ETV Bharat / state

ನಿಸಾರ್ ಸಹಾನುಭೂತಿ ಪರಂಪರೆಯ ಸಂಕೇತ, ಶ್ರೇಷ್ಠ ಕವಿಯನ್ನು ಕಳೆದುಕೊಂಡೆವು: ಯು.ಟಿ ಖಾದರ್‌

author img

By

Published : May 4, 2020, 12:05 PM IST

ಸಹಾನುಭೂತಿಯ ಪರಂಪರೆಯ ಸಂಕೇತವಾಗಿದ್ದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಎಂದು ಯು.ಟಿ.ಖಾದರ್‌ ಸಂತಾಪ ಸೂಚಿಸಿದರು.

UT Khader condolence for the expiry of Nisar Ahmed
ನಿಸಾರ್​ ಅಹಮ್ಮದ್​ ಅಗಲಿಕೆಗೆ ಖಾದರ್ ಸಂತಾಪ

ಬೆಂಗಳೂರು: ಕನ್ನಡ ನಾಡು ಹಾಗೂ ನುಡಿಯನ್ನು ನಿತ್ಯೋತ್ಸವ ಗೀತೆಯ ಮೂಲಕ ಇಡೀ ವಿಶ್ವಕ್ಕೆ ಪರಿಚಯಿಸಿದ್ದ ಶ್ರೇಷ್ಠ ಕವಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಶಾಸಕ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ಪದ್ಮನಾಭ ನಗರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾತನಾಡಿದರು.

ನಿಸಾರ್​ ಅಹಮ್ಮದ್​ ಅಗಲಿಕೆಗೆ ಖಾದರ್ ಸಂತಾಪ

ಪದ್ಮಶ್ರಿ ಪುರಸ್ಕೃತ ಕವಿಗಳಿಗೆ ಸರ್ಕಾರಿ ಗೌರವ ಸಲ್ಲಿಸುವುದಕ್ಕೆ ಈಗಾಗಲೇ ಸರ್ಕಾರ ಅದೇಶ ನೀಡಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪದ್ಮನಾಭನಗರದ ಕವಿಗಳ ಮನೆಯ ಹತ್ತಿರವೇ ಸರ್ಕಾರಿ ಗೌರವ ಸಲ್ಲಿಸಲು ಪೊಲೀಸ್ ಇಲಾಖೆ ಸಕಲ‌ ಸಿದ್ಧತೆ ಮಾಡಿಕೊಂಡಿದೆ.

ಅಂತ್ಯಸಂಸ್ಕಾರಕ್ಕೆ ಪಾರ್ಥೀವ ಶರೀರವನ್ನು ಮುನಿರೆಡ್ಡಿ ಪಾಳ್ಯದ ರುದ್ರಭೂಮಿಗೆ ಕೊಂಡೊಯ್ಯಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.