ಬೆಂಗಳೂರು: ಶಿರಡಿಗೆ ತೆರಳಿದ್ದ ಸಚಿವ ಶಿವಶಂಕರ ರೆಡ್ಡಿ ದೇವರ ದರ್ಶನ ಮಾಡಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಚುನಾವಣೆ ಎದುರಿಸಲು ನಾವು ಸಿದ್ಧ ಎಂದು ಹೇಳುವ ಮೂಲಕ ಸರ್ಕರ ಪತನದ ಸೂಚನೆ ನೀಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ.
ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನ ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೆಯದು ಎಂದು ಹೇಳುವ ಮೂಲಕ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದರು.