ಬೆಂಗಳೂರು: ಇ ವಿಧಾನ ಅನಷ್ಠಾನದ ಬಗ್ಗೆ ಬ್ರಿಟಿಷ್ ಆಡಳಿತ ಮನಸ್ಥಿತಿ ಇರುವುದರಿಂದ ಜಾರಿಗೆ ತರಲು ಕಷ್ಟವಾಗುತ್ತಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿಂದು ಈ ಕುರಿತಂತೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ಅಧಿಕಾರಿ ಶಾಹಿಯ ಧನದಾಹಿಯ ಮಾನಸಿಕತೆಯ ಪರಿಣಾಮ ಸಂಪುಟ ಒಪ್ಪಿಕೊಂಡ ಮೇಲೂ ಇ ವಿಧಾನ ಅನುಷ್ಠಾನ ಜಾರಿಗೆ ತರಲು ಮೂರು ಜನ ಮುಖ್ಯ ಕಾರ್ಯದರ್ಶಿಗಳನ್ನು ನೋಡಿದೆ. ಅಧಿಕಾರಿಗಳ ಅತ್ಯಂತ ಬೇಜವಾಬ್ದಾರಿಯುತ ವರ್ತನೆ ಇದು. ನಾವು ಬೆಂಗಳೂರನ್ನು ಐಟಿ ಹಬ್ ಅಂತ ಕರೆಯುತ್ತೇವೆ. ಅದರೆ ಇಲ್ಲಿಯೇ ಇ ವಿಧಾನ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲು ನಾಚಿಕೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆ: ವಿಧಾನಸಭೆಯ ಅಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಸ್ಪೀಕರ್ ಕಾಗೇರಿ ಪುಸ್ತಕ ಬಿಡುಗಡೆ ಮಾಡಿದರು. ಇದಾದ ಬಳಿಕ ಮಾತನಾಡಿ, ಹಿಂದೆ ಎರಡು ವರ್ಷ ಪೂರೈಸಿದಾಗ ಇದೇ ರೀತಿ ಒಂದು ಪುಸ್ತಕ ಬೀಡುಗಡೆ ಮಾಡಿದ್ದೆ. ನಾನು ಸ್ಪೀಕರ್ ಆಗಿದ್ದಾಗಿನಿಂದ ಎಷ್ಟು ಕೆಲಸ ಮಾಡಿದೀನಿ ಅನ್ನೋದು ಜನರಿಗೆ ಗೊತ್ತಾಗಬೇಕು. ಅದಕ್ಕಾಗಿ ಈ ಪುಸ್ತಕ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ನಾವು ಏನು ಮಾಡಿದ್ದೇವೆ ಅನ್ನೋದರ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಇದನ್ನೂ ಓದಿ:ರಾಜ್ಯಪಾಲ ಗೆಹ್ಲೋಟ್ ಭೇಟಿ ಮಾಡಿ ಮಾತುಕತೆ ನಡೆಸಿದ ಯಡಿಯೂರಪ್ಪ