ETV Bharat / state

ಅನುಮಾನಾಸ್ಪದ ವಸ್ತು ಪತ್ತೆಯಾದಾಗ ಏನ್ ಮಾಡ್ಬೇಕು: ಬಾಂಬ್ ನಿಷ್ಕ್ರಿಯ ದಳದಿಂದ ಪೊಲೀಸರಿಗೆ ಕಾರ್ಯಾಗಾರ

ಪ್ರಮುಖ ನಗರಗಳಲ್ಲಿ ಬಾಂಬ್ ಪತ್ತೆಯಾದಾಗ ಏನು ಮಾಡಬೇಕು, ‌ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಯಾವ ಯಾವ ಆಯುಧಗಳಿವೆಯೋ ಅದನ್ನು ಬಾಂಬ್ ನಿಷ್ಕ್ರಿಯಗೊಳಿಸಲು ಹೇಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಪೊಲೀಸರಿಗೆ ತಿಳಿಸಿಕೊಡಲಾಯಿತು.

ಬಾಂಬ್ ನಿಷ್ಕ್ರಿಯ ದಳದಿಂದ ಪೊಲೀಸರಿಗೆ ಕಾರ್ಯಾಗಾರ
author img

By

Published : Oct 25, 2019, 4:58 PM IST

ಬೆಂಗಳೂರು: ಅನುಮಾನಾಸ್ಪದ ವಸ್ತುಗಳು ಪತ್ತೆಯಾದಾಗ ಅಥವಾ ಬಾಂಬ್ ಸ್ಫೋಟಗಳು ನಡೆದಾಗ ಪೊಲೀಸರು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ರಿಚ್​ಮಂಡ್ ರಸ್ತೆಯಲ್ಲಿರುವ ಕೆಎಸ್ಆರ್​ಪಿ ಕವಾಯತು ಮೈದಾನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಇತ್ತೀಚೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ ಹಿನ್ನೆಲೆ, ಹೈಅಲರ್ಟ್ ಆಗಿರುವ ಪೊಲೀಸರು‌ ಮುಂಜಾಗ್ರತಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ರು. ಪ್ರಮುಖ ನಗರಗಳಲ್ಲಿ ಬಾಂಬ್ ಪತ್ತೆಯಾದಾಗ ಏನು ಮಾಡಬೇಕು, ‌ಯಾವ ರೀತಿ ಪರಿಸ್ಥಿತಿಯನ್ನು ನಿಭಾಯಿಸಬೇಕು, ಯಾವ ಯಾವ ಆಯುಧಗಳಿರುತ್ತವೆ, ಅದನ್ನು ಬಾಂಬ್ ನಿಷ್ಕ್ರಿಯ ಗೊಳಿಸಲು ಹೇಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಡೆಮೋ ನೀಡಲಾಯಿತು.

ಈ ಹಿಂದೆ ಬೆಂಗಳೂರಿನ ಮಡಿವಾಳ, ಚರ್ಚ್ ಸ್ಟ್ರೀಟ್ ಹಾಗೂ ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದವು. ಇತ್ತೀಚೆಗಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯಲ್ಲಿ ಜೆಎಂಬಿ ಉಗ್ರರ ಬಂಧನವಾಗಿತ್ತು‌. ಇಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಐಎಸ್ ಡಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗುಪ್ತಚರ ಇಲಾಖೆಯ ಎಡಿಜಿಪಿ ಕಮಲ್ ಪಂತ್​, ಸಿಐಡಿ ಮುಖ್ಯಸ್ಥ ಪ್ರವೀಣ್ ಸೂದ್‌, ಎಲ್ಲಾ ವಿಭಾಗದ ಡಿಸಿಪಿಗಳು ಹಾಗೂ ನೂರಾರು ಮಂದಿ ಪೊಲೀಸರು ಭಾಗಿಯಾಗಿದ್ದರು.

Intro:Body:ಬಾಂಬ್ ಸ್ವ್ಕಾಡ್ ನಿಂದ ಕಾರ್ಯಾಗಾರ: ಅನುಮಾನಸ್ಪಾದ ವಸ್ತು ಪತ್ತೆಯಾದಾಗ ಹೇಗೆ ಕಾರ್ಯನಿರ್ವಹಿಸಬೇಕೆಂದು ಪ್ರಾತ್ಯಕ್ಷಿಕೆ‌ ನೀಡಿದ ಅಧಿಕಾರಿಗಳು

ಬೆಂಗಳೂರು: ಭವಿಷ್ಯದಲ್ಲಿ ಬಾಂಬ್ ಸ್ಪೋಟಗಳು ನಡೆದಾಗ ಬಾಂಬ್ ನಿಷ್ಕಿಯ ದಳ ವತಿಯಿಂದ ಪೊಲೀಸರು ಹೇಗೆ ಕಾರ್ಯ ನಿರ್ವಹಿಸಬೇಕೆಂಬುದರ ಬಗ್ಗೆ ರಿಚ್ ಮಂಡ್ ರಸ್ತೆಯಲ್ಲಿರುವ ಕೆಎಸ್ಆರ್ ಪಿ ಕವಾಯತು ಮೈದಾನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಹುಬ್ಬಳ್ಳಿಯಲ್ಲಿ ಅನುಮಾನಸ್ಪಾದ ವಸ್ತು ಸ್ಫೋಟ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆಗಿರುವ ರಾಜ್ಯ ಪೊಲೀಸರು‌ ಮುಂಜಾಗ್ರತ ಕ್ರಮವಾಗಿ ಬಾಂಬ್ ನಿಷ್ಕಿಯ ದಳದ ಅಧಿಕಾರಿಗಳ ಪೊಲೀಸರಿಗೆ ಮಾಹಿತಿ ನೀಡಿದರು.
ಪ್ರಮುಖ ನಗರಗಳಲ್ಲಿ ಬಾಂಬ್ ಪತ್ತೆಯಾದಾಗ ಏನು ಮಾಡಬೇಕು..‌ಯಾವ ರೀತಿ ಸ್ಯೂಚಿವೇಷನ್ ಹ್ಯಾಂಡಲ್ ಮಾಡಬೇಕು. ನಮ್ಮಲ್ಲಿ ಯಾವ ಯಾವ ಆಯುಧಗಳಿವೆ..‌ ಅದನ್ನು ಬಾಂಬ್ ನಿಷ್ಕಿಯಗೊಳಿಸಲು ಹೇಗೆ ಬಳಸಲಾಗುತ್ತೆ ಎಂಬುದರ ಬಗ್ಗೆ ಡೆಮೊ‌ ನೀಡಿದರು.
ಸಾರ್ವಜನಿಕರು ಅನುಮಾನಸ್ಪಾದ ವಸ್ತುಗಳು ಕಂಡು ಬಂದರೆ ಯಾವುದೇ ಕಾರಣಕ್ಕೂ ಯಾವುದೇ ವಸ್ತುವನ್ನು ಮುಟ್ಟದಂತೆ ಪೊಲೀಸರು ನೋಡಿಕೊಳ್ಳಬೇಕು.. ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ಬಗ್ಗೆ ಕಾರ್ಯಾಗಾರದಲ್ಲಿ ಪೊಲೀಸರಿಗೆ ತಿಳಿಸಿಕೊಡಲಾಯಿತು.
ಈ ಹಿಂದೆ ಮಡಿವಾಳ, ಚರ್ಚ್ ಸ್ಟ್ರೀಟ್ ಹಾಗೂ ಮಲೇಶ್ವರಂ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದವು. ಹಾಗೇ ಇತ್ತೀಚೆಗಷ್ಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯಲ್ಲಿ ಜೆಎಂಬಿ ಉಗ್ರರ ಬಂಧನವಾಗಿತ್ತು‌. ಇಂತಹ ಘಟನೆ ಗಮನದಲ್ಲಿಟ್ಟುಕೊಂಡು ಐಎಸ್ ಡಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಈ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗುಪ್ತಚರ ಇಲಾಖೆಯ ಎಡಿಜಿಪಿ ಕಮಲ್ ಪಂತ್, ಸಿಐಡಿ ಮುಖ್ಯಸ್ಥ ಪ್ರವೀಣ್ ಸೂದ್‌, ಎಲ್ಲಾ ವಿಭಾಗದ ಡಿಸಿಪಿಗಳು ಹಾಗೂ ನೂರಾರು ಮಂದಿ ಪೊಲೀಸರು ಭಾಗಿಯಾಗಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.