ETV Bharat / state

ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯ: ಎರಡು ದಿನ ಗಣೇಶ ಮೂರ್ತಿ ನಿಮಜ್ಜನ ಬಂದ್ - ಈಟಿವಿ ಭಾರತ್​ ಕನ್ನಡ

ಯಡಿಯೂರು ಕೆರೆ ಸ್ವಚ್ಛತಾ ಕಾರ್ಯ ಇರುವುದರಿಂದ ಸೆಪ್ಟಂಬರ್ 5 ಮತ್ತು 12 ರಂದು ನಿಮಜ್ಜನ ಕೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಪಾಲಿಕೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

yediyuru-lake-ganesha-idol-immersion-closed-in-bangalore
ಪಾಲಿಕೆಯ ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯ
author img

By

Published : Sep 3, 2022, 12:20 PM IST

ಬೆಂಗಳೂರು : ನಗರದ ಪ್ರಮುಖ ಯಡಿಯೂರು ಕೆರೆ ಕಲ್ಯಾಣಿಯಲ್ಲಿ ಸಾಕಷ್ಟು ಗಣೇಶ ಮೂರ್ತಿಗಳನ್ನು ಈಗಾಗಲೇ ನಿಮಜ್ಜನ ಮಾಡಿರುವುದರಿಂದ ಕಲ್ಯಾಣಿಯ ಬಹುಪಾಲು ಭಾಗವು ತುಂಬಿದೆ. ಹೀಗಾಗಿ ಎರಡು ದಿನ ಗಣೇಶ ಮೂರ್ತಿಗಳ ನಿಮಜ್ಜನ ಬಂದ್ ಮಾಡಲಾಗುವುದು ಎಂದು ಪಾಲಿಕೆ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಾಲಿಕೆ, ಗಣೇಶ ಮೂರ್ತಿ ನಿಮಜ್ಜನೆಗೆ ಸ್ಥಳಾವಕಾಶ ಇಲ್ಲದಿರುವುದರಿಂದ ನಿಮಜ್ಜನ ಕೊಳದಲ್ಲಿ ತುಂಬಿರುವ ಮಣ್ಣು ಮತ್ತು ಇತರ ಗಣೇಶ ಮೂರ್ತಿಗಳ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಹೊಸದಾಗಿ ನೀರು ತುಂಬಿಸಿ ಸಾರ್ವಜನಿಕರಿಗೆ ಗಣೇಶ ಮೂರ್ತಿ ನಿಮಜ್ಜನ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಬೇಕಿದೆ ಎಂದು ಹೇಳಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವಾರ್ಡ್ ಸಂಖ್ಯೆ 167 ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಗಣೇಶ ನಿಮಜ್ಜನ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಕಲ ಸಿದ್ಧತೆಯೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೊದಲು ಆಗಸ್ಟ್ 31 ರಿಂದ ಸೆಪ್ಟೆಂಬರ್ 15 ರವರೆಗೆ ಸಾರ್ವಜನಿಕರು ಗಣೇಶ ಮೂರ್ತಿಗಳ ನಿಮಜ್ಜನ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂದು ಮಾಹಿತಿ ನೀಡಿದೆ.

yediyuru lake ganesha idol immersion closed  in Bangalore
ಪಾಲಿಕೆಯ ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯ

ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ: ಸದ್ಯ ಸೆಪ್ಟಂಬರ್ 5 ಮತ್ತು 12 ರಂದು ನಿಮಜ್ಜನ ಕೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಕೊಳದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಈ ದಿನಗಳಂದು ಗಣೇಶ ಮೂರ್ತಿಗಳ ನಿಮಜ್ಜನೆಗೆ ಅವಕಾಶ ಇರುವುದಿಲ್ಲ. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ : ರಾಜಧಾನಿಯಲ್ಲಿ ಸೆಪ್ಟೆಂಬರ್ 1 ರಂದು 45 ಸಾವಿರ ಗಣೇಶ ಮೂರ್ತಿಗಳ ನಿಮಜ್ಜನ: ಬಿಬಿಎಂಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.