ETV Bharat / state

ಕೊನೆಗೂ ತಮ್ಮ ಸೋಲಿನ ಕಾರಣ ಬಿಚ್ಚಿಟ್ಟ ವಿ.ಎಸ್. ಉಗ್ರಪ್ಪ: ಏನಂತೆ ಗೊತ್ತಾ?! - ಲೋಕಸಭೆ ಚುನಾವಣೆ ಫಲಿತಾಂಶ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಅವರು ಪ್ರಸಕ್ತ ಲೋಕಸಭೆ ಚುನಾವಣೆ ವೇಳೆಗೆ ಹಿಂದಿನ ಅಂತರಕ್ಕೆ ತದ್ವಿರುದ್ಧವಾಗಿ ಎದುರಾಳಿ ಅಭ್ಯರ್ಥಿಗೆ ಐವತ್ತು ಸಾವಿರ ಮತ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಇದರ ಅರ್ಥ ಇನ್ನೇನು ಎಂದು ಹೇಳುವ ಮೂಲಕ ಇವಿಎಂ ಕಾರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿ.ಎಸ್. ಉಗ್ರಪ್ಪ
author img

By

Published : Sep 9, 2019, 11:26 PM IST

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 100 ದಿನಗಳ ನಂತರ ತಮ್ಮ ಸೋಲಿನ ಕಾರಣವನ್ನು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಬಿಚ್ಚಿಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 2018 ರ ಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದೆ. ಕೇವಲ ನಾಲ್ಕೈದು ತಿಂಗಳ ಹಿಂದೆ ಈ ಗೆಲವು ಲಭಿಸಿತ್ತು. ಆದರೆ ಪ್ರಸಕ್ತ ಲೋಕಸಭೆ ಚುನಾವಣೆ ವೇಳೆಗೆ ಹಿಂದಿನ ಅಂತರಕ್ಕೆ ತದ್ವಿರುದ್ಧವಾಗಿ ಎದುರಾಳಿ ಅಭ್ಯರ್ಥಿಗೆ ಐವತ್ತು ಸಾವಿರ ಮತ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಅಂದರೆ ಇದರ ಅರ್ಥ ಇನ್ನೇನು ನನಗೂ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಅನುಮಾನವಿದೆ. ಕ್ಷೇತ್ರದ ಜನ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಸಂಸದನಾಗಿ ನಾನು ಉತ್ತಮ ಕೆಲಸ ನಿರ್ವಹಿಸಿಲ್ಲ ಎಂದಿದ್ದರೆ ಪರವಾಗಿರಲಿಲ್ಲ. ಉತ್ತಮ ಸಂಸದ ಎಂದು ಕೂಡ ಹೆಸರು ಸಂಪಾದಿಸಿದ್ದೆ. ಇದನ್ನು ಜನರೇ ಹೇಳುತ್ತಿದ್ದಾರೆ. ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಕಂಪ್ಲಿ ಹಾಗೂ ಸಂಡೂರಿನಲ್ಲಿ ನನಗೆ ಲೀಡ್ ಸಿಕ್ಕಿತ್ತು. ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹೊಸಪೇಟೆ ಕ್ಷೇತ್ರಗಳಲ್ಲಿ ನನಗೆ ಲೀಡ್ ಸಿಕ್ಕಿಲ್ಲ. ಇದನ್ನು ಗಮನಿಸಿದರೆ ಕೆಲಭಾಗಗಳಲ್ಲಿ ಆಯ್ಕೆ ಮಾಡಿಕೊಂಡು ಇವಿಎಂ ತಿರುಚುವ ಕಾರ್ಯ ಮಾಡಿದ್ದಾರೆ ಎನ್ನುವ ಅನುಮಾನ ನನಗೆ ಇದೆ ಎಂದಿದ್ದಾರೆ.

ಸೋಲಿನ ಕಾರಣ ಬಿಚ್ಚಿಟ್ಟ ವಿ.ಎಸ್. ಉಗ್ರಪ್ಪ

ಇದು ನನ್ನದೊಂದೇ ಅಲ್ಲ ಜನಸಾಮಾನ್ಯರ ಮಾತು ಕೂಡಾ ಆಗಿದೆ. ಈ ರೀತಿ ಜನರ ಮನಸ್ಸಿನಲ್ಲಿರುವ ಭಾವನೆಯನ್ನು ಹೋಗಲಾಡಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಮಾಡಬೇಕಾಗಿದೆ. ಈ ಮೂಲಕ ನನಗೂ ಇರುವ ಅನುಮಾನವನ್ನು ಪರಿಹರಿಸಬೇಕೆಂದು ಎಂದು ಹೇಳಿ ತಮ್ಮ ಸೋಲಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಬೆಲೆ ಬರಲಿ:

ಜನರಲ್ಲಿ ಈ ವಿಚಾರವಾಗಿ ಇರುವ ಭಾವನೆಯನ್ನು ನಿವಾರಿಸಿ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವಂತ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ. ಇಲ್ಲವಾದರೆ ಜನರೇ ಒಂದಲ್ಲ ಒಂದು ದಿನ ತಿರುಗಿ ಬೀಳಲಿದ್ದಾರೆ. ನಮ್ಮ ಪಕ್ಷ ಕೂಡ ಜನಪರವಾಗಿ ಹೋರಾಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ. ಎನ್​ಡಿಎ ರಾಷ್ಟ್ರೀಯ ನಾಯಕರೇ ಲೋಕಸಭೆ ಚುನಾವಣೆಗೆ ಮುನ್ನ ಇಷ್ಟೊಂದು ಸ್ಥಾನಗಳು ಲಭಿಸಲಿವೆ ಎಂದು ಹೇಳಿರಲಿಲ್ಲ.

ಆದರೆ ಇವೆಲ್ಲವನ್ನೂ ಮೀರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂದಿನ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಅಂಕಿ ಅಂಶ ಹೇಳಿದ ಸಂಖ್ಯೆಯನ್ನೇ ತಲುಪಿದ್ದು ಈ ಅನುಮಾನಕ್ಕೆ ಹೆಚ್ಚು ಬಲ ಕೊಟ್ಟಿದೆ. 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2019ರ ಚುನಾವಣೆಯಲ್ಲಿ ಎನ್​​​ಡಿಎಗೆ ಹಿಂದಿನ ಜನಪ್ರಿಯತೆ ಇರಲಿಲ್ಲ. ಎಲ್ಲ ರಂಗಗಳಲ್ಲಿಯೂ ಕೇಂದ್ರ ಸರ್ಕಾರ ವಿಫಲವಾಗಿತ್ತು. ಕೊಟ್ಟ ಭರವಸೆಯನ್ನು ಈಡೇರಿಸಿರಲಿಲ್ಲ. ಜನಪ್ರಿಯತೆ ಇಲ್ಲದ ಸಂದರ್ಭದಲ್ಲಿ ಎಷ್ಟು ಸ್ಥಾನಗಳಿಸುತ್ತಾರೆ ಎಂದರೆ ಅದು ದೊಡ್ಡ ವಿಸ್ಮಯ ಎನ್ನಬಹುದು ಎಂದರು.

Intro:newsBody:ಕೊನೆಗೂ ತಮ್ಮ ಸೋಲಿನ ಕಾರಣ ಬಿಚ್ಚಿಟ್ಟ ವಿ.ಎಸ್. ಉಗ್ರಪ್ಪ, ಏನಂತೆ ಗೊತ್ತಾ?!

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 100 ದಿನಗಳ ನಂತರ ತಮ್ಮ ಸೋಲಿನ ಕಾರಣವನ್ನು ಮಾಜಿ ಸಂಸದ ವಿಎಸ್ ಉಗ್ರಪ್ಪ ಬಿಚ್ಚಿಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ವಿವರ ಬಿಚ್ಚಿಟ್ಟ ಉಗ್ರಪ್ಪ, 2018 ರ ಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದೆ. ಕೇವಲ ನಾಲ್ಕೈದು ತಿಂಗಳ ಹಿಂದೆ ಈ ಗೆಲವು ಲಭಿಸಿತ್ತು. ಆದರೆ ಇದು ಪ್ರಸಕ್ತ ಲೋಕಸಭೆ ಚುನಾವಣೆ ವೇಳೆಗೆ ಹಿಂದಿನ ಅಂತರ ತದ್ವಿರುದ್ಧವಾಗಿ ಎದುರಾಳಿ ಅಭ್ಯರ್ಥಿಗೆ ಮೇಲಿಂದ ಇನ್ನೂ ಐವತ್ತು ಸಾವಿರ ಮತ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ ಅಂದರೆ ಇದನ್ನು ಇನ್ನೇನು ಹೇಳಬೇಕು. ನನಗೂ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಅನುಮಾನವಿದೆ. ಕ್ಷೇತ್ರದ ಜನ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಸಂಸದನಾಗಿ ನಾನು ಉತ್ತಮ ಕೆಲಸ ನಿರ್ವಹಿಸಿಲ್ಲ ಎಂದಿದ್ದರೆ ಪರವಾಗಿರಲಿಲ್ಲ. ಉತ್ತಮ ಸಂಸದ ಎಂದು ಕೂಡ ಹೆಸರು ಸಂಪಾದಿಸಿದ್ದೆ. ಇದನ್ನು ಜನರೇ ಹೇಳುತ್ತಿದ್ದಾರೆ. ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಕಂಪ್ಲಿ ಹಾಗೂ ಸಂಡೂರಿನಲ್ಲಿ ನನಗೆ ಲೀಡ್ ಸಿಕ್ಕಿತ್ತು. ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹೊಸಪೇಟೆ ಕ್ಷೇತ್ರಗಳಲ್ಲಿ ನನಗೆ ಲೀಡ್ ಸಿಕ್ಕಿಲ್ಲ. ಇದನ್ನು ಗಮನಿಸಿದರೆ ಕೆಲಭಾಗಗಳಲ್ಲಿ ಆಯ್ಕೆ ಮಾಡಿಕೊಂಡು ಇವಿಎಂ ತಿರುಚುವ ಕಾರ್ಯ ಮಾಡಿದ್ದಾರೆ ಎನ್ನುವ ಅನುಮಾನ ನನಗೆ ಇದೆ. ಇದು ನನ್ನದೊಂದೇ ಅಲ್ಲ ಜನಸಾಮಾನ್ಯರ ಮಾತು ಕೂಡಾ ಆಗಿದೆ. ಈ ರೀತಿ ಜನರ ಮನಸ್ಸಿನಲ್ಲಿರುವ ಭಾವನೆಯನ್ನು ಹೋಗಲಾಡಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಮಾಡಬೇಕಾಗಿದೆ. ತನ್ಮೂಲಕ ನನಗೂ ಇರುವ ಅನುಮಾನವನ್ನು ಪರಿಹರಿಸಬೇಕೆಂದು ಎಂದು ಹೇಳುವ ಮೂಲಕ ತಮ್ಮ ಸೋಲಿನ ಕಾರಣವನ್ನು ಬಿಚ್ಚಿಟ್ಟರು.
ಪ್ರಜಾಪ್ರಭುತ್ವಕ್ಕೆ ಬೆಲೆ ಬರಲಿ
ಜನರಲ್ಲಿ ಈ ವಿಚಾರವಾಗಿ ಇರುವ ಭಾವನೆಯನ್ನು ನಿವಾರಿಸಿ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವಂತ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ. ಇಲ್ಲವಾದರೆ ಜನರೇ ಒಂದಲ್ಲ ಒಂದು ದಿನ ತಿರುಗಿ ಬೀಳಲಿದ್ದಾರೆ. ನಮ್ಮ ಪಕ್ಷ ಕೂಡ ಜನಪರವಾಗಿ ಹೋರಾಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ. ಎನ್ಡಿಎ ರಾಷ್ಟ್ರೀಯ ನಾಯಕರೇ ಲೋಕಸಭೆ ಚುನಾವಣೆಗೆ ಮುನ್ನ ಇಷ್ಟೊಂದು ಸ್ಥಾನಗಳು ಲಭಿಸಲಿವೆ ಎಂದು ಹೇಳಿರಲಿಲ್ಲ. ಆದರೆ ಇವೆಲ್ಲವನ್ನೂ ಮೀರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂದಿನ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಅಂಕಿಅಂಶ ಹೇಳಿದ ಸಂಖ್ಯೆಯನ್ನೇ ತಲುಪಿದ್ದು ಈ ಅನುಮಾನಕ್ಕೆ ಹೆಚ್ಚು ಬಲ ಕೊಟ್ಟಿದೆ. 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2019ರ ಚುನಾವಣೆಯಲ್ಲಿ ಎನ್ ಡಿಎಗೆ ಹಿಂದಿನ ಜನಪ್ರಿಯತೆ ಇರಲಿಲ್ಲ. ಎಲ್ಲ ರಂಗಗಳಲ್ಲಿಯೂ ಕೇಂದ್ರ ಸರ್ಕಾರ ವಿಫಲವಾಗಿತ್ತು. ಕೊಟ್ಟ ಭರವಸೆಯನ್ನು ಈಡೇರಿಸಿರಲಿಲ್ಲ. ಜನಪ್ರಿಯತೆ ಇಲ್ಲದ ಸಂದರ್ಭದಲ್ಲಿ ಎಷ್ಟು ಸ್ಥಾನ ಗಳಿಸುತ್ತಾರೆ ಎಂದರೆ ಅದು ದೊಡ್ಡ ವಿಸ್ಮಯ ಎನ್ನಬಹುದು ಎಂದರು.
ಪ್ರಶ್ನೆ ಉದ್ಭವಿಸಿದೆ
ಚುನಾವಣಾ ಆಯೋಗ ಇತ್ತೀಚೆಗೆ ನಗರದಲ್ಲಿ ನಡೆಸಿದ ಮಹತ್ವದ ಸಭೆಯಲ್ಲಿ ಕೂಡ ಇವಿಎಂ ವಿಚಾರ ಹಾಗೂ ಇದರ ತಿರುಚುವಿಕೆ ಕುರಿತು ಪ್ರಸ್ತಾಪ ಆಗಿದೆ. ಇದರಿಂದ ಈಗ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರ ಜನರ ಅನುಮಾನ ಪರಿಹರಿಸುವ ಕಾರ್ಯ ಮಾಡಬೇಕು. ಜನರ ಮನಸ್ಸಿನಲ್ಲಿರುವ ಅಸಮಾಧಾನ ಹಾಗೂ ಅನುಮಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಿಳಿಗೊಳಿಸುವುದು ಚುನಾವಣಾ ಆಯೋಗದ ಕರ್ತವ್ಯ. ಇಂದು ಚುನಾವಣಾ ಆಯೋಗ ಇಂಥ ವಿಚಾರಗಳನ್ನು ನಿವಾರಿಸುವ ನಿಟ್ಟಿನಲ್ಲಿ ವಿಫಲವಾಗಿದ್ದು, ಇದರ ಬಗ್ಗೆ ಪ್ರಸ್ತಾಪಿಸುವುದು ವ್ಯರ್ಥ ಎಂದರು. Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.