ETV Bharat / state

ವಿಧಾನಸೌಧ ಇಂದು ಖಾಲಿ ಖಾಲಿ.. ಬರೋರೂ ಇಲ್ಲ, ಹೋಗೋರು ಇಲ್ಲ - ಬಿಕೋ ಎನ್ನುತ್ತಿರುವ ವಿಧಾನಸೌಧ

ಬಿ.ಎಸ್.ಯಡಿಯೂರಪ್ಪ ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಬೆಳಗ್ಗೆ ಲವಲವಿಕೆಯಿಂದಿದ್ದ ಮಂತ್ರಿ ಮಂಡಲದ ಸಹೋದ್ಯೋಗಿಗಳು ಮಂಕಾಗಿ ಹೋದರು‌. ಯಾರೊಬ್ಬ ಮಾಜಿ ಸಚಿವರೂ ಸಹ ವಿಧಾನಸೌಧಕ್ಕೆ ಆಗಮಿಸಲಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ವಿಧಾನಸೌಧ ಇಂದು ಖಾಲಿ ಖಾಲಿಯಾಗಿ ಗೋಚರಿಸಿತು.

ವಿಧಾನಸೌಧ ಇಂದು ಖಾಲಿ ಖಾಲಿ
ವಿಧಾನಸೌಧ ಇಂದು ಖಾಲಿ ಖಾಲಿ
author img

By

Published : Jul 27, 2021, 3:15 PM IST

ಬೆಂಗಳೂರು: ನಿನ್ನೆಯವರೆಗೆ ಗಿಜಿಗಿಡುತ್ತಿದ್ದ ವಿಧಾನಸೌಧ ಇಂದು ಬಿಕೋ ಎನ್ನುತ್ತಿತ್ತು. ಬಿ.ಎಸ್.ಯಡಿಯೂರಪ್ಪನವರು ನಿನ್ನೆ ಬ್ಯಾಂಕ್ವೆಟ್ ಹಾಲ್​ನಲ್ಲಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ನಡೆಸಿದ ನಂತರ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬೆಳಗ್ಗೆ ಲವಲವಿಕೆಯಿಂದಿದ್ದ ಮಂತ್ರಿಮಂಡಲದ ಸಹೋದ್ಯೋಗಿಗಳು ಬಿಎಸ್‌ವೈ ರಾಜೀನಾಮೆ ನೀಡಿದ ತಕ್ಷಣ ಮಂಕಾಗಿ ಹೋದರು‌.

ಸಿಎಂ ರಾಜೀನಾಮೆ ನಡುವೆಯೇ ಮಂತ್ರಿಮಂಡಲವೂ ವಿಸರ್ಜನೆಗೊಂಡಿತು. ಮಧ್ಯಾಹ್ನದ ವೇಳೆಗೆ ವಿಧಾನಸೌಧದಲ್ಲಿದ್ದ ಜನಜಂಗುಳಿ ಕರಗಿತು. ಸಚಿವರೆಲ್ಲರೂ ಮಾಜಿಗಳಾಗುತ್ತಿದ್ದಂತೆಯೇ ವಿಧಾನಸೌಧ ಹಾಗೂ ವಿಕಾಸಸೌಧ ಖಾಲಿ ಖಾಲಿಯಾಗಿದೆ. ಸಚಿವರ ಕಚೇರಿಗಳಲ್ಲಿ ಅಳವಡಿಸಿದ್ದ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ. ಯಾರೊಬ್ಬ ಮಾಜಿ ಸಚಿವರು ಸಹ ವಿಧಾನಸೌಧಕ್ಕೆ ಇಂದು ಆಗಮಿಸಲಿಲ್ಲ.

ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಮಾತ್ರ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕಾರಣಿಗಳಾಗಲಿ, ಅವರನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಾಗಲಿ ಕಂಡುಬರಲಿಲ್ಲ. ಒಂದು ರೀತಿಯಲ್ಲಿ ಆಡಳಿತ ಯಂತ್ರ ಸ್ತಬ್ಧವಾದಂತೆ ಕಂಡುಬಂತು. ಪ್ರತಿದಿನ ನೂರಾರು ಕಾರುಗಳು ವಿಧಾನಸೌಧದಲ್ಲಿ ಕಂಡು ಬರುತ್ತಿದ್ದವು. ಆದರೆ, ಇಂದು ವಾಹನಗಳು ಸಹ ವಿರಳವಾಗಿತ್ತು.

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸದಾ ಜನರು ತಂಬಿರುತ್ತಿದ್ದರು. ಇಂದು ಯಾರೂ ಸಹ ಬರಲಿಲ್ಲ. ಮಾಜಿ ಸಚಿವರು ತಮ್ಮ ನಿವಾಸಗಳಲ್ಲೇ ಇದ್ದರೆ, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲದಲ್ಲಿದ್ದಾರೆ. ಇನ್ನೊಂದೆಡೆ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಹ ಸಿಎಂ ರೇಸ್‌ನಲ್ಲಿರುವವರ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.