ಬೆಂಗಳೂರು:ಕೊರೊನಾ ಇರುವ ಸಂಧರ್ಭದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ಇರುವ ಕಾರಣ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರಿಗೆ ತಂತ್ರಜ್ಞಾನದ ಮೂಲಕ ದಂಡ ವಿಧಿಸಿದ್ದಾರೆ.
ಪೊಲೀಸರು ರಸ್ತೆಯ ಬಳಿ ಇಲ್ಲವೆಂದು ರಾಜಾರೋಷಾವಾಗಿ ವಾಹನ ಸವಾರರು ಓಡಾಡಿದ್ರು. ಸದ್ಯ ಪೊಲೀಸರು ಸಂಚಾರ ಕಾಣ್ಗಾವಲು ಕ್ಯಾಮರಾ, ಸಂಚಾರ ಪೊಲೀಸರ ಡಿಜಿಟಲ್ ಕ್ಯಾಮರಾ, ಪಬ್ಕಿಕ್ ಐ ಆ್ಯಪ್, ಹಾಗೆಯೇ ರೆಡ್ ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮರಾ, ಡಿಜಿ ಟ್ಯಾಬ್, ಐ ಚೇಂಜ್ ಮೈ ಸಿಟಿ, ಎಫ್ಟಿವಿಆರ್ ಮೊಬೈಲ್ ಆ್ಯಪ್, ಫೇಸ್ಬುಕ್, ಟ್ವಿಟರ್ ಹಾಗೂ ಸಾರ್ವಜನಿಕರ ದೂರುಗಳ ಮೂಲಕ ಮಾರ್ಚ್ನಿಂದ ಇಲ್ಲಿಯವರೆಗೆ 17,49,610 ಕೇಸ್ ದಾಖಲಿಸಿ 96,26,74,100 ದಂಡ ಹಾಕಿದ್ದಾರೆ.
ಯಾವೆಲ್ಲಾ ಪ್ರಕರಣ: ಸಿಗ್ನಲ್ ಜಂಪಿಂಗ್ -32,677, ಏಕಮುಖ ಸಂಚಾರ-17,254, ಮೊಬೈಲ್ ಬಳಕೆ-14011, ಜೀಬ್ರಾ ಕ್ರಾಸ್ ಮೇಲೆ ವಾಹನ ನಿಲುಗಡೆ- 10,723, ನೋ ಪಾರ್ಕಿಂಗ್- 7225, ಅತಿವೇಗದ ಚಾಲನೆ- 609, ತ್ರಿಬಲ್ ರೈಡಿಂಗ್- 2624, ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ- 386, ನೋಂದಣಿ ಫಲಕ ಇಲ್ಲದಿರುವುದು-12,289, ಹೆಲ್ಮೆಟ್ ಧರಿಸದೆ ಸಂಚಾರ ಮಾಡಿರವುದು-74,46,673, ಹಿಂಬದಿ ಸವಾರ ಹೆಲ್ಮೆಟ್ ಧರಿಸದೆ ಇರುವುದು- 425788 ಸೇರಿದಂತೆ ಹಲವು ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ತನಿಖೆ ಮುಂದುವರೆಸಿದ್ದಾರೆ.