ಬೆಂಗಳೂರು: ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ತಾಲೀಮು ನಗರದ ಎಂಟು ವಲಯಗಳ ಎಂಟು ಆಸ್ಪತ್ರೆಗಳಲ್ಲಿ ನಡೆಯಲಿದೆ.
ಸರ್ಕಾರದ ಆರೋಗ್ಯ ಇಲಾಖೆಯ ಜೊತೆ ವೀಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ, 8 ಕಡೆಗಳಲ್ಲಿ ನಾಳೆ ಡ್ರೈ ರನ್ ನಡೆಯಲಿದೆ. ಪಿಹೆಚ್‌ಸಿ, ರೆಫೆರಲ್, ಸಿಹೆಚ್‌ಸಿಯಲ್ಲಿ ಆಸ್ಪತ್ರೆಯಲ್ಲಿ ನಡೆಯಲಿದೆ. ಈ ಬಾರಿ ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೂ ಡ್ರೈ ರನ್ ನಡೆಸಲಾಗ್ತಿದೆ ಎಂದರು.
ಕಳೆದ ಬಾರಿ ಆಗಿದ್ದ ಟೆಕ್ನಿಕಲ್ ಸಮಸ್ಯೆಗಳನ್ನು ಈ ಬಾರಿ ಪರಿಹರಿಸಲಾಗಿದೆ. ಆಧಾರ್ ಕಾರ್ಡ್ ಲಿಂಕ್ ಆಗುವುದು ಸಮಸ್ಯೆ ಆಗುತ್ತಿರುವ ಹಿನ್ನೆಲೆ, ಬೇರೆ ಐಡಿ ಕಾರ್ಡ್ ಗಳನ್ನು ಬಳಸಲು ತಿಳಿಸಲಾಗಿದೆ. ಒಂದು ಲಸಿಕಾ ಸ್ಥಳದಲ್ಲಿ 25 ಜನರಿಗೆ ಲಸಿಕೆ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನಾಳೆ ಡ್ರೈ ರನ್ ನಡೆಯಲಿರೋ ಸ್ಥಳ:
- ಬೊಮ್ಮನಹಳ್ಳಿ ವಲಯ - ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ
- ದಾಸರಹಳ್ಳಿ ವಲಯ - ಸಪ್ತಗಿರಿ ಮೆಡಿಕಲ್ ಕಾಲೇಜು
- ಈಸ್ಟ್ ವಲಯ - ಹಲಸೂರು ರೆಫೆರಲ್ ಆಸ್ಪತ್ರೆ
- ಮಹದೇವಪುರ ವಲಯ - ಕೆ.ಆರ್.ಪುರಂ ಜನರಲ್ ಆಸ್ಪತ್ರೆ
- ಆರ್.ಆರ್.ನಗರ - ಕೆಂಗೇರಿ ಪಿಹೆಚ್‌ಸಿ
- ಸೌಥ್ ವಲಯ - ಕಿಮ್ಸ್ ಆಸ್ಪತ್ರೆ
- ವೆಸ್ಟ್ ವಲಯ - ಬಿಎಂಸಿ
- ಯಲಹಂಕ ವಲಯ - ಆಸ್ಟ್ರೋ ಸಿಎಂಐ ಆಸ್ಪತ್ರೆ