ETV Bharat / state

ಯುವ ಉದ್ಯಮಿಗಳು ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳತ್ತ ಗಮನಹರಿಸಿ: ಅರವಿಂದ್‌ ಮೆಹ್ತಾ

author img

By

Published : Aug 10, 2023, 5:59 PM IST

''ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳತ್ತ ಯುವ ಉದ್ಯಮಿಗಳು ಗಮನಹರಿಸಬೇಕಿದೆ'' ಎಂದು ಆಲ್‌ ಇಂಡಿಯಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ ಆಡಳಿತ ಮಂಡಳಿಯ ಅಧ್ಯಕ್ಷ ಅರವಿಂದ್‌ ಮೆಹ್ತಾ ಸಲಹೆ ನೀಡಿದ್ದಾರೆ.

plastic manufacturing sector
4ನೇ ತಂತ್ರಜ್ಞಾನ ಸಮ್ಮೇಳನ

ಬೆಂಗಳೂರು: ''2021-22ನೇ ಸಾಲಿನಲ್ಲಿ ಭಾರತ ಸುಮಾರು 37,500 ಕೋಟಿ ರೂಪಾಯಿಗಳ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದು, ಈ ಆಮದಿನ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದ ವಿಪುಲ ಅವಕಾಶಗಳ ಕಡೆಗೆ ಯುವ ಉದ್ಯಮಿಗಳು ಗಮನ ಹರಿಸಬೇಕಿದೆ'' ಎಂದು ಆಲ್‌ ಇಂಡಿಯಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ ಆಡಳಿತ ಮಂಡಳಿಯ ಅಧ್ಯಕ್ಷ ಅರವಿಂದ್‌ ಮೆಹ್ತಾ ಕಿವಿಮಾತು ಹೇಳಿದರು.

ಇಂದು ನಗರದಲ್ಲಿ ನಡೆದ 4ನೇ ತಂತ್ರಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಅಖಿಲ ಭಾರತ ಪ್ಲಾಸ್ಟಿಕ್‌ ಉತ್ಪಾದಕರ ಸಂಘದ ಇತ್ತೀಚಿನ ಅಧ್ಯಯನದ ಪ್ರಕಾರ, 2021-22ರಲ್ಲಿ ಭಾರತ 37,500 ಕೋಟಿ ರೂಪಾಯಿ ಮೊತ್ತದ ಪ್ಲಾಸ್ಟಿಕ್‌ ಆಮದು ಮಾಡಿಕೊಂಡಿದೆ. ನೆರೆಯ ಚೀನಾ ದೇಶದಿಂದ ಶೇ 48ರಷ್ಟು ವಸ್ತುಗಳು ಆಮದಾಗುತ್ತಿವೆ. ಆಮದು ಅವಲಂಬನೆ ತಪ್ಪಿಸಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಐಪಿಎಂಎ ದೇಶದ 6 ವಲಯಗಳಲ್ಲಿ ಪ್ಲಾಸ್ಟಿಕ್‌ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ'' ಎಂದರು.

ತಂತ್ರಜ್ಞಾನಗಳ ವಿನಿಮಯ: ''ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳು ದೇಶದ ಪ್ಲಾಸ್ಟಿಕ್ ವಲಯಕ್ಕೆ ವೇಗವರ್ಧಕವಾಗಿವೆ. ಸಮ್ಮೇಳನ ತಂತ್ರಜ್ಞಾನ ಮತ್ತು ವ್ಯಾಪಾರ ಅವಕಾಶಗಳ ಕುರಿತು ಬೆಳಕು ಚೆಲ್ಲಲಿದೆ. ಪ್ರದರ್ಶನದಲ್ಲಿ ಆಮದು ಮಾಡಿಕೊಂಡ ವಸ್ತುಗಳ ಪ್ರದರ್ಶನದ ಜೊತೆಗೆ ಈ ವಲಯದಲ್ಲಿ ಆಗುತ್ತಿರುವ ಆಧುನಿಕ ಬೆಳವಣಿಗೆ ಕುರಿತು ಬೆಳಕು ಚೆಲ್ಲಲಾಗುತ್ತಿದೆ. ದೇಶ ಪ್ಲಾಸ್ಟಿಕ್ ವಲಯದಲ್ಲಿ ಸ್ವಾವಲಂಬಿಯಾಗುವ ಗುರಿ ಹೊಂದಿದ್ದು, ಇದಕ್ಕಾಗಿ ಇತ್ತೀಚಿನ ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ'' ಎಂದು ವಿವರಿಸಿದರು.

ಎಐಪಿಎಂಎ ಅಧ್ಯಕ್ಷ ಮಯೂರ್‌ ಡಿ. ಶಾ ಮಾತನಾಡುತ್ತಾ, ''ಭಾರತ ವಿಶ್ವದ ಪ್ರಮುಖ ಪ್ಲಾಸ್ಟಿಕ್ ಉತ್ಪಾದನಾ ತಾಣವಾಗಿ ಹೊರಹೊಮ್ಮಲು ಅವಕಾಶವಿದ್ದು, ವಾರ್ಷಿಕ 7 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಲಾಸ್ಟಿಕ್ ಉತ್ಪಾದಿಸುವ ಸಾಮರ್ಥ್ಯವಿದೆ. ಆರ್ಥಿಕತೆಯಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸಲಿದ್ದು, 50 ಸಾವಿರ ಪ್ಲಾಸ್ಟಿಕ್ ಸಂಸ್ಕರಣಾ ಕೇಂದ್ರಗಳ ಮೂಲಕ ಸರಕು ಉತ್ಪಾದಿಸಬಹುದಾಗಿದೆ. ಇದು ಈ ವಲಯದ ಶೇ 90 ರಷ್ಟು ಪ್ರಮಾಣವಾಗಿದೆ'' ಎಂದು ಮುನ್ನೋಟ ಬೀರಿದರು.

ದೇಶವನ್ನು 5 ಟ್ರಿಲಿಯನ್ ಡಾಲರ್ ಮೊತ್ತದ ಆರ್ಥಿಕತೆಯ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ಲಾಸ್ಟಿಕ್ ಕೈಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ. ಅಹಮದಾಬಾದ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಉತ್ಪಾದಕರು ಮತ್ತು ಮಾರಾಟಗಾರರ ನಡುವೆ ನೇರ ವೇದಿಕೆ ಕಲ್ಪಿಸಲಾಗಿತ್ತು. ಇದು ಹಲವಾರು ತಂತ್ರಜ್ಞಾನ ಮತ್ತು ನಾವೀನ್ಯತೆಯ ಮಾದರಿಗಳನ್ನು ಆಮದು ಮಾಡಿಕೊಳ್ಳಲು ಸಹಕಾರಿಯಾಗಲಿದೆ'' ಎಂದು ಮಯೂರ್‌ ಶಾ ನುಡಿದರು.

ಕ್ಲಸ್ಟರ್‌ ಬೇಸ್ಡ್‌ ಕೈಗಾರಿಕಾ ಘಟಕಗಳು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿ.ಎ. ಶಶಿಧರ ಶೆಟ್ಟಿ ಮಾತನಾಡಿ, ''ರಾಜ್ಯದಲ್ಲಿರುವ ಹಲವಾರು ಸಣ್ಣ ಕೈಗಾರಿಕೆಗಳು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುತ್ತಿವೆ. ಆದರೆ, ಜನರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಉತ್ಪಾದಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಏಕಬಳಕೆ ಪ್ಲಾಸ್ಟಿಕ್‌ ಮಾತ್ರ ಬ್ಯಾನ್‌ ಆಗಿದ್ದು, ಬಹುಬಳಕೆಯ ಮತ್ತು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಕೈಗಾರಿಕಾ ನೀತಿಯಲ್ಲಿ ಪ್ಲಾಸ್ಟಿಕ್‌ ಕೈಗಾರಿಕೆಗಳ ಯಾವುದೇ ಪ್ರಸ್ತಾಪ ಇಲ್ಲ. ಕ್ಲಸ್ಟರ್‌ ಬೇಸ್ಡ್‌ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಅವಕಶ್ಯತೆಯಿದೆ. ಪ್ಲಾಸ್ಟಿಕ್‌ ಕ್ಲಸ್ಟರ್‌ ನಿರ್ಮಾಣದಿಂದ ಹಲವಾರು ಕೈಗಾರಿಕೆಗಳಿಗೆ ಅನುಕೂಲವಾಗಿಲಿದೆ'' ಎಂದರು.

ರಾಜ್ಯದಲ್ಲಿ ಹೂಡಿಕೆಗೆ ವ್ಯಾಪಕವಾದ ಅವಕಾಶ: ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಮಾತನಾಡಿ, ''ರಾಜ್ಯದಲ್ಲಿ ಹೂಡಿಕೆಗೆ ವ್ಯಾಪಕವಾದ ಅವಕಾಶವಿದೆ. ಸಣ್ಣ ಕೈಗಾರಿಕೆಗಳಿಗೂ ರಾಜ್ಯದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸಬ್ಸಿಡಿ ಹಾಗೂ ಹಲವಾರು ಆಕರ್ಷಕ ಯೋಜನೆಗಳನ್ನು ಅಳವಡಿಸಲಾಗಿದೆ. ಏಕಬಳಕೆಯ ಪ್ಲಾಸ್ಟಿಕ್‌ ಹೊರತುಪಡಿಸಿ ಬೇರೆ ಉತ್ಪನ್ನಗಳ ತಯಾರಿಕೆಗೆ ಯಾವುದೇ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ಲಾಸ್ಟಿಕ್‌ ಉದ್ಯಮವನ್ನು ಪ್ರಾರಂಭಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಉದ್ಯೋಗ ಮಿತ್ರ ಸಂಪರ್ಕಿಸಬೇಕು'' ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ಲಾಸ್ಟಿಕ್‌ ಉತ್ಪಾದಕರು ಭಾಗವಹಿಸಿದ್ದರು.

ಮುಂದಿನ ಸಮ್ಮೇಳನಗಳು: ನಾಲ್ಕನೇ ಸಮ್ಮೇಳನ ವ್ಯಾಪಾರ ಮತ್ತು ಉತ್ಪಾದನೆಯ ಮಾರ್ಗನಕ್ಷೆಯನ್ನು ರೂಪಿಸಲಿದೆ. ಮುಂದಿನ ಸಮ್ಮೇಳನಗಳು ಆಗಸ್ಟ್ 18 ರಂದು ಚೆನ್ನೈ ಮತ್ತು ಆಗಸ್ಟ್ 31 ರಂದು ಕೊಲ್ಕತ್ತಾದಲ್ಲಿ ನಡೆಯಲಿವೆ.

ಇದನ್ನೂ ಓದಿ: ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಮುಂದುವರೆದ ಬಿಜೆಪಿ ನಾಯಕರ ಭೇಟಿ.. ಅಶೋಕ್ ಸಹಕಾರ ಕೋರಿದ ಅಧ್ಯಕ್ಷ ಕೆಟಿ ಮಂಜುನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.