ETV Bharat / state

ಗೃಹಜ್ಯೋತಿ ವಿಷಯದಲ್ಲಿ ಅನಗತ್ಯ ಸುಳ್ಳು ಪ್ರಚಾರ: ಸಚಿವ ಕೆ ಜೆ ಜಾರ್ಜ್

ಈಗಾಗಲೇ ಹಲವಾರು ಸ್ಪಷ್ಟನೆ ನೀಡಿದ್ದೇನೆ, ಮತ್ತೆ ಸುಳ್ಳು ಪ್ರಚಾರ ಮಾಡುವುದು ಬೇಡ ಎಂದು ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.

Assembly Session
ವಿಧಾನಸಭಾ ಕಲಾಪ
author img

By

Published : Jul 13, 2023, 6:02 PM IST

ಬೆಂಗಳೂರು: ಗೃಹಜ್ಯೋತಿ ವಿಷಯವಾಗಿ ಪ್ರತಿಪಕ್ಷಗಳು ಅನಗತ್ಯವಾದ ಸುಳ್ಳು ಪ್ರಚಾರ ಮಾಡುತ್ತಿವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ಬಿಜೆಪಿಯ ಶಾಸಕ ಸಿದ್ದು ಸವದಿ ಅವರು ಮಾತನಾಡುವಾಗ ಗೃಹಜ್ಯೋತಿ ಯೋಜನೆಯ ಕುರಿತು ಪ್ರಸ್ತಾಪಿಸಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಕೆ ಜೆ ಜಾರ್ಜ್, ಇದೇ ವಿಧಾನಸಭೆಯಲ್ಲಿ ಯೋಜನೆಯ ಬಗ್ಗೆ ಹಲವಾರು ಸ್ಪಷ್ಟನೆ ನೀಡಿದ್ದೇನೆ. ರಾಜ್ಯದಲ್ಲಿ 2.16 ಕೋಟಿ ಆರ್ ಆರ್ ಸಂಖ್ಯೆಗಳಿವೆ. ಅದರಲ್ಲಿ 2.14 ಕೋಟಿ ಸಂಪರ್ಕಗಳು ಗೃಹಜ್ಯೋತಿಗೆ ಅರ್ಹತೆ ಪಡೆದಿವೆ ಎಂದು ಸ್ಪಷ್ಟಪಡಿಸಿದರು.

200 ಯುನಿಟ್​ ವರೆಗೆ ಬಳಕೆಯಾಗುವ ವಿದ್ಯುತ್​ಗೆ ವಾರ್ಷಿಕ ಸರಾಸರಿ ಪರಿಗಣಿಸಿ ಸೌಲಭ್ಯ ನೀಡಲಾಗುತ್ತಿದೆ. ಈವರೆಗೂ 1 ಕೋಟಿಗೂ ಹೆಚ್ಚು ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಯೋಜನೆಯಡಿ ಸುಮಾರು 40 ಲಕ್ಷ ಗ್ರಾಹಕರಿದ್ದಾರೆ. ಅವರನ್ನೂ ಗೃಹಜ್ಯೋತಿ ವ್ಯಾಪ್ತಿಗೆ ಒಳಪಡಿಸಿದರೆ ನೋಂದಣಿಯಾಗುವ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ವೇಳೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ ಸರಾಸರಿ ಪರಿಗಣಿಸುವುದು ಸರಿಯಲ್ಲ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. ಆದರೆ ಇದನ್ನು ಅಲ್ಲಗಳೆದ ಸಚಿವ ಜಾರ್ಜ್ ಬಳಕೆಗೆ ಎಷ್ಟು ಅಗತ್ಯವೋ ಅಷ್ಟೇ ವಿದ್ಯುತ್ ಅನ್ನು ಸರ್ಕಾರ ನೀಡುತ್ತಿದೆ. ಜನ ಸಂತೋಷದಿಂದಿದ್ದಾರೆ. ಯಾವುದೇ ಬೆಂಬಲವಿಲ್ಲದೆ ಯೋಜನೆ ಜಾರಿಯಾಗುತ್ತಿದೆ. ಇದು ಐತಿಹಾಸಿಕವಾದ ನಿರ್ಣಯ ಎಂದು ಸಮರ್ಥಿಸಿಕೊಂಡರು.

ಆಡಳಿತ ಪಕ್ಷದ ಸದಸ್ಯ ಬಿ ಆರ್ ಪಾಟೀಲ್ ಮಾತನಾಡಿ, ಭೂಸುಧಾರಣೆ ಕಾಯ್ದೆ ತಂದು ಭೂಮಿ ಹಂಚಿಕೆ ಮಾಡಿದಂತೆ ಭೂಮಿ ಹೊಂದಿರುವ ಮಾಲೀಕನ ಜಮೀನಿನಲ್ಲಿ ಮರ ಬೆಳೆಸುವುದನ್ನು ಕಡ್ಡಾಯ ಮಾಡಿದರೆ ಅರಣ್ಯ ಉಳಿಸಬಹುದು. ಇಲ್ಲದಿದ್ದರೆ, ಭೂಮಿಯ ಮೇಲೆ ಅರಣ್ಯವಿರುವುದಿಲ್ಲ. ಪ್ರಕೃತಿ ಅಸಮತೋಲನ ಸರಿಪಡಿಸುವ ಕೆಲಸ ಮಾಡಬೇಕು. ರೈತರ ಆತ್ಮಹತ್ಯೆ ಯಾವ ಸರ್ಕಾರಕ್ಕೂ ಒಳ್ಳೆಯ ಹೆಸರು ತರುವುದಿಲ್ಲ. ಮಹಾರಾಷ್ಟ್ರದ ನಂತರ ರಾಜ್ಯದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರದ್ದು ಮಾಡಬೇಕು. ಇದು ಖಾಸಗಿ ಕಂಪನಿಗಳಿಗೆ ಲಾಭ ತರುವ ಯೋಜನೆಯಾಗಿದೆ. ಇದರ ಬದಲು ಸರ್ಕಾರದಿಂದಲೇ ವಿಮೆ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತನ್ನಿ. ನಿರುದ್ಯೋಗ ನಿವಾರಣೆಗೆ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ಎಂದು ಹೇಳಿದರು.

ಬಿ ಆರ್ ಪಾಟೀಲ್ ಅವರು ಚುನಾವಣೆ ವ್ಯವಸ್ಥೆ ಬಗ್ಗೆ ಮಾತನಾಡ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಧ್ಯಪ್ರವೇಶಿಸಿ, ಶಾಸಕರಾದ ಮೇಲೆ ಶಾಸಕಗಿರಿ ಉಳಿಸಿಕೊಳ್ಳಲು ಮುಂದಾಗ್ತಾರೆ. ದೇವಸ್ಥಾನ ಕಟ್ಟಬೇಕು ಅಂತಾರೆ. ಈಗ 25 ಲಕ್ಷ ರೂಪಾಯಿ ಎಲ್ಲ ತೆಗೆದುಕೊಳ್ಳಲ್ಲ. ನಾವೇ ಚುನಾವಣೆ ಮಾಡುವಾಗ ಅಭ್ಯರ್ಥಿಗಳಿಗೆ ಎಷ್ಟು ಖರ್ಚು ಮಾಡ್ತಿಯಾ ಅಂತ ಕೇಳುತ್ತೇವೆ. ನಾವು 5 ಸಾವಿರ 10 ಸಾವಿರ ಕೊಟ್ಟರೆ ಹೋಗಿ ಚುನಾವಣೆ ಮಾಡ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಈ ಬಾರಿ ಚುನಾವಣೆ ಹೇಗೆ ನಡೀತು ಅಂತ ಗೊತ್ತಿದೆ.

ಚುನಾವಣೆಗೆ ಮೊದಲೇ ಕುಕ್ಕರ್ ಎಲ್ಲಾ ಹಂಚಿದ್ರು. ಇಲ್ಲೇ ಟಿ ಬಿ ಜಯಚಂದ್ರ ಇದಾರೆ. ನಗ್ತಾ ಇದ್ದಾರೆ. ಅವರು ಮೊದಲು ಚುನಾವಣೆ ಹೇಗೆ ನಡೆಸಿದ್ರು. ಈ ಬಾರಿ ಚುನಾವಣೆ ಹೇಗೆ ಮಾಡಿದ್ರು, ಕೊನೆಯಲ್ಲಿ ಏನೇನು ಮಾಡಬೇಕಾಯ್ತು ಅಂತ ಗೊತ್ತಿದೆ. ಪಾಪ ಬಿ ಆರ್ ಪಾಟೀಲ್ ಕಲಬುರಗಿಯಿಂದ ಇಲ್ಲಿ ಬಂದು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ಇದು ಯಾರಿಗೆ ಬೇಕಾಗಿದೆ ಸಭಾಧ್ಯಕ್ಷರೇ, ದುಡ್ಡು ಮಾಡೋದು ಹೇಗೆ ಅನ್ನುವುದರ ಬಗ್ಗೆ ಎಲ್ಲರ ಗಮನ ಇದೆ ಎಂದು ಟೀಕಿಸಿದರು.

ಸಮವಸ್ತ್ರ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಪೂರೈಸುವ ಬಗ್ಗೆ ಸಿಎಂ ಜೊತೆ ಚರ್ಚೆ: ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಮವಸ್ತ್ರವನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಪೂರೈಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಸಂದರ್ಭದಲ್ಲಿ ಬಿಜೆಪಿಯ ಸಿದ್ದು ಸವದಿ ಮಾಡಿದ ಪ್ರಸ್ತಾಪಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವರು, ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಕೆಲಸ ಕೊಟ್ಟಷ್ಟು ನೇಕಾರರಿಗೆ ಅನುಕೂಲವಾಗಲಿದೆ ಎಂದರು.

ತಾವು ಸಚಿವರಾದ ಮೇಲೆ ಸಮವಸ್ತ್ರ ಪೂರೈಸಲು ಯಾವ ಮಾರ್ವಾಡಿಗೂ ಅನುಕೂಲ ಮಾಡಿಕೊಟ್ಟಿಲ್ಲ. ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಸಿದ್ದು ಸವದಿ, ವಿದ್ಯಾ ವಿಕಾಸ ಯೋಜನೆಯಡಿ ಪೂರೈಸಿದ ಶಾಲಾ ಮಕ್ಕಳ ಸಮವಸ್ತ್ರ ಕಳಪೆಯಾಗಿದೆ ಎಂದು ಆರೋಪಿಸಿ, ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಕಾರಿಗಳು ಸಮವಸ್ತ್ರವನ್ನು ಪರಿಶೀಲನೆ ಮಾಡಿರುತ್ತಾರೆ. ಅವರ ವಿರುದ್ಧವೂ ತನಿಖೆ ಮಾಡಬೇಕು ಎಂದರು.

ನಿಗಮ ಸಮವಸ್ತ್ರ ಸರಬರಾಜು ಮಾಡುವುದರಿಂದ ನೇಕಾರರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ನೇಕಾರರ ಬದಲಿಗೆ ಮಾರ್ವಾಡಿ ಉದ್ಧಾರ ಮಾಡಲು ಹೊರಟ್ಟೀದ್ದೀರ ಎಂದು ಆರೋಪಿಸಿದರು. ಸಂಕಷ್ಟದಲ್ಲಿರುವ ನೇಕಾರರನ್ನು ರಕ್ಷಿಸುವ ಬದಲು ಬಲಿ ಕೊಡುತ್ತಿದ್ದೀರಿ. ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ವತಿಯಿಂದ ಭರವಸೆ ಕೊಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.