ETV Bharat / state

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳೆಷ್ಟು? - undefined

ರಾಜ್ಯದ 22 ಜಿಲ್ಲೆಯ 61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್‌ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಹಾಗೂ 201 ಗ್ರಾಮಪಂಚಾಯಿತಿಗಳ ಸ್ಥಾನಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ.

ಚುನಾವಣೆ
author img

By

Published : May 25, 2019, 6:13 PM IST

Updated : May 25, 2019, 6:21 PM IST

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆಗೆ‌ ಕ್ಷಣಗಣನೆ ಪ್ರಾರಂಭವಾಗಿದೆ. ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯದ 22 ಜಿಲ್ಲೆಯ 61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್‌ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಹಾಗೂ 201 ಗ್ರಾಮಪಂಚಾಯಿತಿಗಳ ಸ್ಥಾನಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ.

61 ನಗರ ಸ್ಥಳೀಯ ಸಂಸ್ಥೆಗಳಲ್ಲಿ 4,360 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 61 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 1326 ವಾರ್ಡ್​ಗಳಿದ್ದು, ಈ ಪೈಕಿ 30 ವಾರ್ಡ್​ಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಚುನಾವಣೆ ನಡೆಯುವುದಿಲ್ಲ. ಉಳಿದಂತೆ 1296 ವಾರ್ಡ್​ಗಳಲ್ಲಿ ಚುನಾವಣೆ ನಡೆಯಲಿದೆ.

61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್​ಗಳಲ್ಲಿ ಚುನಾವಣೆಗಾಗಿ ಸುಮಾರು 8230 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 1998 ಬ್ಯಾಲೆಟ್ ಯೂನಿಟ್ ಮತ್ತು 1998 ಕಂಟ್ರೋಲ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ಪಕ್ಷವಾರು ಅಭ್ಯರ್ಥಿಗಳ ವಿವರ:

ಕಾಂಗ್ರೆಸ್- 1224

ಬಿಜೆಪಿ- 1125

ಜೆಡಿಎಸ್- 780

ಸಿಪಿಐ(ಎಂ)- 25

ಬಿಎಸ್ ಪಿ- 103

ಪಕ್ಷೇತರರು- 1056

ಗ್ರಾಮ ಪಂಚಾಯತಿ ಉಪಚುನಾವಣೆ:

30 ಜಿಲ್ಲೆಗಳಲ್ಲಿನ ಒಟ್ಟು 191 ಗ್ರಾಮ ಪಂಚಾಯತಿಗಳಲ್ಲಿನ 198 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಕಣದಲ್ಲಿ ಒಟ್ಟು 297 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 201 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಪೈಕಿ 118 ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಒಟ್ಟು 7 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಒಟ್ಟು 76 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾಲೂಕು ಪಂಚಾಯತಿ ಉಪಚುನಾವಣೆ:

ಇನ್ನು ವಿವಿಧ ಜಿಲ್ಲೆಗಳ 8 ತಾಲೂಕು ಪಂಚಾಯತಿಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಓರ್ವ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, 9 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ತಾಲೂಕು ಪಂಚಾಯತಿ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​​ನ ತಲಾ 9 ಅಭ್ಯರ್ಥಿಗಳು, ಜೆಡಿಎಸ್​​ನ 4, ಬಿಎಸ್​​ಪಿಯ 2 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಕಣದಲ್ಲಿದ್ದಾರೆ.

Intro:Local body, gram panchayathBody:KN_BNG_01_25_LOCALBODYELECTION_OVERALL_SCRIPT_VENKAT_7201951

ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತಿ ಚುನಾವಣೆಗೆ ಕ್ಷಣಗಣನೆ; ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳೆಷ್ಟು ಗೊತ್ತಾ?

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆಗೆ‌ ಕ್ಷಣಗಣನೆ ಪ್ರಾರಂಭವಾಗಿದೆ. ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯದ ೨೨ ಜಿಲ್ಲೆಯ ೬1 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್‌ಗಳ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಹಾಗೂ 201 ಗ್ರಾಮಪಂಚಾಯಿತಿಗಳ ಸ್ಥಾನಗಳಿಗೆ ಮೇ 29ಗೆ ಚುನಾವಣೆ ನಡೆಯಲಿದೆ.

61 ನಗರ ಸ್ಥಳೀಯ ಸಂಸ್ಥೆಗಳಲ್ಲಿ 4,360 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 61 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 1326 ವಾರ್ಡ್ ಗಳಿದ್ದು, ಈ ಪೈಕಿ 30 ವಾರ್ಡ್ ಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಚುನಾವಣೆ ನಡೆಯುವುದಿಲ. ಉಳಿದಂತೆ 1296 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ.

61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್ ಗಳಲ್ಲಿ ಚುನಾವಣೆಗಾಗಿ ಸುಮಾರು 8230 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 1998 ಬ್ಯಾಲೆಟ್ ಯೂನಿಟ್ ಮತ್ತು 1998 ಕಂಟ್ರೋಲ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ಪಕ್ಷಾವಾರು ಅಭ್ಯರ್ಥಿಗಳ ವಿವರ:

ಕಾಂಗ್ರೆಸ್- 1224

ಬಿಜೆಪಿ- 1125

ಜೆಡಿಎಸ್- 780

ಸಿಪಿಐ(ಎಂ)- 25

ಬಿಎಸ್ ಪಿ- 103

ಪಕ್ಷೇತರರು- 1056

ಗ್ರಾಮ ಪಂಚಾಯತಿ ಉಪಚುನಾವಣೆ:

30 ಜಿಲ್ಲೆಗಳಲ್ಲಿನ ಒಟ್ಟು 191 ಗ್ರಾಮ ಪಂಚಾಯತಿಗಳಲ್ಲಿನ 198 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಕಣದಲ್ಲಿ ಒಟ್ಟು 297 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಒಟ್ಟು 201 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಪೈಕಿ 118 ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಒಟ್ಟು 7 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಒಟ್ಟು 76 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾಲೂಕು ಪಂಚಾಯತಿ ಉಪಚುನಾವಣೆ:

ಇನ್ನು ವಿವಿಧ ಜಿಲ್ಲೆಗಳ 8 ತಾಲೂಕು ಪಂಚಾಯತಿಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಓರ್ವ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, 9 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ತಾಲೂಕು ಪಂಚಾಯತಿ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ತಲಾ 9 ಅಭ್ಯರ್ಥಿಗಳು, ಜೆಡಿಎಸ್ ನ 4, ಬಿಎಸ್ ಪಿಯ 2 ಹಾಗು ಒಬ್ಬ ಪಕ್ಷೇತರ ಅಭ್ಯರ್ಥಿ ಕಣದಲ್ಲಿ ಇದ್ದಾರೆ.Conclusion:Venkat
Last Updated : May 25, 2019, 6:21 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.