ETV Bharat / state

ಮತಗಟ್ಟೆ ಗೌಪ್ಯತೆ ಕಾಪಾಡದಿದ್ದರೆ ಕ್ರಿಮಿನಲ್ ಕೇಸ್: ಮಂಜುನಾಥ್ ಪ್ರಸಾದ್ - ಲೋಕಸಭಾ ಚುನಾವಣೆ

ಪ್ರತಿಯೊಬ್ಬ ಮತದಾರರು ಗೌಪ್ಯತೆಯನ್ನು ಕಾಪಾಡುವುದು ಮುಖ್ಯವಾಗಿದ್ದು, ಓಟು ಮಾಡಿರುವುದನ್ನು ಅಥವಾ ಯಾರಿಗೆ ಓಟ್ ಮಾಡಲಾಗಿದೆ ಎಂಬುದರ ಫೋಟೋ ಅಥವಾ ವೀಡಿಯೋ ಮಾಡುವುದು ಅಪರಾಧ‌. ಅಲ್ಲದೆ ಮತಗಟ್ಟೆಯ ಒಳಗೆ ಯಾವುದೇ ಹರಿತವಾದ ವಸ್ತು ಅಥವಾ ಸ್ಪೋಟಕಗಳನ್ನು ಕೊಂಡೊಯ್ಯದಂತೆ ಮತಗಟ್ಟೆ ಸಿಬ್ಬಂದಿ ಪರಿಶೀಲಿಸಲಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಮಂಜುನಾಥ್ ಪ್ರಸಾದ್
author img

By

Published : Apr 10, 2019, 5:15 PM IST

ಬೆಂಗಳೂರು: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಅರ್ಹ ಮತದಾರನೊಬ್ಬನ ಮತದಾನದ ದಿನ ಹೇಗಿರಬೇಕು, ಯಾವ ರೀತಿ ಮತ ಚಲಾಯಿಸಬೇಕು, ಏನು ಮಾಡಿದ್ರೆ ಸರಿ, ಯಾವುದು ತಪ್ಪು ಎಂಬ ಎಲ್ಲಾ ವಿಷಯಗಳಿಗೂ ಚುನಾವಣಾ ಆಯೋಗ ನಿಯಮಗಳನ್ನು ಮಾಡಿದೆ.

ಪ್ರಮುಖವಾಗಿ ಮತದಾರನೊಬ್ಬ ತನ್ನ ಮತಗಟ್ಟೆಗೆ ಹೋಗಿ ಮತಚಲಾಯಿಸುವಾಗ ಮೊಬೈಲ್ ಫೋನ್ ಅಥವಾ ಕ್ಯಾಮರಾಗಳನ್ನು ಒಳಗೆ ತೆಗೆದುಕೊಂಡು ಹೋಗಬಾರದು ಎಂಬ ನಿಯಮವಿದೆ. ಮೊಬೈಲ್​ಗಳಿಗೆ ಅವಕಾಶ ಕೊಟ್ಟರೂ ಸಹ ಮತಗಟ್ಟೆಯ ಒಳಗೆ ಫೋಟೋ ಕ್ಲಿಕ್ಕಿಸುವುದಾಗಲಿ ಅಥವಾ ಯಾವುದೇ ರೀತಿಯಲ್ಲಿ ಮತಗಟ್ಟೆಯ ಗೌಪ್ಯತೆಯನ್ನು ಹೊರಗಡೆ ಬಹಿರಂಗಪಡಿಸುವ ಪ್ರಯತ್ನ ಪಟ್ಟರೆ ಆತನ ವಿರುದ್ಧ ಚುನಾವಣಾ ಆಯೋಗದ ನೀತಿಯ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಾಗಲಿದೆ.

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್

ಹೀಗಾಗಿ ಪ್ರತಿಯೊಬ್ಬ ಮತದಾರ ಮತದಾನದ ಬಗ್ಗೆ ಗೌಪ್ಯತೆಯನ್ನು ಕಾಪಾಡಬೇಕಿದೆ. ಓಟ್ ಮಾಡಿರೋದನ್ನು ಅಥವಾ ಯಾರಿಗೆ ಓಟ್ ಮಾಡಲಾಗಿದೆ ಎಂಬುದರ ಫೋಟೋ ಅಥವಾ ವಿಡಿಯೋ ಮಾಡುವುದು ಅಪರಾಧ‌. ಅಲ್ಲದೇ ಮತಗಟ್ಟೆಯ ಒಳಗೆ ಯಾವುದೇ ಹರಿತವಾದ ವಸ್ತು, ಸ್ಪೋಟಕಗಳನ್ನು ಕೊಂಡೊಯ್ಯದಂತೆ ಮತಗಟ್ಟೆ ಸಿಬ್ಬಂದಿ ಪರಿಶೀಲಿಸಲಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.

ಚುನಾವಣೆಯ ದಿನ ಮತದಾರರು, ಗುರುತಿನ ಚೀಟಿ (ಎಪಿಕ್) ಹಾಗೂ ಮತದಾನದ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಮತಗಟ್ಟೆಗೆ ಹೋಗಬೇಕು. ಎಪಿಕ್ ಕಾರ್ಡ್ ಬದಲು ಹನ್ನೊಂದು ಬೇರೆ ಬೇರೆ ರೀತಿಯ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು.

ಮತಗಟ್ಟೆಯ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕು. ಮತಗಟ್ಟೆ ಅಧಿಕಾರಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಪರಿಶೀಲಿಸಿ, ನಿಗದಿತ ಬೆರಳಿಗೆ ಶಾಯಿಯ ಗುರುತನ್ನು ಹಾಕಿ, ಸಹಿ ಪಡೆಯುತ್ತಾರೆ. ಬಳಿಕ ಇವಿಎಂ ಮೆಷಿನ್​ನಲ್ಲಿ ಹಸಿರು ದೀಪ ಉರಿಯುತ್ತಿರುವುದನ್ನು ಪರಿಶೀಲಿಸಿ, ತಮ್ಮ ಅಭ್ಯರ್ಥಿಯ ಪರ ಮತಚಲಾಯಿಸಬೇಕು. ಮತ ಚಲಾಯಿಸಿದ ಬಳಿಕ ಆ ಅಭ್ಯರ್ಥಿಯ ಹೆಸರು/ಚಿಹ್ನೆಯ ಎದುರು ಕೆಂಪು ದೀಪ ಉರಿಯುತ್ತದೆ. ಆಯ್ಕೆ ಮಾಡಿದ ಅಭ್ಯರ್ಥಿ ಹೆಸರನ್ನು ವಿವಿ ಪ್ಯಾಟ್​ನಲ್ಲಿ ಏಳು ಸೆಕೆಂಡ್​ಗಳವರೆಗೆ ನೋಡಬಹುದು.

ಇಷ್ಟೆಲ್ಲಾ ಮಾಹಿತಿಗಳಿರುವ ಒಂದು ಮಾರ್ಗದರ್ಶಿ ಕೈಪಿಡಿಯನ್ನು ಚುನಾವಣಾ ಸಿಬ್ಬಂದಿಗಳು ಪ್ರತಿ ಮನೆಗೆ ಮತದಾನದ ಚೀಟಿಯೊಡನೆ ನೀಡಿರುತ್ತಾರೆ. ಹೀಗಾಗಿ ಎಲ್ಲಾ ಸಿದ್ಧತೆಗಳೊಂದಿಗೆ ಮತದಾನ ಮಾಡಬಹುದು. ಯಾವುದೇ ಗೊಂದಲ ಇದ್ದಲ್ಲಿ 1950 ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಮಾಹಿತಿ ಪಡೆಯಬಹುದು. ಇನ್ನು ದಿವ್ಯಾಂಗರಿಗೆ, ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

Intro:ಮತಗಟ್ಟೆ ಗೌಪ್ಯತೆ ಕಾಪಾಡದಿದ್ದರೆ ಕ್ರಿಮಿನಲ್ ಕೇಸ್ ದಾಖಲು- ಮತದಾರ ಮತದಾನ ಮಾಡುವ ವಿಧಾನಗಳೇನು?

ಬೆಂಗಳೂರು- ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಅರ್ಹ ಮತದಾರನೊಬ್ಬ ಮತದಾನದ ದಿನ ಹೇಗಿರಬೇಕು, ಯಾವ ರೀತಿ ಮತಚಲಾಯಿಸಬೇಕು, ಏನು ಮಾಡಿದ್ರೆ ಸರಿ, ಯಾವುದು ತಪ್ಪು ಎಂಬೆಲ್ಲದಕ್ಕೂ ಚುನಾವಣಾ ಆಯೋಗ ನಿಯಮಗಳನ್ನು ಮಾಡಿದೆ.
ಪ್ರಮುಖವಾಗಿ ಮತದಾರನೊಬ್ಬ ತನ್ನ ಮತಗಟ್ಟೆಗೆ ಹೋಗಿ ಮತಚಲಾಯಿಸುವಾಗ ಮೊಬೈಲ್ ಫೋನ್ ಅಥವಾ ಕ್ಯಾಮರಾಗಳನ್ನು ಮತಗಟ್ಡೆಯ ಒಳಗೆ ತೆಗೆದುಕೊಂಡು ಹೋಗಬಾರದು ಎಂಬ ನಿಯಮವಿದೆ. ಮೊಬೈಲ್ ಗಳಿಗೆ ಅವಕಾಶ ಕೊಟ್ಟರೂ ಸಹ ಮತಗಟ್ಟೆಯ ಒಳಗೆ ಫೋಟೋ ಕ್ಲೊಕ್ಕಿಸುವುದಾಗಲೀ, ಅಥವಾ ಯಾವುದೇ ರೀತಿಯಲ್ಲಿ ಮತಗಟ್ಟೆಯ ಗೌಪ್ಯತೆಯನ್ನು ಹೊರಗಡೆ ಬಹಿರಂಗ ಪಡಿಸುವ ಪ್ರಯತ್ನ ಪಟ್ಟರೆ ಆತನ ವಿರುದ್ಧ ಚುನಾವಣಾ ಆಯೋಗದ ನೀತಿಯ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಾಗಲಿದೆ.
ಹೀಗಾಗಿ ಪ್ರತಿಯೊಬ್ಬ ಮತದಾರ ಗೌಪ್ಯತೆಯನ್ನು ಕಾಪಾಡುವುದು ಪ್ರಮುಖವಾಗಿದ್ದು, ಓಟ್ ಮಾಡಿರೋದನ್ನು, ಅಥವಾ ಯಾರಿಗೆ ಓಟ್ ಮಾಡಲಾಗಿದೆ ಎಂಬುದರ ಫೋಟೋ ಅಥವಾ ವೀಡಿಯೋ ಮಾಡೋದು ಅಪರಾಧ‌. ಅಲ್ಲದೆ ಮತಗಟ್ಟೆಯ ಒಳಗೆ ಯಾವುದೇ ಹರಿತವಾದ ವಸ್ತು, ಅಥವಾ ಸ್ಪೋಟಕಗಳನ್ನು ಕೊಂಡೊಯ್ಯದಂತೆ ಮತಗಟ್ಟೆ ಸಿಬ್ಬಂದಿಗಳು ಪರಿಶೀಲಿಸಲಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಇನ್ನು ಚುನಾವಣೆಯ ದಿನ ಮತದಾರ , ಮತದಾರರ ಗುರುತಿನ ಚೀಟಿ (ಎಪಿಕ್) ಹಾಗೂ ಮತದಾನದ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಮತಗಟ್ಟೆಗೆ ಹೋಗಬೇಕಾಗುತ್ತದೆ. ಎಪಿಕ್ ಕಾರ್ಡ್ ಬದಲು ಹನ್ನೊಂದು ಬೇರೆ ಬೇರೆ ರೀತಿಯ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು.
ಮತಗಟ್ಟೆಯ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಮತಗಟ್ಟೆ ಅಧಿಕಾರಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರೋದನ್ನು ಪರಿಶೀಲಿಸಿ, ನಿಗದಿತ ಬೆರಳಿಗೆ ಶಾಯಿಯ ಗುರುತನ್ನು ಹಾಕಿ, ಸಹಿ ಪಡೆಯುತ್ತಾರೆ. ಬಳಿಕ ಇವಿಮ್ ಮೆಷಿನ್ ನಲ್ಲಿ ಹಸಿರು ದೀಪ ಉರಿಯುತ್ತಿರೋದನ್ನು ಪರಿಶೀಲಿಸಿ, ತಮ್ಮ ಅಭ್ಯರ್ಥಿಯ ಪರ ಮತಚಲಾಯಿಸಬೇಕು. ಮತ ಚಲಾಯಿಸಿದ ಬಳಿಕ ಆ ಅಭ್ಯರ್ಥಿಯ ಹೆಸರು/ಚಿಹ್ನೆಯ ಎದುರು ಕೆಂಪು ದೀಪ ಉರಿಯುತ್ತದೆ. ಆಯ್ಕೆ ಮಾಡಿದ ಅಭ್ಯರ್ಥಿ ಹೆಸರನ್ನು ವಿವಿ ಪ್ಯಾಟ್ ನಲ್ಲಿ ಏಳು ಸೆಕೆಂಡ್ ಗಳವರೆಗೆ ನೋಡಬಹುದು.

ಇಷ್ಟೆಲ್ಲಾ ಮಾಹಿತಿಗಳಿರುವ ಒಂದು ಮಾರ್ಗದರ್ಶಿ ಕೈಪಿಡಿಯನ್ನು, ಚುನಾವಣಾ ಸಿಬ್ಬಂದಿಗಳು ಪ್ರತೀ ಮನೆಗೆ ಮತದಾನದ ಚೀಟಿಯೊಡನೆ ನೀಡಿರುತ್ತಾರೆ. ಹೀಗಾಗಿ ಎಲ್ಲಾ ಸಿದ್ಧತೆಗಳೊಂದಿಗೆ ಮತದಾನ ಮಾಡಬಹುದು. ಯಾವುದೇ ಗೊಂದಲ ಇದ್ದಲ್ಲಿ 1950 ನಂಬರಿಗೆ ಕಾಲ್ ಮಾಡಿ ಮಾಹಿತಿ ತಿಳಿಯಬಹುದು. ಅಥವಾ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಮಾಹಿತಿ ಪಡೆಯಬಹುದು. ಇನ್ನು ದಿವ್ಯಾಂಗರಿಗೆ, ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

ಸೌಮ್ಯಶ್ರೀ

Body:..

Conclusion:...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.