ಬೆಂಗಳೂರು: ಗೊಂದಲದಿಂದಾಗಿ ನಮ್ಮ ಸರ್ಕಾರ ಬಿದ್ದು ಹೋಗಿದೆ. ಆದರೆ ನಾವ್ಯಾರೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದೇ ವರ್ಷದಲ್ಲಿ ಎರಡೆರಡು ಚುನಾವಣೆ ಎದುರಿಸೋದು ಕಷ್ಟ. ಮಧ್ಯಂತರ ಚುನಾವಣೆ ಬರುತ್ತೆ ಎಂದು ನಿರ್ದಿಷ್ಟವಾಗಿ ಹೇಳೋದು ಕಷ್ಟ. ಪ್ರಜಾಪ್ರಭುತ್ವ ದೇಶದಲ್ಲಿ ವರ್ಷಕ್ಕೊಂದು ಚುನಾವಣೆ ಸೂಕ್ತ ಅಲ್ಲ. ಒಂದು ಬಾರಿ ಜನಾದೇಶ ಆದ ಬಳಿಕ ಐದು ವರ್ಷಗಳ ಕಾಲ ಸರ್ಕಾರ ಅಧಿಕಾರದಲ್ಲಿರಬೇಕು ಎಂದರು.
ಈ ಸರ್ಕಾರ ಬೀಳಬಾರದು, ಎರಡು ವರ್ಷ ಕೆಲಸ ಮಾಡಲಿ ಅನ್ನುವ ಬಯಕೆ ನಮಗೂ ಇದೆ. ಹೀಗೆ ಬಯಸುವುದು ತಪ್ಪಾ ಎಂದು ನಾಡಗೌಡ ಪ್ರಶ್ನಿಸಿದರು. ಇನ್ನು ಸಣ್ಣಪುಟ್ಟ ಅಸಮಧಾನ ಜೆಡಿಎಸ್ನಲ್ಲಿ ಇದ್ದರೆ ಪಕ್ಷದ ವರಿಷ್ಠರಾದ ದೇವೇಗೌಡರು ಬಗೆಹರಿಸ್ತಾರೆ ಎಂದು ಮಾಜಿ ಸಚಿವ ತಿಳಿಸಿದರು.