ETV Bharat / state

ಇಡಿ ಅಧಿಕಾರಿಗಳಿಂದ ಡಿಕೆಶಿ ನಿರಂತರ ವಿಚಾರಣೆ: ಯುವ ಕಾಂಗ್ರೆಸ್ ಪ್ರತಿಭಟನೆ - ಕೇಂದ್ರ ಸರ್ಕಾರ

ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಯುವ ಕಾಗ್ರೆಸ್ ಪ್ರತಿಭಟನೆ
author img

By

Published : Sep 1, 2019, 6:17 AM IST

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ, ನಗರದ ಮೌರ್ಯ ಸರ್ಕಲ್​ನಲ್ಲಿ ಧರಣಿ ನಡೆಸಲಾಯಿತು.

ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವ ಕಾರ್ಯಕರ್ತರು, ಪ್ರತಿಕೃತಿ ದಹಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿ, ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿ ತೆರಳಲು ಮುಂದಾದ ಸಂದರ್ಭ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯಲಾಯಿತು.

ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನ ಪ್ರಯತ್ನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಶಾಸಕ ಶ್ರೀನಿವಾಸ್ ಗೌಡ ಸದನದಲ್ಲಿ ಆಪರೇಷನ್ ಕಮಲದ ಬಗ್ಗೆ ಹೇಳಿದ್ದಾರೆ. ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಅದು ನಿಮ್ಮ ಕಣ್ಣಿಗೆ ಕಾಣಿಸ್ತಿಲ್ಲವೇ? ಶ್ರೀರಾಮುಲು ಹಣದ ಅಮಿಷ ಒಡ್ಡಿರುವುದು ಗೊತ್ತಿಲ್ಲವೇ? ಅದನ್ನು ಎಫ್ಐಆರ್ ಮಾಡಿಕೊಂಡಿಲ್ಲ ಎಂದು ಈ ವೇಳೆ ಪ್ರಶ್ನಿಸಿದರು.

Intro:newsBody:ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನ ಪ್ರಯತ್ನ ಖಂಡಿಸಿ ಯುವ ಕಾಗ್ರೆಸ್ ಪ್ರತಿಭಟನೆ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಮೌರ್ಯಸರ್ಕಲ್ ನಲ್ಲಿ ಧರಣಿ ನಡೆಯಿತು. ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನ ಪ್ರಯತ್ನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಯುವ ಕಾರ್ಯಕರ್ತರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಧರಣಿ ನಡೆಯಿತು. ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸಿ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿ ತೆರಳಲು ಮುಂದಾದ ಸಂದರ್ಭ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯಲಾಯಿತು.
ನಾಯಕರ ಆಕ್ರೋಶ
ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಶಾಸಕ ಶ್ರೀನಿವಾಸ್ ಗೌಡ ಸದನದಲ್ಲಿ ಹೇಳಿದ್ದಾರೆ, ಆಪರೇಷನ್ ಕಮಲದ ಬಗ್ಗೆ ಹೇಳಿದ್ದಾರೆ. ಯಾಕೆ ಇನ್ನೂ ಕ್ರಮವನ್ನ ಕೈಗೊಂಡಿಲ್ಲ. ಅದು ನಿಮ್ಮ ಕಣ್ಣಿಗೆ ಕಾಣಿಸ್ತಿಲ್ಲವೇ? ಶ್ರೀರಾಮುಲು ಹಣದ ಅಮಿಷ ಹೊಡ್ಡಿರುವುದು ಗೊತ್ತಿಲ್ಲವೇ? ಯಾಕೆ ಅದನ್ನ ಎಫ್ ಐ ಆರ್ ಮಾಡಿಕೊಂಡಿಲ್ಲ. ಕುತಂತ್ರದಿಂದ ಡಿಕೆಶಿ ಬಂಧನಕ್ಕೆ ಪ್ರಯತ್ನ ನಡೆಸಿದ್ದಾರೆ. ನಿಮ್ಮ ಕುತಂತ್ರ ಹೆಚ್ಚು ದಿನ ನಡೆಯಲ್ಲ. ಅವರನ್ನ ಬಂಧಿಸಿದ್ದೇ ಆದರೆ ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಡಿಕೆಶಿಯನ್ನ ಬಂಧಿಸಿದರೆ ನಾವು ಸುಮ್ಮನಿರಲ್ಲ. ನಾವು ರಕ್ತವನ್ನ ಹರಿಸಬೇಕಾಗುತ್ತದೆ. ರಕ್ತವನ್ನ ಕೊಟ್ಟಾದರೂ ಡಿಕೆಶಿಯನ್ನ ಉಳಿಸುತ್ತೇವೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜ್ ಎಚ್ಚರಿಕೆ ನೀಡಿದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.