ETV Bharat / state

ಎಷ್ಟೇ ಖರ್ಚಾದರೂ ಸರಿ.. ಪುನರ್ವಸತಿ ಕಲ್ಪಿಸುತ್ತೇವೆ: ಸಂತ್ರಸ್ತರಿಗೆ ಸಿಎಂ ಅಭಯ

ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಷ್ಟೇ ಖರ್ಚಾದರೂ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ
author img

By

Published : Aug 10, 2019, 2:11 PM IST

ಬೆಂಗಳೂರು: ನೆರೆಪೀಡಿತ ಪ್ರದೇಶದಲ್ಲಿರುವ ಸಂತ್ರಸ್ತರೇ ಧೈರ್ಯವಾಗಿರಿ ನಿಮ್ಮ ಜೊತೆ ಸರ್ಕಾರವಿದೆ, ನಾಡಿನ ಜನತೆ ಇದೆ. ಎಷ್ಟೇ ಖರ್ಚಾದರೂ ನಿಮಗೆಲ್ಲಾ ಪುನರ್ವಸತಿ ಮಾಡಿಕೊಡುವುದಕ್ಕೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ‌ ಸಿಎಂ, ಒಂದು ವಾರದಿಂದ ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಭಾರಿ ಮಳೆ ಸುರಿದು ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ, ಭೂಕುಸಿತ ಸಂಭವಿಸಿ ಜನತೆ ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ತಿ ಪಾಸ್ತಿ ದೊಡ್ಡ ನಷ್ಟವಾಗಿದೆ, ರಾಜ್ಯದ ಅರ್ಧ ಭಾಗ ಮಳೆ, ಪ್ರವಾಹಕ್ಕೆ ಬಲಿಯಾಗಿದೆ. 45 ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದ ಭೀಕರ ಪ್ರವಾಹ ರಾಜ್ಯ ಕಂಡಿರಲಿಲ್ಲ ಎಂದಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಈವರೆಗೆ 16 ಜಿಲ್ಲೆ 80 ತಾಲೂಕು ನೆರೆಗೆ ಸಿಲುಕಿದ್ದು 24 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಲಾಗಿದೆ. 1,024 ಗ್ರಾಮಗಳು ಭೀಕರತೆ ಎದುರಿಸುತ್ತಿವೆ, 2,35,105 ಜನರನ್ನು ಸ್ಥಳಾಂತರ ಮಾಡಲಾಗಿದೆ, 222 ಜಾನುವಾರು ಸಾವನ್ನಪ್ಪಿವೆ. 44,013 ಜಾನವಾರು ಸ್ಥಳಾಂತರ ಮಾಡಲಾಗಿದೆ, 624 ಪರಿಹಾರ ಕೇಂದ್ರ ಆರಂಭಿಸಲಾಗಿದ್ದು, ವೈದ್ಯರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. 1,57,498 ಜನ ರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದರು. ಇನ್ನು 3,22,448 ಹೆಕ್ಟೇರ್ ಕೃಷಿ ಭೂಮಿಗೆ ಹಾನಿ ಸಂಭವಿಸಿದೆ. ಸಾವಿರಾರು ಜನ ಮನೆ-ಮಠ ಕಳೆದುಕೊಂಡಿದ್ದಾರೆ. 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ ಎಂದು ವಿವರ ನೀಡಿದರು.

ಸೋಮವಾರ ವೈಮಾನಿಕ ಪ್ರವಾಸ ಮಾಡಿದ್ದೆ. ನಂತರ ಅಲ್ಲಿಂದ‌ ದೆಹಲಿಗೆ ತೆರಳಿ ಪಿಎಂ, ಸಚಿವರ ಭೇಟಿ ಮಾಡಿ ಪರಿಸ್ಥಿತಿ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಕಳೆದ‌ ಮೂರ್ನಾಲ್ಕು‌ದಿನಗಳಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಕೂಡ ಗಂಭೀರ ಪರಿಸ್ಥಿತಿ ಎದುರಾಗಿದೆ ಕೊಡಗು ದಕ್ಷಿಣ ಕನ್ನಡದಲ್ಲಿ ಭೂ ಕುಸಿತ, ಸಾವು ‌ಸಂಭವಿಸಿದೆ, ಹಾಗಾಗಿ ದೆಹಲಿಯಿಂದ ತಕ್ಷಣ ವಾಪಸ್ ಬಂದು ಪ್ರವಾಸ ಮಾಡಿದ್ದೇನೆ. ಬೆಳಗಾವಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ, ಗದಗ ,ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿ ಬಂದಿದ್ದೇನೆ. ಎಲ್ಲಾ ಕಡೆ ನಮ್ಮ ರಕ್ಷಣಾ ಕಾರ್ಯಾಚರಣೆ ಮಾಡುವ ಸಿಬ್ಬಂದಿಗೆ‌ ನೈತಿಕ‌ ಸ್ಥೈರ್ಯ ತುಂಬುವ ಕೆಲಸ‌ ಮಾಡಿದ್ದೇವೆ. ನದಿತೀರದ ಜನರಿಗೆ‌ ಎಚ್ಚರಿಕೆ ನೀಡಿದ್ದೇವೆ. ಮಲೆನಾಡಿನ‌ ಪ್ರದೇಶದಲ್ಲಿಯೂ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದ್ದರೂ ನಾನು 100 ಕೋಟಿ ಮತ್ತೊಮ್ಮೆ ಬಿಡುಗಡೆ ಮಾಡಿದ್ದೇನೆ. ಹಿರಿಯ ಅಧಿಕಾರಿಗಳು ಆಯಾ ಜಿಲ್ಲೆಯಲ್ಲಿದ್ದು, ನಮ್ಮ ಸಂಪರ್ಕದಲ್ಲಿದ್ದಾರೆ. ಅಗತ್ಯ ಬಿದ್ದರೆ ಇನ್ನಷ್ಟು ಸಿಬ್ಬಂದಿ‌ ಹೆಚ್ಚಳ ಮಾಡಲಾಗುತ್ತದೆ. ಪಕ್ಷಾತೀತವಾಗಿ ಎಲ್ಲಾ ಶಾಸಕರು, ಸಂಸದರು ಓಡಾಟ ಮಾಡಿ ವಾಸ್ತವಿಕ ಸಂಗತಿ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಸಹಜ‌ಸ್ಥಿತಿಗೆ ಬರುವ ವಿಶ್ವಾಸವಿದೆ, ಯಾರೂ ಧೈರ್ಯಗುಂದಬೇಡಿ, ಸರ್ಕಾರ, ನಾಡಿನ ಜನತೆ ನಿಮ್ಮ ಬೆನ್ನಿಗೆ ಇರಲಿದೆ. ಪುನರ್ವಸತಿಗೆ ಎಷ್ಟೇ ಖರ್ಚಾದರು ಬೇರೆ ಯೋಜನೆ ನಿಲ್ಲಿಸಿ ಈ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಹಲವರಿಂದ ಧನ ಸಹಾಯ:

ಸರ್ಕಾರಿ ನೌಕರರ ಸಂಘದ ನೌಕರರ ಒಂದು ದಿನದ ವೇತನ, ಅಂದರೆ 150 ಕೋಟಿ ಕೊಡುವ ಭರವಸೆ ನೀಡಿದೆ. ನಿಗಮ ಮಂಡಳಿಯಿಂದ 50 ಕೋಟಿ ಭರವಸೆ ನೀಡಿದ್ದಾರೆ. ಸುಧಾಮೂರ್ತಿ 10 ಕೋಟಿ, ವೀರಣ್ಣ ಚರಂತಿಮಠ ಸಂಸ್ಥೆ 2 ಕೋಟಿ, ಹಾಲು‌ ಉತ್ಪಾದಕರು1 ಕೋಟಿ ಕೊಟ್ಟಿದ್ದಾರೆ. ಶಾಸಕರ‌ ಕ್ಷೇಮಾಭಿವೃದ್ಧಿ ನಿಧಿಯಿಂದ 2 ಕೋಟಿ ಕೊಡಲಾಗಿದೆ. ಕಳೆದ ಬಾರಿ ಕೊಡಗು ನೆರೆ ವೇಳೆ 1 ಕೋಟಿ ಶಾಸಕರ ನಿಧಿಯಿಂದ ಕೊಡಲಾಗಿತ್ತು ಅದು ಬಳಕೆಯಾಗಿಲ್ಲ ಹಾಗಾಗಿ ಅದನ್ನೂ ಬಳಸಲು ‌ಸೂಚನೆ ನೀಡಿದ್ದೇನೆ ಎಂದರು.

ಶಕ್ತಿ ಇರುವವರು ಸಹಾಯ ಮಾಡಿ:

ಅಲ್ಲದೆ ಶಕ್ತಿ ಇರುವ ಕೈಗಾರಿಕೋದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡುವಂತೆ ಸಿಎಂ ಮನವಿ ಮಾಡಿದರು. ಪೊಲೀಸ್, ಸಾರಿಗೆ ಇಲಾಖೆ 1 ದಿನದ ವೇತನ ನೀಡಲು ಒಪ್ಪಿಕೊಂಡಿದ್ದಾರೆ. ಎಲ್ಲರ ಸಹಕಾರದಿಂದ ಶಾಶ್ವತ ಪುನರ್ವಸತಿ ಆಗಬೇಕು ಆ ದಿಕ್ಕಿನಲ್ಲಿ ಏನೇ‌ನು ಮಾಡಬೇಕೋ ಮಾಡಲಿದ್ದೇನೆ ಎಂದರು.

ಸದ್ಯದ ಮಾಹಿತಿಯಂತೆ 6,000 ಕೋಟಿ ನಷ್ಟವಾಗದೆ. ತಕ್ಷಣ ಮೂರು ಸಾವಿರ ಕೋಟಿ ಬಿಡುಗಡೆ ಮಾಡಲು ಕೇಂದ್ರಕ್ಕೆ ಪತ್ರ ಬರೆಯಲಾಗುತ್ತಿದೆ. ಇದು ಈಗಿನ ಅಂದಾಜು, ಇದು ಹೆಚ್ಚಾಗಲಿದೆ, ನಿರ್ಮಲಾ ಸೀತಾರಾಮನ್ ಅವರನ್ನೇ ಪಿಎಂ ಕಳಿಸಿದ್ದಾರೆ ಎಂದರೆ ಅವರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವುದಕ್ಕಿಂತ ಪರಿಹಾರ ಮುಖ್ಯ ಆ ಕೆಲಸ ಮಾಡಲಾಗುತ್ತಿದೆ ಎಂದರು.

ಮಹಾರಾಷ್ಟ್ರ ಸಿಎಂ‌ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಎರಡು ರಾಜ್ಯದಲ್ಲಿ ಒಂದೇ ಪರಿಸ್ಥಿತಿ, ಅದಕ್ಕಾಗಿಯೇ ಹೆಚ್ಚು ನೀರು ಬರುತ್ತಿದೆ, ಈಗ ಮಳೆ ಕಡಿಮೆಯಾಗುತ್ತಿದ್ದು, ನೆರೆ ಕಡಿಮೆಯಾಗುವ ವಿಶ್ವಾಸವಿದೆ. ರಕ್ಷಣಾ ಕೇಂದ್ರದಲ್ಲಿ ಇರುವವರು ಪರ್ಯಾಯ ವ್ಯವಸ್ಥೆ ಆಗುವವರೆಗೆ ಗಂಜಿ ಕೇಂದ್ರದಲ್ಲಿ ಇರಲು ವ್ಯವಸ್ಥೆ ಮಾಡಬೇಕು. ಕೆಲ‌ ಗ್ರಾಮ ಸಂಪೂರ್ಣ ಸ್ಥಳಾಂತರ ಮಾಡಬೇಕು ಅದಕ್ಕೆ ಭೂಮಿ ಖರೀದಿಸಬೇಕಿದೆ. ಸಾಕಷ್ಟು ಸವಾಲುಗಳಿವೆ ಅದನ್ನು ಎದುರಿಸಲಿದ್ದೇವೆ ಎಂದರು.

ನಾನು ಎಲ್ಲಾ‌ಕಡೆ ಹೋಗಲು ಸಾಧ್ಯವಿಲ್ಲ, ತುಂಬಾ ಹಾನಿ‌ ಇರೋ ಕಡೆ ಹೋಗಲಿದ್ದೇನೆ. ಶಾಶ್ವತ ಪರಿಹಾರಕ್ಕೆ ಈಗಲೆ ಅಂದಾಜು ಮಾಡಲು ಸಾಧ್ಯವಿಲ್ಲ. ಇದಕ್ಕೆ‌ ತಿಂಗಳುಗಟ್ಟಲೇ ಕಾಲಾವಕಾಶ ಬೇಕು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅನ್ನೋ ಭಾವನೆ ಇಟ್ಟುಕೊಂಡಿಲ್ಲ ಎಲ್ಲವನ್ನೂ ಸಮಾನವಾಗಿ ನೋಡುತ್ತಿದ್ದೇವೆ ಎಂದು ತಾರತಮ್ಯದ ಆರೋಪ ತಳ್ಳಿಹಾಕಿದರು.

Intro:

ಬೆಂಗಳೂರು: ನೆರೆಪೀಡಿತ ಪ್ರದೇಶದಲ್ಲಿ ಸಂತ್ರಸ್ತರೇ ಧೈರ್ಯವಾಗಿರಿ ನಿಮ್ಮ ಜೊತೆ ಸರ್ಕಾರವಿದೆ,ನಾಡಿನ ಜನತೆ ಇದೆ ಎಷ್ಟೇ ಖರ್ಚಾದರೂ ನಿಮಗೆಲ್ಲಾ ಪುನರ್ವಸತಿ ಮಾಡಿಕೊಡುವುದಕ್ಕೆ ಸರ್ಕಸರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ‌ ಸಿಎಂ, ಒಂದು ವಾರದಿಂದ ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಭಾರಿ ಮಳೆ ಸುರಿದು ಉತ್ತರ ಕರ್ನಾಟಕ,ಕರಾವಳಿ,ಮಲೆನಾಡು ಭಾಗದಲ್ಲಿ ಪ್ರವಾಹ,ಭೂಕುಸಿತ ಸಂಭವಿಸಿ ಜನತೆ ಬಹಳ ಸಂಕಷ್ಟಕ್ಕೆ ಸಿಕುಕಿದ್ದಾರೆ, ಆಸ್ತಿ ಪಾಸ್ತಿ ದೊಡ್ಡ ನಷ್ಟವಾಗಿದೆ, ರಾಜ್ಯದ ಅರ್ಧ ಭಾಗ ಮಳೆ,ಪ್ರವಾಹಕ್ಕೆ ಬಲಿಯಾಗಿದೆ, 45 ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದ ಭೀಕರ ಪ್ರವಾಹ ರಾಜ್ಯ ಕಂಡಿರಲಿಲ್ಲ, ಈವರೆಗೆ 16 ಜಿಲ್ಲೆ 80 ತಾಲ್ಲೂಕು ನೆರೆಗೆ ಸಿಲುಕಿದ್ದು 24 ಮಂದಿ ಸಾವನ್ನಪ್ಪಿದ್ದಾರೆ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಲಾಗಿದೆ.1024 ಗ್ರಾಮಗಳು ಭೀಕರತೆ ಎದುರಿಸುತ್ತಿವೆ ,235105 ಜನರನ್ನು ಸ್ಥಳಾಂತರ ಮಾಡಲಾಗಿದೆ, 222 ಜಾನುವಾರು ಸಾವನ್ನಪ್ಪಿವೆ, 44013 ಜಾನವಾರು ಸ್ಥಳಾಂತರ ಮಾಡಲಾಗಿದೆ, 624 ಪರಿಹಾರ ಕೇಂದ್ರ ಆರಂಭಿಸಲಾಗಿದೆ, ವೈದ್ಯರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ, 157498 ಜನ ರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ, 322448 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಾನಿ ಸಂಭವಿಸಿದೆ,ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ 12651 ಮನೆಗಳು ಸಂಪೂರ್ಣ ಹಾನಿಯಾಗಿದೆ ಎಂದು ವಿವರ ನೀಡಿದರು.

ಸೋಮವಾರ ನಾ‌ನು ರಾಜ್ಯದ ವೈಮಾನಿಕ ಪ್ರವಾಸ ಮಾಡಿದ್ದೆ ನಂತರ ಅಲ್ಲಿಂದ‌ ದೆಹಲಿಗೆ ತೆರಳಿ ಪಿಎಂ,ಸಚಿವರ ಭೇಟಿ ಮಾಡಿ ಪರಿಸ್ಥಿತಿ ತಿಳಿಸುವ ಪ್ರಯತ್ನ ಮಾಡಿದ್ದೆ, ಕಳೆದ‌ ಮೂರ್ನಾಲ್ಕು‌ದಿನಗಳಲ್ಲಿ ಹಾಸನ,ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಕೂಡ ತೀವ್ರವಾಗಿ ಗಂಭಿರ ಪರಿಸ್ಥಿತಿ ಎದುರಾಗಿದೆ ಕೊಡಗು ದಕ್ಷಿಣ ಕನ್ನಡದಲ್ಲಿ ಭೂ ಕುಸಿತ ಸಾವು ‌ಸಂಭವಿಸಿದೆ ಹಾಗಾಗಿ ದೆಹಲಿಯಿಂದ ತಕ್ಷಣ ವಾಪಸ್ ಬಂದು ಪ್ರವಾಸ ಮಾಡಿದ್ದೇನೆ, ಬೆಳಗಾವಿ ಜಿಲ್ಲೆ, ಬಾಗಲಕೋಟೆ ಜಿಲ್ಲಡ, ಗದಗ ,ಹುಬ್ಬಳ್ಖಿಧಾರವಾಡಕ್ಕೆ ಭೇಟಿ ನೀಡಿ ಬಂದಿದ್ದೇನೆ.
ಎಲ್ಲಾ ಕಡೆ ನಮ್ಮ‌ ರಕ್ಷಣಾ ಕಾರ್ಯಾಚರಣೆ ಮಾಡುವ ಸಿಬ್ಬಂದಿಗೆ‌ ನೈತಿಕ‌ ಸ್ಥೈರ್ಯ ತುಂಬುವ ಕೆಲಸ‌ಮಾಡಿದ್ದೇವೆ, ನದಿತೀರದ ಜನರಿಗೆ‌ ಎಚ್ಚರಿಕೆ ನೀಡಿದ್ದೇವೆ ಮಲೆನಾಡಿನ‌ ಪ್ರದೇಶದಲ್ಲಿಯೂ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದೇವೆ ಎಂದರು.

ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸೇನೆ ನೆರವು ನೀಡಿದೆ, ಕೇಂದ್ರ ಸಕಾಲಕ್ಕೆ ಸ್ಪಂಧಿಸಿದೆ ಮೂರು ಮಾದರಿ ಸೇನೆ ಬಳಸಲಾಗಿದೆ
ಎನ್ಡಿಆರ್ಎಫ್ 20, ಸೇನೆ 11,ನೌಕಾಪಡೆ 5, ದೋಣಿಗಳು, ವಾಯುಪಡೆಯ ನಾಲ್ಕು ಹೆಲಿಕ್ಯಾಪರದ ಎಸ್ಡಿಆರ್ ಎಫ್ 2 ತಂಡ, ಅಗ್ನಿಶಾಮಕ,ಪೊಲೀಸ್ ಸಿಬ್ಬಂದು‌ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದ್ದರೂ ನಾನು 100 ಕೋಟಿ ಮತ್ತೊಮ್ಮೆ ಬಿಡುಗಡೆ ಮಾಡಿದ್ದೇನ ಹಿರಿಯ ಅಧಿಕಾರಿಗಳು ಆಯಾ ಜಿಲ್ಲೆಯಲ್ಲಿ ಇದ್ದಾರೆ ನಮ್ಮ ಸಂಪರ್ಕದಲ್ಲಿ ಇದ್ದಾರೆ, ಅಗತ್ಯ ಬಿದ್ದರೆ ಇನ್ನಷ್ಟು ಸಿಬ್ಬಂದಿ‌ ಹೆಚ್ಚಳ ಮಾಡಲಾಗುತ್ತದೆ.ಪಕ್ಷಾತೀತವಾಗಿ ಎಲ್ಲಾ ಶಾಸಕರು, ಸಂಸದರು ಓಡಾಟ ಮಾಡಿ ವಾಸ್ತವಿಕ ಸಂಗತಿ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಸಹಜ‌ಸ್ಥಿತಿಗೆ ಬರವ ವಿಶ್ವಾಸವಿದೆ, ಯಾರೂ ದೈರ್ಯಗುಂದಬೇಡ, ಸರ್ಕಾರ, ನಾಡಿನ ಜನತೆ ನಿಮ್ಮ ಬೆನ್ನಿಗೆ ಇರಲಿದೆ. ಪುನರ್ವಸತಿಗೆ ಎಷ್ಟೇ ಖರ್ಚಾದರು ಅದನ್ನು ಮಾಡಲಿದ್ದೇನೆ, ಬೇರೆ ಯೋಜನೆ ನಿಲ್ಲಿಸಿ ಮಾಡಲಿದ್ದೇವೆ ಎಂದು ಆಶ್ವಾಸನೆ ನೀಡಿದರು.

ಸರ್ಕಾರಿ ನೌಕರರ ಸಂಘದ ನೌಕರರ ಒಂದು ದಿನದ ವೇತನ 150 ಕೋಟಿ ಕೊಡುವ ಭರವಸೆ ನೀಡಿದೆ ನಿಗಮ ಮಂಡಳಿಯಿಂದ 50 ಕೋಟಿ ಭರವಸೆ ನೀಡಿದ್ದಾರೆ. ಸುಧಾಮೂರ್ತಿ 10 ಕೋಟಿ, ವೀರಣ್ಣ ಚರಂತಿಮಠ ಸಂಸ್ಥೆ 2 ಕೋಟಿ,, ಹಾಲು‌ ಉತ್ಪಾದಕರು 1 ಕೋಟಿ ಕೊಟ್ಟಿದ್ದಾರೆ. ಶಾಸಕರ‌ ಕ್ಷೇಮಾಭಿವೃದ್ಧಿ ನಿಧಿಯಿಂದ 2 ಕೋಟಿ ಕೊಡಲಾಗಿದೆ.
ಕಳದ ಬಾರಿ ಕೊಡಗು ನೆರೆ ವೇಳೆ 1 ಕೋಟಿ ಶಾಸಕರ ನಿಧಿಯಿಂದ ಕೊಡಲಾಗಿತ್ತು ಅದು ಬಳಕೆಯಾಗಿಲ್ಲ‌ ಇದಕ್ಕೆ ಬಳಸಲು‌ಸೂಚನೆ ನೀಡಿದ್ದೇನೆ ಎಂದರು.

ಶಕ್ತಿ ಇರುವ ಕೈಗಾರಿಕೋದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡುವಂತೆ ಸಿಎಂ ಮನವಿ ಮಾಡಿದರು.
ಪೊಲೀಸ್, ಸಾರಿಗೆ ಇಲಾಖೆ 1 ದಿನದ ವೇತನ ನೀಡಲು ಒಪ್ಪಿಕೊಂಡಿದ್ದಾರೆಎಲ್ಲರ ಸಹಕಾರದ ಮಂದಿಯ ಶಾಶ್ವತ ಪುನರ್ವಸತಿ .ಆಗಬೇಕು ಆ ದಿಕ್ಕಿನಲ್ಕಿ ಏನೇ‌ನು ಮಾಡಬೇಕೋ ಮಾಡಲಿದ್ದೇನೆ ಎಂದರು.

ಕೊಡಗಿಗೆ ಕ್ಯಾಪ್ಟರ್ ಹೋಗಲ್ಲ, ಎಲ್ಲಿ ಹೋಗಲು ಸಾಧ್ಯವಾಗಲಿದೆ ಎಂದು ನೋಡಿ ಎರಡು ದಿನ ಪ್ರವಾಸ ಮಾಡಲಿದ್ದೇನೆ ಎಂದರು.

ಸಧ್ಯದ ಮಾಹಿತಿಯಂತೆ 6000 ಕೋಟಿ ನಷ್ಟವಾಗದೆ.ತಕ್ಷಣ ಮೂರು ಸಾವಿರ ಕೋಟಿ ಬಿಡುಗಡೆ ಮಾಡಲು ಕೇಂದ್ರಕ್ಕೆ ಪತ್ರ ಬರೆಯಲಾಗುತ್ತಿದೆ ಇದು ಈಗಿನ ಅಂದಾಜು, ಇದು ಹೆಚ್ಚಾಗಲಿದೆ, ನಿರ್ಮಲಾ ಸೀತಾರಾಮನ್ ಅವರನ್ನೇ ಪಿಎಂ ಕಳಿಸಿದ್ದಾರೆ ಎಂದರೆ ಅವರಿಗೆ ಪರಿಸ್ಥಿತಿ ಗಂಭೀರತೆ ಅರ್ಥವಾಗಿದೆ,ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವುದಕ್ಕಿಂತ ಪರಿಹಾರ ಮುಖ್ಯ ಆ ಕೆಲಸ ಮಾಡಲಾಗುತ್ತಿದೆ ಎಂದರು.

30 ಸಾವಿರ ಜನಾವುವಾರಿಗೆ ಪರಿಹಸರ, ಜನರಿಗೆ 5 ಲಕ್ಷ..

ಮಹಾರಾಷ್ಟ್ರ ಸಿಎಂ‌ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಎರಡು ರಾಜ್ಯದಲ್ಲಿ ಒಂದೇ ಪರಿಸ್ಥಿತಿ, ಅದಕ್ಕಾಗಿಯೇ ಹೆಚ್ಚು ನೀರು ಬರುತ್ತಿದೆ,ಈಗ ಮಳೆ ಕಡಿಮೆಯಾಗುತ್ತಿದ್ದು ನೆರೆ ಕಡಿಮೆಯಾಗುವ ವಿಶ್ವಾಸವಿದೆ ಎಂದರು.

ರಕ್ಷಣಾ ಕೇಂದ್ರದಲ್ಲಿ ಇರುವವರು ಪರ್ಯಾಯ ವ್ಯವಸ್ಥೆ ಆಗುವವರೆಗೆ ಗಂಜಿ ಕೇಂದ್ರದಲ್ಲಿ ಇರಲು ವ್ಯವಸ್ಥೆ ಮಾಡಬೇಕು, ಕೆಲ‌ಗ್ರಾಮ ಸಂಪೂರ್ಣ ಸ್ಥಳಾಂತರ ಮಾಡಬೇಕು ಅದಕ್ಕೆ ಭೂಮಿ ಖರೀದಿಸಬೇಕಿದೆ ಸಾಕಷ್ಟು ಸವಾಲುಗಳಿವೆ ಅದನ್ನು ಎದುರಿಸಲಿದ್ದೇವೆ ಎಂದರು.

ಸಚಿವ ಸಂಪುಟ ಇಲ್ಲದೇ ಇರಬಹುದು ಆದರೆ ನಮ್ಮೆಲ್ಲಾ ಶಾಸಕರು ಮಂತ್ರಿಗಳ ರೀತಿ ಕೆಲಸ ಮಾಡುತ್ತಿದ್ದಾರೆ ,ಬೇರೆ ಪಕ್ಷದ ಶಾಸಕರ ಕೂಡ ಕೈ ಜೋಡಿಸಿದ್ದಾರೆ, ಅಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಮಂತ್ರಿಗಳು ಇಲ್ಲ ಎನ್ನುವುದರಿಂದ ಪರಿಹಾರ ಕಾರ್ಯಕ್ಕೆ ತೊಂದರೆಯಾಗಿದೆ ಎನ್ನುವುದರಲ್ಲಿ ಗುಲಗಂಜಿಯಷ್ಟೂ ಸತ್ಯವಿಲ್ಲ ಎಂದರು.

856 ಕೋಟಿ ನರೇಗಾ ಹಣ ಬಿಡುಗಡೆ 126 ಕೋಟಿ‌ ಎಸ್ ಡಿಆರ್ಎಫ್ ಹಣ ಬಿಡುಗಡೆ, ತಕ್ಷಣ ನಿರ್ಮಲಾ‌ ಸೀತಾರಸಮನ್ ರನ್ನು ಕಳಿಸಿದ್ದಾರೆ, ನಾವು ಕೇಳಿದ ಎಲ್ಲವನ್ನೂ ಕೂಡಲೇ ಕಳಿಸಿದೆ ಕೇಂದ್ರದಿಂದ ಯಾವುದೇ ವಿಳಂಬವಾಗಿಲ್ಲ ಎಂದರು.

ನಾನು ಎಲ್ಲಾ‌ಕಡೆ ಹೋಗಲು ಸಾಧ್ಯವಿಲ್ಲ, ತುಂಬಾ ಹಾನಿ‌ ಇರೋ ಕಡೆ ಹೋಗಲಿದ್ದೇನೆ.ಶಾಶತ್ವರ ಪರಿಹಾರಕ್ಕೆ ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ ಇದಕ್ಕೆ‌ ತಿಂಗಳುಗಟ್ಟಲೇ ಕಾಲಾವಕಾಶ ಬೇಕು.ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಅನ್ನೋ ಭಾವನೆ ಇಟ್ಟುಕೊಂಡಿಲ್ಲ‌ ಎಲ್ಲವನ್ನೂ ಸಮಾನವಾಗಿ ನೋಡುತ್ತಿದ್ದೇವೆ ಎಂದು ತಾರತಮ್ಯದ ಆರೋಪ ತಳ್ಳಿಹಾಕಿದರು.

ದೆಹಲಿಗೆ ಹೋದಾಗಲೇ ಸಂಪುಟದ ಬಗ್ಗೆ ನಿರ್ಧರಿಸಿ ಬರಬೇಕಿತ್ತು ಆದರೆ ರಾಜ್ಯದಲ್ಲಿ ನೆರೆ ಹಾನಿ ಸಂಭವಿಸಿದ ಕಾರಣ ವಾಪಾಸ್ಸಾದೆ ಎಷ್ಟು‌ ಸಾಧ್ಯವೋ ಕಅಷ್ಟು ಬೇಗ ಸಂಪುಟ ಪುನಾರಚನೆ ಮಾಡುತ್ತೇವೆ ಎಂದರು.

Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.