ETV Bharat / state

ಹಿಂಡಲಗಾ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ದೃಢ - Belgavi corona news

ಹಿಂಡಲಗಾ ಜೈಲಿಗೆ ಹೊಸದಾಗಿ ಹೋಗುವ ಕೈದಿಗಳಿಗೆ ಕ್ವಾರಂಟೈನ್ ಆಗಲು ಜೈಲಿನಲ್ಲಿ 10 ಸೆಲ್​ಗಳನ್ನು ಕಾಯ್ದಿರಿಸಲಾಗಿತ್ತು. ಆದರೂ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ವಕ್ಕರಿಸಿರುವುದು ಆತಂಕಕ್ಕೆ ಕಾರಣವಾಗಿದೆ.

11 corona case found in hindalaga cell
11 corona case found in hindalaga cell
author img

By

Published : Jul 15, 2020, 11:17 PM IST

ಬೆಳಗಾವಿ: ಮಹಾಮಾರಿ ಕೊರೊನಾ ಬೆಳಗಾವಿಯ ಹಿಂಡಲಗಾ ಜೈಲಿಗೂ ಲಗ್ಗೆ ಇಟ್ಟಿದ್ದು, 11 ಕೈದಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕು ದೃಢಪಟ್ಟ 11 ಕೈದಿಗಳನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಹಿಂಡಲಗಾ ಜೈಲಿನಲ್ಲಿ ಸದ್ಯ 800ಕ್ಕೂ ಅಧಿಕ ಕೈದಿಗಳಿದ್ದು, ಎಲ್ಲರೂ ಕೊರೊನಾ ಭೀತಿಯಲ್ಲಿದ್ದಾರೆ.

ಕೈದಿಗಳಿಗೆ ಸೋಂಕು ಹೇಗೆ ತಗುಲಿದೆ ಎಂಬುದರ ಕುರಿತು ಮಾಹಿತಿ ತಿಳಿದುಬಂದಿಲ್ಲ. ಹೊಸದಾಗಿ ಜೈಲಿಗೆ ಹೋಗುವ ಕೈದಿಗಳಿಗೆ ಕ್ವಾರಂಟೈನ್ ಆಗಲು ಜೈಲಿನಲ್ಲಿ 10 ಸೆಲ್​ಗಳನ್ನು ಕಾಯ್ದಿರಿಸಲಾಗಿತ್ತು. ಆದರೂ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಸೋಂಕು ಪ್ರಕರಣಗಳಿಂದ ಹಿಂಡಲಗಾ ಗ್ರಾಮದ ಜನತೆಯಲ್ಲಿಯೂ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.