ETV Bharat / state

ಗಾಂಧಿ ಜಯಂತಿಯೊಳಗೆ ನಾಡಗೀತೆ ಅವಧಿ, ರಾಗ ಸಂಯೋಜನೆ ಪರಿಷ್ಕರಣೆ ಬಗ್ಗೆ ನಿರ್ಧಾರ: ಸಚಿವ ಸುನಿಲ್ ಕುಮಾರ್

author img

By

Published : Sep 21, 2021, 1:28 PM IST

ಗಾಂಧಿ ಜಯಂತಿಯೊಳಗೆ ನಾಡಗೀತೆಯ ಅವಧಿ ಹಾಗೂ ರಾಗ ಸಂಯೋಜನೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಸಚಿವ ಸುನಿಲ್ ಕುಮಾರ್
ಸಚಿವ ಸುನಿಲ್ ಕುಮಾರ್

ಬೆಂಗಳೂರು: ಗಾಂಧಿ ಜಯಂತಿಯೊಳಗೆ ನಾಡಗೀತೆಯ ಅವಧಿ ಹಾಗೂ ರಾಗ ಸಂಯೋಜನೆ ಪರಿಷ್ಕರಣೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಹಳ ದಿನಗಳಿಂದ ನಾಡಗೀತೆ ಬಗ್ಗೆ ಚರ್ಚೆಯಾಗುತ್ತಿದೆ. ಅದರ ಕಾಲಮಿತಿ ಕಡಿಮೆಗೊಳಿಸುವುದು ಹಾಗೂ ರಾಗ ಸಂಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಡಗೀತೆ ಸಂವಿಧಾನದಡಿ ರಚನೆಯಾಗಿದೆ. ಈ ಸಂಬಂಧ ಚೆನ್ನವೀರ ಕಣವಿ ಮತ್ತು ಶಿವರುದ್ರಪ್ಪ ಅವರ ಸಮಿತಿ ರಚಿಸಲಾಗಿತ್ತು. ಅದು ಅಪೂರ್ಣವಾಗಿದೆ‌ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಗ್ಯಾಂಬ್ಲಿಂಗ್‌ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ - ಆರಗ ಜ್ಞಾನೇಂದ್ರ

ಇದಕ್ಕೆ ಉತ್ತರಿಸಿದ ಸಚಿವ ಸುನಿಲ್ ಕುಮಾರ್, ಈ ಸಂಬಂಧ ತಜ್ಞರ ಸಮಿತಿ ಮಾಡಿದ್ದೇವೆ. ಮೈಸೂರಿನ ಲೀಲಾವತಿ ಮತ್ತು ದೊಡ್ಡ ರಂಗೇಗೌಡರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅವರು ನಾಡಗೀತೆಯ ಕಾಲಮಿತಿ ಹಾಗೂ ರಾಗ ಸಂಯೋಜನೆ ಪರಿಷ್ಕರಣೆ ಬಗ್ಗೆ ವರದಿ ನೀಡುತ್ತಾರೆ. 15 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ಅವರು ನೀಡಿದ ವರದಿ ಆಧಾರದಲ್ಲಿ ಗಾಂಧಿ ಜಯಂತಿಯ ಒಳಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.