ಬೆಂಗಳೂರು: ಪ್ರೀತಿಸಿದ ಯುವತಿ ಕೈತಪ್ಪಿದ್ದಕ್ಕೆ ಕೋಪಗೊಂಡು ಯುವಕನೋರ್ವ ತನ್ನ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಗೈದ ರಾಕೇಶ್ನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಕೊಲೆಯಾದ ಯುವಕ.
ಯುವತಿಗಾಗಿ ಸ್ನೇಹಿತರ ಮಧ್ಯೆ ಜಗಳ: ಸ್ನೇಹಿತರಾಗಿದ್ದ ರಾಕೇಶ್ ಹಾಗೂ ಸತೀಶ್ ಫ್ಲವರ್ ಡೆಕೊರೇಶನ್ ಕೆಲಸ ಮಾಡಿಕೊಂಡಿದ್ದರು. ಒಂದೇ ಕಡೆ ಕೆಲಸ ಮಾಡುತಿದ್ದ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಗಳಾಗಿದ್ದವು. ಆದರೆ ಅಂತಿಮವಾಗಿ ಯುವತಿ, ಸತೀಶ್‌ನನ್ನು ಪ್ರೀತಿಸಿ ಮದುವೆ ಕೂಡ ಆಗಿದ್ದಳು.
ತಾನು ಪ್ರೀತಿ ಮಾಡಿದ್ದವಳ ಜೊತೆಗೆ ತನ್ನ ಸ್ನೇಹಿತ ಚೆನ್ನಾಗಿರುವುದನ್ನು ನೋಡಿ ಸಹಿಸಲಾಗದ ರಾಕೇಶ್ ತನ್ನ ಮತ್ತೊಬ್ಬ ಸ್ನೇಹಿತನ ಜೊತೆಗೂಡಿ ಸೆಪ್ಟೆಂಬರ್ 2ರಂದು ಹಳೆ ಬೈಯ್ಯಪ್ಪನಹಳ್ಳಿಯಲ್ಲಿ ಸತೀಶ್ ಜೊತೆ ಗಲಾಟೆ ಮಾಡಿ ಆತನಿಗೆ ಚಾಕು ಇರಿದಿದ್ದ. ಪರಿಣಾಮ ಆತ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಬೈಯಪ್ಪನಹಳ್ಳಿ ಪೊಲೀಸರು ರಾಕೇಶ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅವಧಿಗೂ ಮೀರಿ ಪಾರ್ಟಿ: ಬೆಂಗಳೂರಿನ ಸ್ಟಾರ್ ಹೋಟೆಲ್ ಮೇಲೆ ತಡರಾತ್ರಿ ಸಿಸಿಬಿ ದಾಳಿ