ಜನತೆಗೆ ವಿಜಯದಶಮಿ, ಆಯುಧಪೂಜೆ ಶುಭಾಶಯ ಕೋರಿದ ‘ಕೈ’ ನಾಯಕರು - ಸಿದ್ದರಾಮಯ್ಯ, ಡಿಕೆಶಿ ರಿಂದ ವಿಜಯದಶಮಿ ಶುಭಾಶಯ
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಸೇರಿ ಮತ್ತಿತರ ನಾಯಕರು ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯ ಕೋರಿದ್ದಾರೆ.
![ಜನತೆಗೆ ವಿಜಯದಶಮಿ, ಆಯುಧಪೂಜೆ ಶುಭಾಶಯ ಕೋರಿದ ‘ಕೈ’ ನಾಯಕರು cong leader](https://etvbharatimages.akamaized.net/etvbharat/prod-images/768-512-9307732-thumbnail-3x2-cong-wish.jpg?imwidth=3840)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಜನತೆಗೆ ವಿಜಯ ದಶಮಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ತಮ್ಮ ಟ್ವೀಟ್ ಮೂಲಕ ಶುಭಾಶಯ ಕೋರಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶ್ರಮವನ್ನು ಗೌರವಿಸಿ ಆಯುಧ ಪೂಜೆಯನ್ನು ಮತ್ತು ಸತ್ಯ, ನ್ಯಾಯ ಮತ್ತು ಮನುಷ್ಯ ಪರ ಧರ್ಮಕ್ಕೆ ವಿಜಯವಾಗಲಿ ಎಂದು ಆಶಿಸಿ ವಿಜಯ ದಶಮಿಯನ್ನು ಆಚರಿಸೋಣ. ನಾಡ ಬಾಂಧವರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಟ್ವಿಟರ್ನಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು. ಈ ದೇಶಕ್ಕೆ ಹಾಗೂ ರಾಜ್ಯಕ್ಕೆ ಬಂದಿರುವ ಎಲ್ಲಾ ನೋವು, ಸಂಕಷ್ಟಗಳನ್ನು ದುರ್ಗಾ ದೇವಿಯು ದೂರ ಮಾಡಲಿ. ನವರಾತ್ರಿಯ ಸಂದರ್ಭದಲ್ಲಿ ಎಲ್ಲರ ಸಂಕಷ್ಟಗಳನ್ನು ನಿವಾರಿಸಿ, ಎಲ್ಲರ ಬದುಕಿನಲ್ಲಿ ಉತ್ತಮ ದಿನಗಳನ್ನು ನೀಡಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಹಲವಾರು ನಾಯಕರು ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.
TAGGED:
ಬೆಂಗಳೂರು ಲೇಟೆಸ್ಟ್ ನ್ಯೂಸ್