ETV Bharat / state

ಜಾನುವಾರುಗಳ ಕಾಲುಬಾಯಿ ರೋಗಕ್ಕೆ ಲಸಿಕೆ ಬೆಂಗಳೂರಿನಲ್ಲೇ ತಯಾರಿ

ಖಾಸಗಿ ಸಂಸ್ಥೆಯಿಂದ ಖರೀದಿಸುತ್ತಿದ್ದ ಜಾನುವಾರುಗಳ ಕಾಲುಬಾಯಿ ರೋಗದ ಲಸಿಕೆಯನ್ನ ಇನ್ನು ಮುಂದೆ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಬೆಂಗಳೂರಿನಲ್ಲೇ ತಯಾರಿಸಲಿದೆ.

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಎಸ್. ಎಂ ಭೈರೇಗೌಡ
author img

By

Published : Apr 8, 2019, 3:02 PM IST

ಬೆಂಗಳೂರು : ಜಾನುವಾರಗಳಿಗೆ ಕಾಡುವ ಬಹು ದೊಡ್ಡ ಸಮಸ್ಯೆ ಅಂದ್ರೆ ಅದು ಕಾಲುಬಾಯಿ ರೋಗ. ಇದು ಮಾರಣಾಂತಿಕ ಕಾಯಿಲೆಯೂ ಆಗಿದ್ದು, ಸದ್ಯ ಇಂತಹ ಮಾರಕ ಖಾಯಿಲೆಗೆ ಬೆಂಗಳೂರಿನಲ್ಲೇ ಔಷಧಿ ತಯಾರಿಕೆಗೆ ಸರ್ಕಾರ ಮುಂದಾಗಿದೆ.

ಕಾಲುಬಾಯಿ ರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅತಿ ಬೇಗನೇ ಜಾನಾರುದಿಂದ ಮತ್ತೊಂದಕ್ಕೆ ಹರಡುತ್ತದೆ. ನೇರ ಸಂರ್ಪಕ, ಗಾಳಿ, ಆಹಾರದಿಂದ ರಾಸುಗಳಿಗೆ ಹರಡುವ ಈ ಖಾಯಿಲೆಗೆ ಪಶುಸಂಗೋಪನ ಇಲಾಖೆಯಿಂದ ರೋಗ ನಿರೋಧಕ ಲಸಿಕೆ‌ ಹಾಕಿಸಲಾಗುತ್ತದೆ.‌

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಎಸ್. ಎಂ ಭೈರೇಗೌಡ

ಜಾನುವಾರುಗಳಿಗೆ ಹಾಕುವ ಎಲ್ಲಾ ಲಸಿಕೆಗಳನ್ನೂ ಭಾರತೀಯ ಪಶು ಸಂಶೋಧನಾ ಸಂಸ್ಥೆ ಸಿದ್ದಪಡಿಸುತ್ತದೆ. ಆದ್ರೆ ಈ ಕಾಲುಬಾಯಿ ರೋಗದ ಲಸಿಕೆಯನ್ನ ಖಾಸಗಿ ಸಂಸ್ಥೆಯಿಂದ ಖರೀದಿಸಬೇಕಿತ್ತು. ಸದ್ಯ ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ರಾಸುಗಳ ಕಾಲುಬಾಯಿ ರೋಗಕ್ಕೆ ಲಸಿಕೆ ತಯಾರಿಸಲು ಮುಂದಾಗಿದೆ.

ಲಸಿಕೆ ತಯಾರಿಕೆಗೆ ಈಗಾಗಲೇ ಸರ್ಕಾರದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ದವಾಗಿದ್ದು, ಯಲಹಂಕದಲ್ಲಿರುವ ಭಾರತೀಯ ಪಶು ಸಂಶೋಧನಾ ಸಂಸ್ಥೆಯಿಂದ 20 ಎಕರೆ ಜಾಗ ತೆಗೆದುಕೊಳ್ಳಲಾಗಿದೆ. ಇನ್ನು 3-4 ವರ್ಷಗಳಲ್ಲಿ ಲಸಿಕೆ ತಯಾರಿಸಲಾಗುತ್ತೆ ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕರಾಗಿರುವ ಎಸ್. ಎಂ ಭೈರೇಗೌಡ ಮಾಹಿತಿ ನೀಡಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.