ETV Bharat / state

ಬೆಂಗಳೂರು: ಅರಮನೆ ಮೈದಾನದಲ್ಲಿ ನಾಳೆಯಿಂದ 4 ದಿನ ವಿಶ್ವ ಕಾಫಿ ಸಮ್ಮೇಳನ - ವಿಶ್ವ ಕಾಫಿ ಸಮ್ಮೇಳನ 2023

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.25 ರಿಂದ 28ರವರೆಗೆ ವಿಶ್ವ ಕಾಫಿ ಸಮ್ಮೇಳನ ನಡೆಯಲಿದೆ.

World coffee conference
ವಿಶ್ವ ಕಾಫಿ ಸಮ್ಮೇಳನ
author img

By ETV Bharat Karnataka Team

Published : Sep 24, 2023, 10:05 AM IST

Updated : Sep 24, 2023, 11:14 AM IST

ಬೆಂಗಳೂರು: ನಾಳೆಯಿಂದ ಸೆಪ್ಟೆಂಬರ್‌ 28 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅರಮನೆ ಮೈದಾನದ ಆವರಣದಲ್ಲಿ ವಿಶ್ವ ಕಾಫಿ ಸಮ್ಮೇಳನ-2023 ನಡೆಯಲಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 5ನೇ ವಿಶ್ವ ಕಾಫಿ ಸಮ್ಮೇಳನ ಏರ್ಪಾಡಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕರ್ನಾಟಕ ಸರ್ಕಾರ ಮತ್ತು ಕಾಫಿ ಉದ್ಯಮದ ಸಹಯೋಗದೊಂದಿಗೆ ಸಮ್ಮೇಳನ ನಡೆಯಲಿದೆ. ಕಾಫಿ ಬೀಜದಿಂದ ಕಪ್‌ವರೆಗೆ ಸುಸ್ಥಿರ ಕಾಫಿ ಉದ್ಯಮವನ್ನು ನಿರ್ಮಿಸುವುದರ ಬಗ್ಗೆ ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಗುತ್ತದೆ ಎಂದು ಭಾರತೀಯ ಕಾಫಿ ಮಂಡಳಿಯ ಸಿಇಒ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್ ತಿಳಿಸಿದರು.

80ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ: ಸಮ್ಮೇಳನಕ್ಕಾಗಿ ಅರಮನೆ ಆವರಣದಲ್ಲಿ ಸುಸಜ್ಜಿತವಾದ ವೇದಿಕೆ ಮತ್ತು ಪ್ರದರ್ಶನ ಮಳೆಗೆಗಳನ್ನು ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಎಂಬತ್ತಕ್ಕೂ ಹೆಚ್ಚು ದೇಶಗಳಿಂದ 2,400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾಫಿ ಉದ್ಯಮ ಕುರಿತಂತೆ 117 ಜನ ತಜ್ಞರು ಭಾಷಣ ಮಾಡಲಿದ್ದಾರೆ. 208 ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಭಾರತದ ವಿವಿಧ ಕಾಫಿ ಪ್ರಭೇದಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ.

ಸಮ್ಮೇಳನದಲ್ಲಿ ಭಾಷಣಕಾರರು ಮತ್ತು ಕಾಫಿ ಸಮುದಾಯದ ಪ್ರಮುಖರು "ವೃತ್ತಾತ್ಮಕ ಆರ್ಥಿಕತೆ ಮತ್ತು ಪುನರುತ್ಪಾದಕ ಕೃಷಿಯ ಮೂಲಕ ಸುಸ್ಥಿರತೆ" ಎಂಬ ವಿಷಯದ ಕುರಿತು ಚರ್ಚಿಸಲಿದ್ದಾರೆ. ಐಸಿಒ ರಾಷ್ಟ್ರ ಪ್ರತಿನಿಧಿಗಳು, ಕಾಫಿ ಬೆಳೆಗಾರರು, ಕಾಫಿ ರೋಸ್ಟರ್‌ಗಳು, ಕಾಫಿ ಕ್ಯೂರರ್ಸ್, ಕೆಫೆ ಮಾಲೀಕರು, ಕಾಫಿ ರಾಷ್ಟ್ರಗಳು, ನೀತಿ ತಯಾರಕರು, ಸ್ಟಾರ್ಟ್-ಅಪ್ಸ್, ಮತ್ತು ಕಾಫಿ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ರುಚಿಕರ ಕಾಫಿ ಜೊತೆ ಚರ್ಚೆ: ಕಾಫಿ ಮ್ಯೂಸಿಯಂ ಮತ್ತು ಪಶ್ಚಿಮ ಘಟ್ಟಗಳ ಕಾಫಿ ತೋಟದ ಪ್ರದರ್ಶನವನ್ನು ಹೊಂದಿರುವ ಗುಮ್ಮಟ-ಆಕಾರದ ರಚನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಕಾಫಿ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ವಿದೇಶಿ ಪ್ರತಿನಿಧಿಗಳಿಗೆ ಭಾರತದ ಬೆಳೆದ ಕಾಫಿಗಳ ವಿಶಿಷ್ಟ-ವೈಶಿಷ್ಟ್ಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. 4 ದಿನಗಳ ಸಮ್ಮೇಳನದಲ್ಲಿ ಆಕರ್ಷಕ ಸೆಷನ್‌ಗಳು, ಕಾಫಿ ರುಚಿಗಳು, ಸ್ಪರ್ಧೆಗಳು, ಪ್ಯಾನಲ್ ಚರ್ಚೆಗಳು ಮತ್ತು ಅತ್ಯಾಧುನಿಕ ಕಾಫಿ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುವ ಪ್ರದರ್ಶನ ಒಳಗೊಂಡಿರುತ್ತದೆ.

ಇದನ್ನೂ ಓದಿ: ಕೆಫೀನ್​ ಪರಿಣಾಮದ ಹೊರತಾಗಿಯೂ ಮಿದುಳಿಗೆ ಉತ್ತೇಜನ ನೀಡುತ್ತದೆ ಕಾಫಿ

Last Updated : Sep 24, 2023, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.