ಬೆಂಗಳೂರು: ಸಿಡಿ ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿದ್ದು, ಸರ್ವ ಸ್ವತಂತ್ರ ಅಧಿಕಾರವನ್ನು ಕೊಟ್ಟಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಎಸ್ಐಟಿ ತನಿಖೆ ನಡೆಯುತ್ತಿದೆ. ಅವರ ತನಿಖೆ ವಿಚಾರದಲ್ಲಿ ಏನೂ ಮಾತನಾಡಲ್ಲ ಎಂದರು.
ಸೋಮವಾರದಿಂದ ಸದನದಲ್ಲಿ ಯತ್ನಾಳ್ ಪ್ರತಿಭಟನೆ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಜೊತೆ ಈಗಾಗಲೇ ಮಾತನಾಡಿದ್ದೇವೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಕೊಡಲು ಹೇಳಿದ್ದೇವೆ. ಹಾಗಾಗಿ ಪ್ರತಿಭಟನೆ ಬೇಡ ಎಂದು ಮನವಿ ಮಾಡಿದ್ದೇವೆ. ಆಯೋಗ ಸ್ವಾಮೀಜಿಗಳಿಗೆ ವಿಚಾರಣೆಗೆ ಆಹ್ವಾನಿಸಿದೆ. ಅವರು ಆಯೋಗದ ಮುಂದೆ ಹಾಜರಾಗುತ್ತಾರೋ, ಇಲ್ಲವೋ ಎಂಬುದನ್ನು ಈಗಲೇ ಊಹೆ ಮಾಡಿ ಹೇಳುವುದಕ್ಕೆ ಆಗುವುದಿಲ್ಲ ಎಂದು ವಿವರಿಸಿದರು.
ಓದಿ: ರಸ್ತೆ ನಿರ್ಮಿಸುವ ವಿಚಾರ: ರಾಕಿಂಗ್ ಸ್ಟಾರ್ ವಿರುದ್ಧ ಜಿಲ್ಲಾಡಳಿತಕ್ಕೆ ದೂರು
ಇಂದು ಕಾಂಗ್ರೆಸ್ನಿಂದ ಶಿವಮೊಗ್ಗ ಚಲೋ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಪ್ರತಿಭಟನೆ ಮಾಡಲಿ, ನೋಡೋಣ ಏನಾಗುತ್ತೆ ಎಂದರು.