾಗಿದ್ದಾರೆ.
ಬೆಳಗಾವಿ ತಾಲೂಕಿನ ಐವರು, ಚಿಕ್ಕೋಡಿಯ ಐವರು ಹಾಗೂ ಹುಕ್ಕೇರಿ ಪಟ್ಟಣದ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.