ETV Bharat / state

ಬಿಜೆಪಿಗೆ ಮೇಯರ್​​​ ಸ್ಥಾನ ಸಿಕ್ಕರೂ ಸಿಎಂ ಬಿಎಸ್​ವೈಗೆ ಹಿನ್ನಡೆ? - CM BSY backs up in party

ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆದ ತಕ್ಷಣದಿಂದಲೇ ಪಕ್ಷದಲ್ಲಿ ಅವರ ಪ್ರಭಾವ ತಗ್ಗಿಸುವ ಕೆಲಸ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಟೀಲ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಪಕ್ಷದ ನೇಮಕಾತಿಯಲ್ಲಿ ಬಿಎಸ್​ವೈ ವಿರೋಧಿ ಬಣದವರಿಗೆ ಮಣೆ ಹಾಕಿ ಪಕ್ಷದ ಸಂಪೂರ್ಣ ನಿಯಂತ್ರಣ ಪಡೆಯಲು ಹೊರಟಿದ್ದಾರೆ ಎನ್ನಲಾಗ್ತಿದೆ.

ಬಿ.ಎಸ್. ಯಡಿಯೂರಪ್ಪ
author img

By

Published : Oct 1, 2019, 4:10 PM IST

ಬೆಂಗಳೂರು: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಯಂತ್ರಣ ತಗ್ಗಿಸುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಮೇಲುಗೈ ಸಾಧಿಸಿದ್ದು, ಅವರು ಹೆಣೆದ ತಂತ್ರದಿಂದ ಬಿಎಸ್​​ವೈ ಸಾಲು ಸಾಲು ಹಿನ್ನಡೆ ಅನುಭವಿಸಬೇಕಾಗಿದೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ.

ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆದ ತಕ್ಷಣದಿಂದಲೇ ಪಕ್ಷದಲ್ಲಿ ಅವರ ಪ್ರಭಾವ ತಗ್ಗಿಸುವ ಕೆಲಸ ಆರಂಭವಾಗಿದೆ ಎನ್ನಲಾಗ್ತಿದೆ. ಸಚಿವ ಸಂಪುಟ ವಿಸ್ತರಣೆ, ಡಿಸಿಎಂ ಸ್ಥಾನ, ಖಾತೆಗಳ ಹಂಚಿಕೆ ಎಲ್ಲದರಲ್ಲಿಯೂ ಹೈಕಮಾಂಡ್ ನೇರ ಹಸ್ತಕ್ಷೇಪ ಮಾಡಿತ್ತು.

ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿಯೂ ಬಿಎಸ್​​ವೈಗೆ ಹಿನ್ನಡೆಯಾಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸುವ ಒಲವು ಹೊಂದಿದ್ದ ಬಿಎಸ್​​ವೈಗೆ ನಳಿನ್ ಕುಮಾರ್ ಕಟೀಲ್​ ಅವರನ್ನು ನೇಮಕಗೊಳಿಸಿ ಹೈಕಮಾಂಡ್ ಆದೇಶ ಹೊರಡಿಸುವ ಮೂಲಕ ಶಾಕ್ ನೀಡಿತ್ತು.

ಪಕ್ಷದ ಶಿಸ್ತಿನ ಸಿಪಾಯಿ, ಮೂಲ ಪಕ್ಷದವರು ಮತ್ತು ಸಂಘ ಪರಿವಾರದ ಹಿನ್ನೆಲೆ ಇರುವವರನ್ನು ನೇಮಿಸಬೇಕು ಎಂದು ಬಿ.ಎಲ್.ಸಂತೋಷ್ ಸಲಹೆಯ ಮೇರೆಗೆ ಕಟೀಲ್​​ಗೆ ಹೈಕಮಾಂಡ್ ಮಣೆ ಹಾಕಿತ್ತು. ದಕ್ಷಿಣ ಭಾರತದ ಸಂಘಟನೆ ಜವಾಬ್ದಾರಿ ಸಂತೋಷ್ ಮೇಲಿರುವ ಕಾರಣ ಅವರ ಶಿಫಾರಸು ಬಹುತೇಕ ಫೈನಲ್. ಹಾಗಾಗಿ ಕಟೀಲ್​ಗೆ ಅಧ್ಯಕ್ಷ ಸ್ಥಾನ ಒಲಿದುಬಂದಿದೆ.

ಕಟೀಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಪಕ್ಷದ ನೇಮಕಾತಿಯಲ್ಲಿ ಬಿಎಸ್​ವೈ ವಿರೋಧಿ ಬಣದವರಿಗೆ ಮಣೆ ಹಾಕಿ ಪಕ್ಷದ ಸಂಪೂರ್ಣ ನಿಯಂತ್ರಣ ಪಡೆಯಲು ಹೊರಟಿದ್ದಾರೆ. ವಿಜಯೇಂದ್ರಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುತ್ತದೆ ಎನ್ನುವಾಗಲೇ ಆ ಜಾಗಕ್ಕೆ ಮಹೇಶ್ ಟೆಂಗಿನಕಾಯಿ ಅವರನ್ನು ನೇಮಿಸಿ ಆದೇಶ ಹೊರಡಿಸಿದರು. ನಂತರ ಬಿಎಸ್​ವೈ ಉಚ್ಛಾಟನೆ ಮಾಡಿದ್ದ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರನ್ನು ಪುನಃ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಕಟೀಲ್ ನೇಮಕ ಮಾಡಿ ಆದೇಶ ಹೊರಡಿಸಿ ಪಕ್ಷದಲ್ಲಿ ಬಿಎಸ್​​ವೈ ಬಲ ಕುಗ್ಗುವಂತೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಇನ್ನು ಮೇಯರ್ ಚುನಾವಣೆ ವಿಷಯದಲ್ಲಿ ಮೇಯರ್ ಪಟ್ಟ ಬಿಜೆಪಿಗೆ ದಕ್ಕಿದರೂ ಜಿಲ್ಲಾ ಉಸ್ತುವಾರಿ ಆಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪಗೆ ದೊಡ್ಡ ಹಿನ್ನಡೆಯಾಗಿದೆ. ಮೇಯರ್ ಅಭ್ಯರ್ಥಿ ಆಯ್ಕೆಗೆ ಶಾಸಕ ರಘು ನೇತೃತ್ವದ ಸಮಿತಿಯನ್ನು ಸಿಎಂ ರಚನೆ ಮಾಡಿದರೂ ಯಾವುದೇ ಸಮಿತಿ ರಚನೆಯಾಗಿಲ್ಲ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವ ಮೂಲಕ ಪಕ್ಷದ ವಿಚಾರದಲ್ಲಿ ಸಿಎಂ ಆದೇಶಕ್ಕೆ ಬೆಲೆ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿದರು. ಇದಾದ ನಂತರ ಮೇಯರ್ ಆಯ್ಕೆ ವಿಚಾರದಿಂದ ಸಿಎಂ ಹಿಂದೆ ಸರಿದರು. ನಂತರ ಯಡಿಯೂರಪ್ಪ, ಅಶೋಕ್, ಸೋಮಣ್ಣ ಬೆಂಬಲಿತ ಅಭ್ಯರ್ಥಿಗಳಿಗೆ ಮಣೆ ಹಾಕದೇ ಸಂಘದ ಹಿನ್ನೆಲೆಯುಳ್ಳ ಗೌತಮ್ ಕುಮಾರ್ ಜೈನ್​ರನ್ನು‌ ರಾತ್ರೋರಾತ್ರಿ ಆಯ್ಕೆ ಮಾಡಲಾಗಿದೆ.

ರಾಜ್ಯದಲ್ಲಿ ವ್ಯಕ್ತಿ ಹಿಡಿತದಿಂದ ಸಂಘಟನೆ ಹಿಡಿತಕ್ಕೆ ಪಕ್ಷವನ್ನು ತರಬೇಕು ಎನ್ನುವ ಸಂಘ ಪರಿವಾರದ ನಿರ್ದೇಶನದಂತೆ ಸಂತೋಷ್ ತಂತ್ರ ರೂಪಿಸುತ್ತಿದ್ದು, ಪಕ್ಷದಲ್ಲಿ ಬಿಎಸ್​​ವೈ ಬಲ ಕ್ಷೀಣಿಸುವಂತೆ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

Intro:

ಬೆಂಗಳೂರು: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಯಂತ್ರಣ ತಗ್ಗಿಸುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್ ಮೇಲುಗೈ ಸಾಧಿಸಿದ್ದು,ಅವರು ಹೆಣೆದ ತಂತ್ರದಿಂದ ಬಿಎಸ್ವೈ ಸಾಲು ಸಾಲು ಹಿನ್ನಡೆ ಅನುಭವಿಸಬೇಕಾಗಿದೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿವೆ.

ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆದ ತಕ್ಷಣದಿಂದಲೇ ಪಕ್ಷದಲ್ಲಿ ಅವರ ಪ್ರಭಾವ ತಗ್ಗಿಸುವ ಕೆಲಸ ಆರಂಭವಾಗಿದೆ.ಸಚಿವ ಸಂಪುಟ ವಿಸ್ತರಣೆ, ಡಿಸಿಎಂ ಸ್ಥಾನ, ಖಾತೆಗಳ ಹಂಚಿಕೆ ಎಲ್ಲದರಲ್ಲಿಯೂ ಹೈಕಮಾಂಡ್ ನೇರ ಹಸ್ತಕ್ಷೇಪ ಮಾಡಿತ್ತು.

ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿಯೂ ಬಿಎಸ್ವೈ ಗೆ ಹಿನ್ನಡೆಯಾಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಿವ ಒಲವು ಹೊಂದಿದ್ದ ಬಿಎಸ್ವೈ ಗೆ ನಳಿನ್ ಕುಮಾರ್ ನೇಮಕಗೊಳಿಸಿ ಹೈಕಮಾಂಡ್ ಆದೇಶ ಹೊರಡಿಸುವ ಮೂಲಕ ಶಾಕ್ ನೀಡಿತ್ತು.

ಪಕ್ಷದ ಶಿಸ್ತಿನ ಸಿಪಾಯಿ, ಮೂಲ ಪಕ್ಷದವರು ಮತ್ತು ಸಂಘ ಪರಿವಾರದ ಹಿನ್ನಲೆ ಇರುವವರನ್ನು ನೇಮಿಸಬೇಕು ಎಂದು ಬಿ.ಎಲ್ ಸಂತೋಷ್ ಸಲಹೆಯ ಮೇರೆಗೆ ಕಟೀಲ್ ಗೆ ಹೈಕಮಾಂಡ್ ಮಣೆ ಹಾಕಿತ್ತು.ದಕ್ಷಿಣ ಭಾರತದ ಸಂಘಟನೆ ಜವಾಬ್ದಾರಿ ಸಂತೋಷ್ ಮೇಲಿರುವ ಕಾರಣ ಅವರ ಶಿಫಾರಸ್ಸು ಬಹುತೇಕ ಫೈನಲ್ ಹಾಗಾಗಿ ಕಟೀಲ್ ಗೆ ಅಧ್ಯಕ್ಷ ಸ್ಥಾನ ಒಲಿದುಬಂದಿದೆ.

ಕಟೀಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಪಕ್ಷದ ನೇಮಕಾತಿಯಲ್ಲಿ ಬಿಎಸ್ವೈ ವಿರೋಧಿ ಬಣದವರಿಗೆ ಮಣೆ ಹಾಕಿ ಪಕ್ಷದ ಸಂಪೂರ್ಣ ನಿಯಂತ್ರಣ ಪಡೆಯಲು ಹೊರಟಿದ್ದಾರೆ.ವಿಜಯೇಂದ್ರಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುತ್ತದೆ ಎನ್ನುವಾಗಲೇ ಆ ಜಾಗಕ್ಕೆ ಮಹೇಶ್ ಟೆಂಗಿನ ಕಾಯಿ ಅವರನ್ನು ನೇಮಿಸಿ ಆದೇಶ ಹೊರಡಿಸಿದರು.ನಂತರ ಬಿಎಸ್ವೈ ಉಚ್ಚಾಟನೆ ಮಾಡಿದ್ದ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರನ್ನು ಪುನಃ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಕಟೀಲ್ ನೇಮಕ ಮಾಡಿ ಆದೇಶ ಹೊರಡಿಸಿ ಪಕ್ಷದಲ್ಲಿ ಬಿಎಸ್ವೈ ಬಲ ಕುಗ್ಗುವಂತೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.ಪಕ್ಷದ ಪ್ರಧಾನ ಕಚೇರಿಯ ಕಾರ್ಯಾಲಯ ಕಾರ್ಯದರ್ಶಿಯನ್ನು ಕೂಡ ಬದಲಿಸಲಾಗಿದೆ.

ಇನ್ನು ಮೇಯರ್ ಚುನಾವಣಾ ವಿಷಯದಲ್ಲಿ ಮೇಯರ್ ಪಟ್ಟ ಬಿಜೆಪಿಗೆ ದಕ್ಕಿದರೂ ಜಿಲ್ಲಾ ಉಸ್ತುವಾರಿ ಆಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪಗೆ ದೊಡ್ಡ ಹಿನ್ನಡೆಯಾಗಿದೆ. ಮೇಯರ್ ಅಭ್ಯರ್ಥಿ ಆಯ್ಕೆಗೆ ಶಾಸಕ ರಘು ನೇತೃತ್ವದ ಸಮಿತಿಯನ್ನು ಸಿಎಂ ರಚನೆ ಮಾಡಿದರೂ ಯಾವುದೇ ಸಮಿತಿ ರಚನೆಯಾಗಿಲ್ಲ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವ ಮೂಲಕ ಪಕ್ಷದ ವಿಚಾರದಲ್ಲಿ ಸಿಎಂ ಆದೇಶಕ್ಕೆ ಬೆಲೆ ಇಲ್ಲ ಎನ್ನುವ ಸಂದೇಶವನ್ನು ರವಾನಿಸಿದರು ಇದಾದ ನಂತರ ಮೇಯರ್ ಆಯ್ಕೆ ವಿಚಾರದಿಂದ ಸಿಎಂ ಹಿಂದೆ ಸರಿದರು, ನಂತರ ಯಡಿಯೂರಪ್ಪ, ಅಶೋಕ್,ಸೋಮಣ್ಣ ಬೆಂಬಲಿತ ಅಭ್ಯರ್ಥಿಗಳಿಗೆ ಮಣೆ ಹಾಕದೇ ಸಂಘದ ಹಿನ್ನೆಲೆಯುಳ್ಳ ಗೌತಮ್ ಕುಮಾರ್ ಜೈನ್ ರನ್ನು‌ ರಾತ್ರೋರಾತ್ರಿ ಆಯ್ಕೆ ಮಾಡಲಾಗಿದೆ.ರಾಜ್ಯಾಧ್ಯಕ್ಷರ ಆಯ್ಕೆ ಕೂಡ ಇದೇ ರೀತಿ ಅಚ್ಚರಿ ಆಯ್ಕೆ ಮಾಡಲಾಗಿತ್ತು ಈಗ‌ ಮೇಯರ್ ಅಭ್ಯರ್ಥಿ ಕೂಡ ಅಚ್ಚರಿ ಆಯ್ಕೆ ಮಾಡಲಾಗಿದೆ.

ಬಿ.ಎಲ್ ಸಂತೋಷ್ ಅಣತಿಯಂತೆ ಗೌತಮ್ ಗೆ ಮೇಯರ್ ಪಟ್ಟ ನೀಡಲಾಗಿದೆ ಎನ್ನಲಾಗುತ್ತಿದ್ದು ಪಕ್ಷದಲ್ಲಿ ಸಂಪೂರ್ಣ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಸಂತೋಷ್ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ವ್ಯಕ್ತಿ ಹಿಡಿತದಿಂದ ಸಂಘಟನೆ ಹಿಡಿತಕ್ಕೆ ಪಕ್ಷವನ್ನು ತರಬೇಕು ಎನ್ನುವ ಸಂಘ ಪರಿವಾರದ ನಿರ್ದೇಶನದಂತೆ ಸಂತೋಷ್ ತಂತ್ರ ರೂಪಿಸುತ್ತಿದ್ದು ಪಕ್ಷದಲ್ಲಿ ಬಿಎಸ್ವೈ ಬಲ ಕ್ಷೀಣಿಸುವಂತೆ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.Body:ಪ್ರಶಾಂತ್ ಕುಮಾರ್Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.