ETV Bharat / state

ಮಹಾನವಮಿ ಪೂಜೆ.. ಶಕ್ತಿಸೌಧಕ್ಕೆ ನವ ವಧುವಿನ ಸಿಂಗಾರ..

ಬೆಂಗಳೂರಿನ ವಿಧಾನಸೌಧದಲ್ಲಿ ಮಹಾನವಮಿ ಅಂಗವಾಗಿ ಎಲ್ಲ ಶಾಸಕ, ಸಚಿವರ ಹಾಗೂ ಮುಖ್ಯಮಂತ್ರಿಗಳ ಕೊಠಡಿಗಳನ್ನು ಶೃಂಗಾರ ಮಾಡಿ, ಪೂಜೆ ಮಾಡಲಾಯಿತು.

ವಿಧಾನ ಸೌಧದಲ್ಲಿ ಮಹಾನವಮಿ ಪೂಜೆ
author img

By

Published : Oct 5, 2019, 4:10 PM IST

ಬೆಂಗಳೂರು: ಮಹಾನವಮಿ ಪೂಜೆಯ ಅಂಗವಾಗಿ ಶನಿವಾರ ವಿಧಾನಸೌಧದ ಶಾಸಕ, ಸಚಿವರ ಹಾಗೂ ವಿವಿಧ ಕೊಠಡಿಗಳನ್ನು ಹೂಗಳಿಂದ ಶೃಂಗರಿಸಲಾಗಿದೆ.

ವಿಧಾನಸೌಧದಲ್ಲಿ ಮಹಾನವಮಿ ಪೂಜೆ..

ಸೋಮವಾರ ಮಹಾನವಮಿ ಹಾಗೂ ಆಯುಧ ಪೂಜೆ ಇದ್ದು, ಎರಡು ದಿನ ಮೊದಲೇ ವಿಧಾನಸೌಧದಲ್ಲಿ ಆಯುಧ ಪೂಜೆಯ ಸಂಭ್ರಮಾಚರಣೆ ಮಾಡಲಾಯಿತು. ಸೋಮವಾರ ಮಹಾನವಮಿ ಇರುವುದರಿಂದ ಸರ್ಕಾರಿ ಕಚೇರಿಗಳು ರಜೆ ಹಾಗೂ ನಾಳೆ ಭಾನುವಾರವಿರುವುದರಿಂದ ಶನಿವಾರವೇ ಎಲ್ಲ ಪೂಜಾ ಕಾರ್ಯಕ್ರಮಗಳನ್ನು ಮುಗಿಸಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧದ ಮಹಿಳಾ ಸಿಬ್ಬಂದಿ ಪಟ್ಟೆ ಸೀರೆ ಹಾಕಿಕೊಂಡು, ತಮ್ಮ ಕಚೇರಿಗಳನ್ನು ಶೃಂಗರಿಸಿಕೊಳ್ಳುತ್ತಿದ್ದರು. ವಿಧಾನಸೌಧದ ಕಾರಿಡಾರ್​​ಗಳು ಬಣ್ಣ ಬಣ್ಣದ ರಂಗೋಲಿಗಳಿಂದ ಕಂಗೊಳಿಸುತ್ತಿದ್ದವು. ಒಂದೆಡೆ ಮಹಿಳಾ‌ ಸಿಬ್ಬಂದಿ ರಂಗೋಲಿ ಬಿಡಿಸುತ್ತಿದ್ದು, ಇನ್ನೊಂದೆಡೆ ಸಚಿವರು, ಅಧಿಕಾರಿಗಳ ಕಚೇರಿಗಳ ದ್ವಾರವನ್ನು ತೋರಣ, ಹೂಗಳಿಂದ ಅಲಂಕರಿಸಲಾಗುತ್ತಿತ್ತು.

ವಿಧಾನಸೌಧದಲ್ಲಿನ ಸಿಎಂ ಯಡಿಯೂರಪ್ಪ ಕೊಠಡಿ, ಸಚಿವ ಸಂಪುಟ ಸಭೆ ಕೊಠಡಿ ಸೇರಿದಂತೆ ಎಲ್ಲ ಸಚಿವರ ಕೊಠಡಿಗಳು ರಂಗೋಲಿ, ಹೂ ಅಲಂಕಾರಗಳಿಂದ ನಳನಳಿಸುತ್ತಿವೆ.

Intro:Body:KN_BNG_01_VIDHANSAUDHA_MAHANAVAMIPOOJE_SCRIPT_7201951

ಮಹಾನವಮಿ ಪೂಜೆ: ಹೂ ಅಲಂಕಾರ, ರಂಗೋಲಿಯಿಂದ ಕಂಗೊಳಿಸುತ್ತಿರುವ ವಿಧಾನಸೌಧ

ಬೆಂಗಳೂರು: ಮಹಾನವಮಿ ಪೂಜೆ ಪ್ರಯುಕ್ತ ಇಂದೇ ವಿಧಾನಸೌಧ ಮಧುವಣಗಿತ್ತಿ‌ತರ ಕಂಗೊಳಿಸುತ್ತಿದೆ.

ಸೋಮವಾರ ಮಹಾನವಮಿ, ಆಯುಧ ಪೂಜೆ ಇದ್ದು, ಎರಡು ದಿನ ಮೊದಲೇ ವಿಧಾನಸೌಧದಲ್ಲಿ ಆಯುಧಪೂಜೆಯ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಸೋಮವಾರ ಮಹಾನವಮಿ, ಸರ್ಕಾರಿ ರಜೆ. ನಾಳೆ ಭಾನುವಾರದ ರಜೆ. ಹಾಗಾಗಿ ಇಂದೇ ವಿಧಾನಸೌಧದಲ್ಲಿ ಮಹಾನವಮಿ ಪೂಜೆ ನೆರವೇರಿಸಲಾಗುತ್ತಿದೆ.

ವಿಧಾನಸೌಧ ಹಾಗೂ ವಿಕಾಸಸೌಧ ಮಹಿಳಾ ಸಿಬ್ಬಂದಿ ಪಟ್ಟೆ ಸೀರೆ ಹಾಕಿಕೊಂಡು, ತಮ್ಮ‌ ಕಚೇರಿಗಳನ್ನು ಶೃಂಗರಿಸಿಕೊಳ್ಳುತ್ತಿದ್ದಾರೆ. ವಿಧಾನಸೌಧದ ಕಾರಿಡಾರ್ ಗಳು ಬಣ್ಣ ಬಣ್ಣದ ರಂಗೋಲಿಗಳಿಂದ ಕಂಗೊಳಿಸುತ್ತಿದೆ. ಒಂದೆಡೆ ಮಹಿಳಾ‌ ಸಿಬ್ಬಂದಿ ರಂಗೋಲಿ ಬಿಡಿಸುತ್ತಿದ್ದು, ಇನ್ನೊಂದೆಡೆ ಸಚಿವರು, ಅಧಿಕಾರಿಗಳ ಕಚೇರಿಗಳ ದ್ವಾರವನ್ನು ತೋರಣ, ಹೂಗಳಿಂದ ಅಲಂಕರಿಸಲಾಗಿದೆ.

ವಿಧಾನಸೌಧದಲ್ಲಿನ ಸಿಎಂ ಯಡಿಯೂರಪ್ಪ ಕೊಠಡಿ, ಸಚಿವ ಸಂಪುಟ ಸಭೆ ಕೊಠಡಿ ಸೇರಿದಂತೆ ಎಲ್ಲ ಸಚಿವರ ಕೊಠಡಿಗಳು ರಂಗೋಲಿ, ಹೂ ಅಲಂಕಾರಗಳಿಂದ ನಳನಳಿಸುತ್ತಿವೆ.

ಕಚೇರಿಯೊಳಗಿನ ಕಂಪ್ಯೂಟರ್, ಪ್ರಿಂಟರ್ ಗಳಿಗೆ ಹೂಗಳನ್ನು ಮುಡಿಸಿ, ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಜತೆಗೆ ವಾಹನಗಳಿಗೂ ವಿಶೇಷ ಅಲಂಕಾರ ಮಾಡಲಾಗಿದೆ. ಬಹುತೇಕ ಸಚಿವರ ಗೈರು ಹಾಜರಿಯಲ್ಲಿ ಸಿಬ್ಬಂದಿಯಿಂದಲೇ ಪೂಜೆ‌ ನೆರವೇರಿಸಲಾಗುತ್ತಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.