ಬೆಂಗಳೂರು: ನಗರದ ಮಹಿಳಾ ವಿಜ್ಞಾನಿ ಪ್ರೊಫೆಸರ್ ರೋಹಿಣಿ ಗೋಡ್ಬೋಲೆ ಅವರಿಗೆ ಫ್ರಾನ್ಸ್ ದೇಶದ ಅತ್ಯುನ್ನತ ಗೌರವ ಆರ್ಡ್ರೆ ನ್ಯಾಷನಲ್ ಡಿ ಮೆರಿಟ್ ಪ್ರಶಸ್ತಿಗೆ ನೀಡಿ ಗೌರವಿಸಲಾಗಿದೆ.
ಫ್ರಾನ್ಸ್ ಮತ್ತು ಭಾರತ ಸಹಯೋಗಗಳಿಗೆ ನೀಡಿದ ಕೊಡುಗೆಗಳಿಗಾಗಿ ಮತ್ತು ವಿಜ್ಞಾನದಲ್ಲಿ ಮಹಿಳೆಯರ ದಾಖಲಾತಿಯನ್ನು ಉತ್ತೇಜಿಸಿರುವ ಬದ್ಧತೆಗಾಗಿ ಅವರನ್ನು ಗುರುತಿಸಿ ಗೌರವಿಸಲಾಗಿದೆ.
ಓದಿ: ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’
ಪ್ರೊಫೆಸರ್ ರೋಹಿಣಿ ಗೋಡ್ಬೋಲೆ ಭಾರತೀಯ ಭೌತಶಾತ್ರಜ್ಞರು ಮತ್ತು ಶೈಕ್ಷಣಿಕ ತಜ್ಞರಾಗಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಹೈ ಎನಿರ್ಜಿ ಫಿಸಿಕ್ಸ್ ಸೆಂಟರ್ನ ಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಕಣ ವಿದ್ಯಮಾನದ ವಿವಿಧ ಅಂಶಗಳ ಬಗ್ಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.