ETV Bharat / state

ಎಷ್ಟು ಪರದಾಡಿದ್ರೂ ಸಿಗದ ಆಸ್ಪತ್ರೆ ಬೆಡ್‌: ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್‌ ನೀಡಿ ಪ್ರಾಣ ಉಳಿಸಿದ ಯುವಕರು

author img

By

Published : May 18, 2021, 8:40 AM IST

ಆಕ್ಸಿಜನ್ ಬೆಡ್ ಸಿಗದೆ ಪರದಾಡುತ್ತಿದ್ದ ಕೋವಿಡ್ ಸೋಂಕಿತನಿಗೆ ನೆರವಾಗುವ ಮೂಲಕ ಯುವಕರ ತಂಡವೊಂದು ಮಾನವೀಯ ಕಾರ್ಯ ಮಾಡಿದೆ.

Youth team provided oxygen in ambulance
ಆಕ್ಸಿಜನ್‌ ಪೂರೈಕೆ ಮಾಡಿದ ಯುವಕರ ತಂಡ

ಬೆಂಗಳೂರು: ಆಕ್ಸಿಜನ್ ಬೆಡ್​ ಸಿಗದೆ ಪರದಾಡುತ್ತಿದ್ದ ಕೋವಿಡ್​ ಸೋಂಕಿತನಿಗೆ ಆ್ಯಂಬುಲೆನ್ಸ್​ನಲ್ಲೇ ಆಕ್ಸಿಜನ್ ವ್ಯವಸ್ಥೆ ಮಾಡುವ ಮೂಲಕ ಯುವಕರ ತಂಡವೊಂದು ನೆರವಾಗಿದೆ.

ನಗರದ ರಾಯಸಂದ್ರದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಶುಕ್ರವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಸರಿಯಾದ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ. ನಂತರ ಶನಿವಾರದಿಂದ ಐಸಿಯು ಬೆಡ್‌ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಎಲ್ಲೂ ಬೆಡ್ ಸಿಕ್ಕಿರಲಿಲ್ಲ. ಈ ನಡುವೆ ರೋಗಿಗೆ ತೀವ್ರ ಸ್ವರೂಪದಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ, ಬೇರೆ ದಾರಿ ಕಾಣದ ಕುಟುಂಬಸ್ಥರು ಗರುಡ ಮಾಲ್ ಬಳಿಯ ಕೋವಿಡ್ ಕೇರ್ ಸೆಂಟರ್‌ಗೆ ಕರೆತಂದಿದ್ದರು. ಅಷ್ಟರಲ್ಲಿ ಸೋಂಕಿತನ ಆಕ್ಸಿಜನ್‌ ಸ್ಯಾಚುರೇಶನ್ ಲೆವಲ್ 82 ಕ್ಕೆ ಕುಸಿದಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಐಸಿಯು ಬೆಡ್ ಬೇಕೆಂದು ಕುಟುಂಬಸ್ಥರು ಎಲ್ಲೆಡೆ ಅಂಗಲಾಚುತ್ತಿದ್ದರರು. ಈ ವಿಚಾರ ತಿಳಿದು ನಗರದ ಯತೀಶ್ ಮತ್ತು ತಂಡ ಸ್ಥಳಕ್ಕೆ ಧಾವಿಸಿ ಬಂದಿದ್ದು, ತಡರಾತ್ರಿ ರೋಗಿಯನ್ನು ಕೋವಿಡ್ ಕೇರ್ ಸೆಂಟರ್​ನಿಂದ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದರು.

ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಆಕ್ಸಿಜನ್ ಘಟಕ ನಿರ್ಮಿಸುವ ಸ್ಥಳ ಪರಿಶೀಲಿಸಿದ ಶಾಸಕ ಹರೀಶ್ ಪೂಂಜ

ಆದರೆ, ಕಿಮ್ಸ್​ನಲ್ಲಿಯೂ ಸೋಂಕಿತನಿಗೆ ಬೆಡ್​ ಸಿಗಲಿಲ್ಲ. ಈ ವೇಳೆ ಬೇರೆ ದಾರಿ ಕಾಣದೆ ರಸ್ತೆ ಪಕ್ಕದಲ್ಲೇ ಆ್ಯಂಬುಲೆನ್ಸ್ ನಿಲ್ಲಿಸಿ, ಯತೀಶ್ ಮತ್ತು ತಂಡದವರು ಆಕ್ಸಿಜನ್ ಸಿಲಿಂಡರ್ ಅಳವಡಿಸಿ ರೋಗಿಯ ಪ್ರಾಣ ಉಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.