ETV Bharat / state

'ಕರ್ನಾಟದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಲು ಪ್ರಯತ್ನಿಸುತ್ತೇವೆ': ಸಚಿವ ಪರಮೇಶ್ವರ್ - Chitrakala Samman award

ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ.

Chitrakala Samman award program
ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ
author img

By ETV Bharat Karnataka Team

Published : Jan 6, 2024, 6:44 PM IST

ಕರ್ನಾಟಕ ಚಿತ್ರಕಲಾ ಪರಿಷತ್​​ನ ಪ್ರತಿಷ್ಟಿತ ಕಾರ್ಯಕ್ರಮ 'ಚಿತ್ರಸಂತೆ'ಗೆ ಈಗ 21 ವರ್ಷ. ಕಲಾವಿದರು ಹಾಗೂ ಕಲಾ ಪೋಷಕರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಾ ಬಂದಿರುವ 'ಚಿತ್ರಸಂತೆ' ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದಿದೆ. ಕಳೆದ ಆರು ದಶಕಗಳಿಂದ ದೃಶ್ಯಕಲಾ ಮಾಧ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಕೊಟ್ಟಿರುವ ಕರ್ನಾಟಕ ಚಿತ್ರಕಲಾ ಪರಿಷತ್​​ ಪ್ರತೀ ವರ್ಷದಂತೆ ಈ ವರ್ಷವೂ 'ಚಿತ್ರಸಂತೆ' ಕಾರ್ಯಕ್ರಮ ಆಯೋಜಿಸಿದೆ. ನಾಳೆ (7ರಂದು) ಈ ಕಾರ್ಯಕ್ರಮ ನಡೆಯಲಿದೆ.

ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ: ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಗಮಿಸಿದ್ದರು. ಇಂದು ನಡೆದ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಿ ಮಾತನಾಡಿದ ಅವರು, ಕರ್ನಾಟಕವು ಕಲೆ, ಸಂಗೀತ, ಸಂಸ್ಕೃತಿಯಲ್ಲಿ ಸಮೃದ್ಧವಾಗಿದೆ. ಕಲೆ ರಕ್ಷಣೆಗೆ ಗ್ಯಾಲರಿಯ ಅಗತ್ಯವಿದೆ. ವಿದೇಶಗಳಲ್ಲಿ ಪರ್ಮನೆಂಟ್ ಆರ್ಟ್ ಗ್ಯಾಲರಿಗಳಿದ್ದು, ಅದೇ ಮಾದರಿಯ ಆರ್ಟ್ ಗ್ಯಾಲರಿಯನ್ನು ಕರ್ನಾಟದಲ್ಲಿ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Chitrakala Samman award program
ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

ಕಲೆಗೆ ಪ್ರೋತ್ಸಾಹ: ದೇವರಾಜ್ ಅರಸು ಅವರು ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ಸ್ಥಳ ನೀಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಿದರು. ತದನಂತರ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರಾದ ನಂಜುಂಡಪ್ಪ ಅವರು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮೈಸೂರಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಲೇಸರ್ ಲೈಟ್ ಬಿಟ್ಟ ಪ್ರಕರಣ: ನಗರ ಪೊಲೀಸ್​ ಕಮಿಷನರ್ ಹೇಳಿದ್ದೇನು?

ಕಲೆ ಜಾತಿ-ಧರ್ಮಕ್ಕೂ ಮೀರಿದ್ದು: ಕಲೆ, ಸಂಗೀತ ಸಮಾಜದಲ್ಲಿ ನಾವು ಕಟ್ಟಿರುವ ಜಾತಿ, ಧರ್ಮವನ್ನು ಮೀರಿರುವುದು. ಇದಕ್ಕೆ ಯಾವುದೇ ರೀತಿಯ ತಾರತಮ್ಯಗಳಿಲ್ಲ. ಹೀಗಾಗಿ ಇಂದಿಗೂ ಎಲ್ಲವನ್ನೂ ಮೀರಿ ತನ್ನ ಅಸ್ತಿತ್ವವನ್ನು ತಾನೇ ಉಳಿಸಿಕೊಂಡಿದೆ. ಕಲೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಸರ್ಕಾರದ ಮೇಲೆ ಹೆಚ್ಚಿದೆ ಎಂದರು.

ಇದನ್ನೂ ಓದಿ: ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಅಂತಿಮ ಕಕ್ಷೆ ಸೇರಿದ ಆದಿತ್ಯ ಎಲ್​-1 ಗಗನ ನೌಕೆ

ಕಲೆಯನ್ನು ರಕ್ಷಿಸಿ, ಪೋಷಿಸುವ ಕೆಲಸ ನಿರಂತರವಾಗಿ ನಡೆಯಬೇಕು: ಕಲೆ ನಾಶ ಆಗುವ ಪರಿಸ್ಥಿತಿ ನಮ್ಮ ಮುಂದೆ ಕಾಣುತ್ತಿದೆ. ಪ್ರೋತ್ಸಾಹ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣ. ರಾಜ್ಯದ ಪ್ರತೀ ಜಿಲ್ಲೆ ವಿಭಿನ್ನ ಕಲೆ ಹೊಂದಿವೆ. ಇದನ್ನು ರಕ್ಷಿಸಿ, ಪೋಷಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಕರ್ನಾಟಕ ಚಿತ್ರಕಲಾ ಪರಿಷತ್ ಕಲೆಗಾರರನ್ನು ಸೃಷ್ಟಿಸುತ್ತಿದೆ. ಇದು ಸಮಾಜಕ್ಕೆ ನೀಡುತ್ತಿರುವ ಬಹುದೊಡ್ಡ ಕೊಡುಗೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.