ಬೆಂಗಳೂರು: ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ ಹಾಗೂ ಶಾಸಕರ ಭವನಗಳು ಬಣಗುಡುತ್ತಿವೆ.
ಇಂದಿನಿಂದ ಡಿಸೆಂಬರ್ 24ರ ವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಡೀ ಆಡಳಿತ ಯಂತ್ರವೇ ಅಲ್ಲಿಗೆ ಸ್ಥಳಾಂತರಗೊಂಡಿದೆ. ಸಚಿವರು, ಆಡಳಿತ, ಪ್ರತಿಪಕ್ಷದ ಶಾಸಕರು, ಹಿರಿಯ ಅಧಿಕಾರಿಗಳು, ಸಚಿವಾಲಯದ ಸಿಬ್ಬಂದಿ ಬೆಳಗಾವಿಗೆ ತೆರಳಿರುವುದರಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಶಾಸಕರ ಭವನ ಖಾಲಿ, ಖಾಲಿಯಾಗಿದೆ.
ವಿಧಾನಸೌಧ, ವಿಕಾಸಸೌಧದಲ್ಲಿ ಕೆಲವೇ ಅಧಿಕಾರಿಗಳು, ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಹೆಚ್ಚಾಗಿ ವಿಧಾನಸೌಧದ ಕಡೆ ಬರುತ್ತಿಲ್ಲ. ದಿನಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ತುಂಬಿರುತ್ತಿದ್ದ ವಿಧಾನಸೌಧದ ಕಾರಿಡಾರ್ಗಳು ಬಿಕೋ ಎನ್ನುತ್ತಿವೆ. ಇನ್ನು ಶಾಸಕರ ಭವದಲ್ಲೂ ಸಹ ಶಾಸಕರು ಇಲ್ಲದ ಕಾರಣ, ಅವರ ಬೆಂಬಲಿಗರು, ಕಾರ್ಯಕರ್ತರು ಬರದೇ ಬಣಗುಡುತ್ತಿದೆ.
ಇದನ್ನೂ ಓದಿ : ಕೃಷಿ ಬಳಕೆಗೆ ಭೂಮಿ ಪಡೆದು ಮನೆ ನಿರ್ಮಾಣಕ್ಕೆ ಮುಂದಾದರೆ ಸರ್ಕಾರ ತಡೆಯಲೇಬೇಕಾಗುತ್ತದೆ: ಮಾಧುಸ್ವಾಮಿ