ETV Bharat / state

ನೂರಕ್ಕೆ ‌ನೂರು ಉಪ ಚುನಾವಣೆಯಲ್ಲಿ ಗೆಲುವು‌ ಸಾಧಿಸುತ್ತೇವೆ: ಸಿಎಂ ಯಡಿಯೂರಪ್ಪ

ಈ ಬಾರಿ ನಡೆಯುವ ನಾಲ್ಕು ಉಪ ಚುನಾವಣೆಯನ್ನು ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ
CM Yediyurappa
author img

By

Published : Mar 1, 2021, 1:53 PM IST

Updated : Mar 1, 2021, 2:29 PM IST

ಶಿವಮೊಗ್ಗ: ಮುಂಬರುವ ನಾಲ್ಕು ಉಪ ಚುನಾವಣೆಯನ್ನು ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ ಹೇಳಿಕೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ನಾಲ್ಕೈದು ದಿನದಲ್ಲಿ ಉಪ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಲೋಕಸಭೆ, ವಿಧಾನಸಭೆಯ ಉಪ ಚುನಾವಣೆ ಗೆಲ್ಲುವುದಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ನೂರಕ್ಕೆ ನೂರು ಎಲ್ಲ ಕ್ಷೇತ್ರಗಳಲ್ಲೂ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದರು.

ಉಪಚುನಾವಣೆಗಾಗಿ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸ ಆರಂಭಿಸುತ್ತೇನೆ. ಮಾರ್ಚ್ 8 ರಂದು ಬಜೆಟ್ ಮಂಡಿಸುತ್ತೇನೆ. ಯಾವುದಕ್ಕೂ ಕೊರತೆ ಆಗದ ರೀತಿಯಲ್ಲಿ ಒಳ್ಳೆಯ ಬಜೆಟ್ ಕೊಡುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ಯಡಿಯೂರಪ್ಪನವರಿಗೆ ಅನುಗ್ರಹ ಅಂದ್ರೇ ಏನು ಅನ್ನೋದೆ ಗೊತ್ತಿಲ್ಲ.. ಜನಪರ ಯೋಜನೆ ಕೈಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಕಿಡಿ

ಮೈಸೂರಿನಲ್ಲಿ ಮೇಯರ್ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಲ್ಲ, ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದರು.

ಟೆಂಪಲ್‌ ರನ್ ನಡೆಸಿದ ಸಿಎಂ ಬಿಎಸ್ವೈ:

CM Yeddyurappa Temple Run
ಸಿಎಂ ಯಡಿಯೂರಪ್ಪ ಟೆಂಪಲ್​ ರನ್​
ಸಿಎಂ ಯಡಿಯೂರಪ್ಪನವರು ರೆಂಪಲ್ ರನ್​ ಮಾಡುತ್ತಿದ್ದು, ಇಂದು ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯ ಹಾಗೂ ಕೋಟೆ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಹಾಗೂ ಬಿಜೆಪಿ ಪಕ್ಷದ ಮುಖಂಡರು ಸಿಎಂ ಅವರಿಗೆ ಸಾಥ್​ ನೀಡಿದರು.

Last Updated : Mar 1, 2021, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.