ETV Bharat / state

ಹಾಸನದಲ್ಲಿ ಹಳೇ ದ್ವೇಷಕ್ಕೆ ಯುವಕನ ಕೊಲೆ: ಬೆಂಗಳೂರಿನಲ್ಲಿ ಬಾಮೈದುನನ ಹತ್ಯೆ ಆರೋಪಿ ಸೆರೆ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬಳಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈದಿದ್ದಾರೆ. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರಿಯ ಸಂಸಾರಕ್ಕೆ ತೊಂದರೆ ಕೊಡುತ್ತಿದ್ದ ಬಾಮೈದುನನ ಹತ್ಯೆಗೈದ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

murder
ಕೊಲೆ
author img

By

Published : Jan 18, 2023, 1:09 PM IST

ಹಳೇ ದ್ವೇಷಕ್ಕೆ ಹಾಸನದಲ್ಲಿ ಯುವಕನ ಹತ್ಯೆ

ಹಾಸನ/ಬೆಂಗಳೂರು: ಹಳೇ ದ್ವೇಷಕ್ಕೆ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ. ಭರತ್ (27) ಕೊಲೆಯಾದ ಯುವಕ. ಈತ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಟ್ಟೆಯ ಭಾಗಕ್ಕೆ ಚುಚ್ಚಿ ಕೊಲೆಗೈದಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಭರತ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಈಗಾಗಲೇ ಎರಡು ವಿಶೇಷ ತಂಡಗಳನ್ನು ಎಸ್​ಪಿ ಹರಿರಾಮ ಶಂಕರ್ ರಚಿಸಲಾಗಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಮೈದುನನ ಹತ್ಯೆ ಪ್ರಕರಣ: ಸಹೋದರಿಯ ಸಂಸಾರಕ್ಕೆ ಮುಳ್ಳಾಗಿದ್ದ ಬಾಮೈದುನನನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಕೊಲೆಯಾದ ದುರ್ದೈವಿ. ವೆಂಕಟೇಶ್ ಬಂಧಿತ ಆರೋಪಿ. ಜನವರಿ 16ರಂದು ವಿಶ್ವೇಶ್ವರಯ್ಯ ಲೇಔಟ್​ನಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಸತೀಶ್​ನನ್ನು ಕೊಲೆ ಮಾಡಲಾಗಿತ್ತು.

murder
ಕೊಲೆಯಾದ ವ್ಯಕ್ತಿ ಸತೀಶ್

ಇದನ್ನೂ ಓದಿ: ಬೆಂಗಳೂರು: ಇಬ್ಬರು ನಟೋರಿಯಸ್ ಸುಲಿಗೆಕೋರರ ಬಂಧನ

ಕೃತ್ಯಕ್ಕೆ ಕಾರಣವೇನು?: ವಿವಾಹಿತನಾಗಿದ್ದರೂ ಸಹ ಸತೀಶ್ ವೆಂಕಟೇಶನ ಸಹೋದರಿಯೊಂದಿಗೆ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ವೆಂಕಟೇಶ್​ನ ಸಹೋದರಿಯ ಸಂಸಾರದಲ್ಲಿ ಬಿರುಕುಂಟಾಗಿತ್ತು. ಇತ್ತೀಚಿಗೆ ಸತೀಶ್​ನೊಂದಿಗೆ ಜಗಳ ಮಾಡಿಕೊಂಡಿದ್ದ ವೆಂಕಟೇಶನ ಸಹೋದರಿ ನಿನ್ನ ಸಹವಾಸವೇ ಬೇಡ, ನನ್ನ ಮನೆಗೆ ಬರಬೇಡ ಎಂದು ಹೇಳಿ ಬೈದಿದ್ದಾಳೆ. ಇಷ್ಟಾದರೂ ಸಹ ಪದೇ ಪದೇ ಸತೀಶ್​ ಆಕೆಯ ಮನೆ ಬಳಿ, ಆಕೆ ಕೆಲಸ ಮಾಡುವ ಟೀ ಅಂಗಡಿ ಬಳಿ ಹೋಗುತ್ತಿದ್ದ.

ಇದನ್ನೂ ಓದಿ: ಶೂಟೌಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ: ಹಳೇ ವೈಷಮ್ಯದಿಂದ ಕೊಲೆ, ತನಿಖೆಯಿಂದ ಬಹಿರಂಗ

ವಿಚಾರ ತಿಳಿದ ವೆಂಕಟೇಶ್ ಜನವರಿ 16 ರಂದು ಮಧ್ಯಾಹ್ನ ಸತೀಶ್​ನನ್ನು ಕೆಂಗೇರಿ ಉಪನಗರದ ಬಳಿ ಕರೆಯಿಸಿಕೊಂಡಿದ್ದ. ಬಳಿಕ ಅಲ್ಲಿಂದ ತನ್ನ ಆಟೋದಲ್ಲಿ ವಿಶ್ವೇಶ್ವರಯ್ಯ ಲೇಔಟಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನನ್ನ ತಂಗಿಯ ಸಹವಾಸಕ್ಕೆ ಬರಬೇಡ, ಆಕೆಗೆ ನೀನು ಕಾಟ ಕೊಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಆಟೋದಲ್ಲಿದ್ದ ಛತ್ರಿಯ ಚೂಪಾದ ತುದಿಯಿಂದ ಸತೀಶ್​ ಕೈಗೆ ತಿವಿದಿದ್ದ ಆರೋಪಿ ವೆಂಕಟೇಶ್, ಬಳಿಕ ಚಾಕುವಿನಿಂದ ಕೊಲೆಗೈದಿದ್ದ. ನಂತರ ಕೆಂಗೇರಿ ಠಾಣೆಗೆ ಬಂದು ತಾನೇ ಪೊಲೀಸರ ಮುಂದೆ ಶರಣಾಗಿದ್ದ. ಆರೋಪಿಯನ್ನು ಬಂಧಿಸಿರುವ ಕೆಂಗೇರಿ ಠಾಣೆ ಪೊಲೀಸರು, ಆತನಿಂದ ಕೃತ್ಯಕ್ಕೆ ಬಳಸಿದ್ದ ಆಟೋ, ಚಾಕುವನ್ನ ವಶಕ್ಕೆ ಪಡೆದಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಶಂಕೆ.. ಬೆಚ್ಚಿಬಿದ್ದ ಮಂಡ್ಯ ಜನತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.