ETV Bharat / state

ವನವಾಸಿಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ: ಉಮೇಶ್ ಕತ್ತಿ ಭರವಸೆ

ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ, ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಕೇವಲ ಒಂದು ಲೀಟರ್ ಸೀಮೆ ಎಣ್ಣೆಯನ್ನು ಮಾಸಿಕವಾಗಿ ವಿತರಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲಿದರು.

ವನವಾಸಿಗಳಿಗೆ ವಿದ್ಯುತ್ ದೀಪದ ವ್ಯವಸ್ಥೆ
ಉಮೇಶ್ ಕತ್ತಿ
author img

By

Published : Sep 15, 2021, 4:50 AM IST

ಬೆಂಗಳೂರು: ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಲು ಸೀಮೆಎಣ್ಣೆ ದೀಪವನ್ನು ಅವಲಂಭಿಸಿದ್ದು,ಅವರಿಗೆ ವಿದ್ಯುತ್ ಬೆಳಕಿನ ಸೌಲಭ್ಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ, ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಕೇವಲ ಒಂದು ಲೀಟರ್ ಸೀಮೆ ಎಣ್ಣೆಯನ್ನು ಮಾಸಿಕವಾಗಿ ವಿತರಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲಿದರು. ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಒಂದು ಲೀಟರ್ ಸೀಮೆ ಎಣ್ಣೆಯನ್ನ ತಿಂಗಳಿಗೆ ನೀಡುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದರು.

ಶಾಂತರಾಮ್ ಸಿದ್ದಿ ಹೇಳಿಕೆಯನ್ನು ಬೆಂಬಲಿಸಿದ ಮತ್ತೋರ್ವ ಬಿಜೆಪಿ ಹಿರಿಯ ಸದಸ್ಯ ಹೆಚ್.ವಿಶ್ವನಾಥ್, ಗ್ರಾಮೀಣ ಪ್ರದೇಶ ದಲ್ಲಿ ,ಗುಡ್ಡಗಾಡು ಪ್ರದೇಶದಲ್ಲಿ ಪಡಿತರ ಕುಟುಂಬಗಳಿಗೆ ಬೆಳಕಿಗಾಗಿ ದೀಪವನ್ನ ಹಚ್ಚಲು ಮೂರು ಲೀಟರ್ ಸೀಮೆಎಣ್ಣೆ ನೀಡುವಂತೆ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಉಮೇಶ್ ಕತ್ತಿ, ಅಡುಗೆ ಅನಿಲ ಹೊಂದಿಲ್ಲದ ಆದ್ಯಾತ ಪಡಿತರ ಚೀಟಿ ಹೊಂದಿದವರಿಗೆ ಅಡುಗೆ ಮಾಡುವ ಉದ್ದೇಶಕ್ಕಾಗಿ 3 ಲೀಟರ್ ಸೀಮೆ ಎಣ್ಣೆಯನ್ನ ವಿತರಿಸಲಾಗುತ್ತಿದೆ. ಸೀಮೆಎಣ್ಣೆ ಲಭ್ಯತೆಯನ್ನ ಹೆಚ್ಚಾಗಿ ಮಾಡುತ್ತೇವೆ. ಆದರೆ ಕಾಡಿನಲ್ಲಿ ವಾಸಿಸುವ ಜನರಿಗೆ ಸೀಮೆಎಣ್ಣೆ ದೀಪದ ಬದಲು ವಿದ್ಯುತ್ ಬೆಳಕಿನ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇದನ್ನು ಓದಿ:ಎತ್ತಿನಹೊಳೆ ಯೋಜನೆ ಗಲಾಟೆ, ಜೆಡಿಎಸ್ ಧರಣಿ ಸೇರಿದಂತೆ ಇಂದು ಏನೆಲ್ಲಾ ಆಯ್ತು.. ಕಲಾಪದ ಹೈಲೈಟ್ಸ್​ಗಳು ಇಲ್ಲಿವೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.