ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಯೋಗಾಭ್ಯಾಸ ಮಾಡಿದರು. ಇಡೀ ವಿಶ್ವವೇ ಇಂದು ಯೋಗ ದಿನ ಆಚರಿಸುತ್ತಿದ್ದು, ಆರನೇ ವರ್ಷದ ಯೋಗ ದಿನಾಚರಣೆಯಲ್ಲಿ ರಾಜ್ಯಪಾಲರು ಭಾಗಿಯಾದರು.
![Bangalore](https://etvbharatimages.akamaized.net/etvbharat/prod-images/kn-bng-02-governor-yoga-day-script-7208080_21062020084012_2106f_1592709012_167.jpg)
ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಯೋಗಾಚರಣೆಯನ್ನು ಸರ್ಕಾರ ಆಚರಿಸದೇ ಇದ್ದರೂ ವೈಯಕ್ತಿಕವಾಗಿ ಯೋಗಾಭ್ಯಾಸವನ್ನು ನಡೆಸಲಾಗುತ್ತಿದೆ. ಬಿಜೆಪಿ ಕಚೇರಿಯಲ್ಲಿ ಕೆಲವರಿಂದ ಮಾತ್ರ ಯೋಗ ನಡೆದರೆ ರಾಜಭವನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಒಬ್ಬರೇ ಯೋಗಾಭ್ಯಾಸ ಮಾಡಿದರು.