ETV Bharat / state

ಎಚ್​3 ಎನ್2 ಸೇರಿ ಶೀತ ಜ್ವರ ಪ್ರಕರಣ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ - ಆರೋಗ್ಯ ಸಚಿವ ಡಾ ಕೆ ಸುಧಾಕರ್

ರಾಜ್ಯದಲ್ಲಿ ಎಚ್‌3 ಎನ್‌2 ಸೇರಿದಂತೆ ವಿವಿಧ ರೀತಿಯ ಶೀತ ಜ್ವರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

Guidelines issued by Health Department
ಡಾ.ಕೆ.ಸುಧಾಕರ್
author img

By

Published : Mar 6, 2023, 10:38 PM IST

ಬೆಂಗಳೂರು: ರಾಜ್ಯದಲ್ಲಿ ಎಚ್‌3 ಎನ್‌ 2 ಸೇರಿದಂತೆ ವಿವಿಧ ರೀತಿಯ ಶೀತ ಜ್ವರ ಪ್ರಕರಣ (ಸೀಸನಲ್ ಫ್ಲು-ಇನ್‌ಫ್ಲುಯೆಂಜಾ) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಸೋಂಕಿನ ಅಪಾಯ ಹೆಚ್ಚಿರುವ 15 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.

ತಾಂತ್ರಿಕ ಸಮಿತಿ ಸಭೆ: ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ತಾಂತ್ರಿಕ ಸಮಿತಿ ಸಭೆಯ ಬಳಿಕ ಆರೋಗ್ಯ ಇಲಾಖೆಯು ಸಭೆಯ ನಿರ್ಣಯಗಳನ್ನು ಆಧರಿಸಿ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಕಾಯಿಲೆ, ಹರಡುವ ವಿಧಾನ, ತಡೆಯಲು ಮಾಡಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಸೋಂಕು ಹೇಗೆ ಹರಡುತ್ತದೆ? : ಇನ್ಫ್ಲುಯೆಂಜಾ ಎ, ಎಚ್‌1ಎನ್‌1, ಎಚ್‌3ಎನ್‌2, ಇನ್ಫ್ಲುಯೆನ್ಸಾ ಬಿ, ಆರ್‌ಎಸ್ವಿ, ಅಡೆನೊ ವೈರಸ್ ಪ್ರಕರಣಗಳು ಸೀಸನಲ್ ಜ್ವರಗಳಾಗಿದ್ದು, ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಸಾಂಕ್ರಾಮಿಕ ಲಕ್ಷಣ ಹೊಂದಿವೆ. ಸೋಂಕಿತ ವ್ಯಕ್ತಿ ಕೆಮ್ಮು ಅಥವಾ ಸೀನಿನಿಂದ ಹೊರ ಹೊಮ್ಮುವ ಡ್ರಾಪ್ಲೆಟ್ಸ್‌ಗಳಿಂದ (ಹನಿ), ಸೋಂಕಿತ ವ್ಯಕ್ತಿಗಳ ಕೈ ಸ್ಪರ್ಷ ಹಾಗೂ ಸೋಂಕಿತ ಸ್ಥಳದಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: H3 N2 ವೈರಸ್ ಭೀತಿ: ರಾಜ್ಯದಲ್ಲಿ 26 ಕೇಸ್ ಪತ್ತೆ, ಮುಂಜಾಗ್ರತೆ ಅಗತ್ಯ ಎಂದ ಸಚಿವ ಸುಧಾಕರ್

ರೋಗ ಲಕ್ಷಣಗಳು: ಸಾಮಾನ್ಯವಾಗಿ ಈ ಸೋಂಕಿಗೆ ಒಳಗಾದವರಲ್ಲಿ ಚಳಿ - ಜ್ವರ, ಅಸ್ವಸ್ಥತೆ, ಊಟ ರುಚಿಸದಿರುವುದು, ವಾಂತಿ, ದೀರ್ಘಕಾಲಿನ ಒಣ ಕೆಮ್ಮು, ಮೈ-ಕೈ ನೋವು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ 5 ರಿಂದ 7 ದಿನಗಳಲ್ಲಿ ವಾಸಿಯಾಗಬಲ್ಲ ಲಕ್ಷಣಗಳು ಗಂಭೀರವಾಗಿ ಸೋಂಕಿತರಾದವರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೆಗೆ 3 ವಾರಗಳವರೆಗೆ ಕಾಡಬಹುದು. ಈ ಸೋಂಕಿನಿಂದ ಸಾವಿನ ಪ್ರಮಾಣ ಕಡಿಮೆಯಾದರೂ ನಿರ್ಲಕ್ಷ್ಯಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಸೋಂಕು ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರಂತಹ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವರ್ಗದವರಿಗೆ ಹೆಚ್ಚು ಅಪಾಯಕಾರಿ. ಜತೆಗೆ ಸ್ಟೆರಾಯ್ಡ್‌ನಂತಹ ದೀರ್ಘ ಕಾಲಿನ ಚಿಕಿತ್ಸೆ ಪಡೆದವರಿಗೂ ಹೆಚ್ಚು ಕಾಡಬಹುದು ಎಂದು ಹೇಳಿದೆ.
ಮಾರ್ಗಸೂಚಿಯಲ್ಲೇನಿದೆ?

  • ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
  • ಐಎಲ್‌ಐ (ಶೀತಜ್ವರ)- ಸಾರಿ (ಉಸಿರಾಟ ಸಮಸ್ಯೆ) ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು.
  • ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ಔಷಧ, ಉಪಕರಣ, ಪಿಪಿಇ ಕಿಟ್ ಸಿದ್ಧಪಡಿಸಿಕೊಳ್ಳಬೇಕು.
    ಐಸಿಯು ಸೇರಿದಂತೆ ಹೈರಿಸ್ಕ್ ಪ್ರದೇಶದಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಬೇಕು.
  • ಕೊರೋನಾ ನೆಗೆಟಿವ್ ವರದಿಯಿದ್ದರೂ ಮೃತಪಟ್ಟ ಸಾರಿ (ತೀವ್ರ ಉಸಿರಾಟ) ರೋಗಿಗಳ ಮಾದರಿಯನ್ನು ವಿಆರ್‌ಡಿಎಲ್ (ವೈರಾಣು) ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು.

ಇದನ್ನೂ ಓದಿ: ಅವಧಿಗೆ ಮುನ್ನ ತಾಯಿಗೆ ಹೆರಿಗೆ: 700 ಗ್ರಾಂ ತೂಕದ ಮಗು ಜನನ, ತಾಯಿ ಗರ್ಭದಂತೆ ವಾತಾವರಣ ಸೃಷ್ಟಿಸಿ ಗದಗ ವೈದ್ಯರಿಂದ ಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.