ETV Bharat / state

ಬ್ಯಾಂಕರ್‌ಗಳೊಂದಿಗೆ ಸದಾನಂದಗೌಡ ಸಭೆ: ಸಾಲಯೋಜನೆ ತ್ವರಿತ ಮಂಜೂರಿಗೆ ಸೂಚನೆ - ಜಿಲ್ಲಾ ಮಟ್ಟದ ಬ್ಯಾಂಕರ್​ಗಳ ಸಭೆ

ಬೆಂಗಳೂರು ನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕಿನ ಉಸ್ತುವಾರಿಯಲ್ಲಿ ಇಂದು ಕೇಂದ್ರ ಸಚಿವ ಸದಾನಂದಗೌಡ ಜಿಲ್ಲಾ ಮಟ್ಟದ ಬ್ಯಾಂಕರ್​ಗಳ ಸಭೆ ನಡೆಸಿದರು.

District level bankers meeting
ಜಿಲ್ಲಾ ಮಟ್ಟದ ಬ್ಯಾಂಕರ್​ಗಳ ಸಭೆ
author img

By

Published : Oct 22, 2020, 8:43 PM IST

ಬೆಂಗಳೂರು: ಸಣ್ಣ ಕೈಗಾರಿಕೆ, ಕೃಷಿ, ಶಿಕ್ಷಣ, ವಸತಿ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಇವೇ ಮುಂತಾದ ಆದ್ಯತಾ ವಲಯದ ಯೋಜನೆಗಳಿಗೆ ಸಾಲ ಮಂಜೂರಾತಿ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಬ್ಯಾಂಕ್​​​​​ಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕಿನ ಉಸ್ತುವಾರಿಯಲ್ಲಿ ಇಂದು ನಡೆದ ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವರು ವಿವಿಧ ಸಾಲಯೋಜನೆಗಳ ಪ್ರಗತಿ ಪರಿಶೀಲಿಸಿದರು.

ಕಿಸಾನ್‌ ಸಮ್ಮಾನ್‌ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ರಿಯಾಯಿತಿಗಳೂ ನೇರ ವರ್ಗಾವಣೆ ಮೂಲಕ ನಡೆಯತ್ತದೆ. ಯಾರೊಬ್ಬರೂ ವಿಶೇಷವಾಗಿ ರೈತರು ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ (ಹೊರವಲಯದಲ್ಲಿ) ಕೃಷಿ, ತೋಟಗಾರಿಕೆ, ಒಳನಾಡು ಮೀನುಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕುಟುಂಬಗಳ ಸಮೀಕ್ಷೆ ನಡೆಸಿ ಪ್ರತಿಯೊಂದು ಕುಟುಂಬಕ್ಕೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸುವ ವ್ಯವಸ್ಥೆ ಮಾಡುವಂತೆ ಸಚಿವ ಸದಾನಂದಗೌಡ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಮೇಗೌಡರಿಗೆ ಸೂಚಿಸಿದರು.

ಜಿಲ್ಲಾ ಮಟ್ಟದ ಬ್ಯಾಂಕರ್​ಗಳ ಸಭೆ

ಅನುಸೂಚಿತ ಜಾತಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಾಲ್ಮಿಕಿ ನಿಗಮ ಇವೇ ಮುಂತಾದ ನಿಗಮ - ಮಂಡಳಿಗಳು, ಪ್ರಾಯೋಜಿಸುವ ಅನೇಕ ಸಾಲಯೋಜನೆಗಳ ಬಹುತೇಕ ಅರ್ಜಿಗಳು ಹಾಗೂ ಬಿಬಿಎಂಪಿ ಶಿಫಾರಸು ಮಾಡಿರುವ ಬೀದಿ ಬದಿ ವ್ಯಾಪಾರಿಗಳ ಕಿರುಸಾಲದ ಅರ್ಜಿಗಳು ಅನೇಕ ತಿಂಗಳುಗಳಿಂದ ಬಾಕಿಯಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಅರ್ಜಿಗಳಿಗೆ ಮಂಜೂರಾತಿ ನೀಡುವಲ್ಲಿ ಅನಗತ್ಯ ಹಾಗೂ ಸಕಾರಣವಿಲ್ಲದೇ ವಿಳಂಬ ಮಾಡುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಸಚಿವರು ಅರ್ಜಿಗಳು ಸಾಲಕ್ಕೆ ಅರ್ಹವಾಗಿಲ್ಲದಿದ್ದರೆ ಅಂತ ಅರ್ಜಿಗಳನ್ನು ಸಕಾರಣ ಕೊಟ್ಟು ತಿರಸ್ಕರಿಸಿ. ತಿಂಗಳಾನುಗಟ್ಟಲೇ ಬಾಕಿ ಇಟ್ಟುಕೊಳ್ಳಬೇಡಿ. ಮುಂದಿನ 15 ದಿನಗಳಲ್ಲಿ ತಮಗೆ ಅನುಸರಣಾ ವರದಿ ಸಲ್ಲಿಸಿ ಎಂದು ಸೂಚಿಸಿದರು.

ಕೊರಾನಾದಿಂದ ಬ್ಯಾಂಕರ್​ಗಳು ಎದುರಿಸಿದ ಸವಾಲುಗಳು, ಕೇಂದ್ರ ಸರ್ಕಾರವು ಘೋಷಿಸಿರುವ ಸ್ವಾವಲಂಬಿ ಯೋಜನೆಗಳ ಜಾರಿಯಲ್ಲಿ ಎದುರಾಗುತ್ತಿರುವ ಅಡಚಣೆಗಳು, ಅದನ್ನು ಯಾವ ರೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂಬ ಬಗ್ಗೆ ಹೊಸ ಹೊಸ ಐಡಿಯಾಗಳು ಇದ್ದರೆ, ಸರ್ಕಾರದೊಂದಿಗೆ ಹಂಚಿಕೊಳ್ಳಬಹುದು ಎಂದು ಸಚಿವರು ಬ್ಯಾಂಕರ್‌ಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಆಹ್ವಾನ ನೀಡಿದರು.

ಪ್ರಗತಿ ಪರಿಶೀಲನೆ: ಕೊರೊನಾ ಸೋಂಕಿನಿಂದಾಗಿ ಕಳೆದೆರಡು ತ್ರೈಮಾಸಿಕ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾರ್ಚ್‌ 2020ಕ್ಕೆ ಕೊನೆಗೊಂಡ 2019-20ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಹಾಗೂ ಪ್ರಸಕ್ತ ಹಣಕಾಸು ವರ್ಷದ ಕಳೆದೆರಡು ತ್ರೈಮಾಸಿಕದಲ್ಲಿ ಆದ ಯೋಜನಾ ಪ್ರಗತಿ ಪರಿಶೀಲಿಸಲಾಯಿತು.

ಮಾರ್ಚ್‌ ಕೊನೆಗೊಂಡ ತ್ರೈಮಾಸಿಕದಲ್ಲಿ ವಸತಿ ವಲಯವೊಂದನ್ನು ಹೊರತುಪಡಿಸಿ ಉಳಿದೆಲ್ಲ ವಲಯಗಳ ಸಾಲ ಯೋಜನೆಗಳಿಗೆ ಸಂಬಂಧಿಸಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಗುರಿಮೀರಿ ಸಾಧನೆ ಮಾಡಿವೆ. ಉದಾಹರಣೆಗೆ – ಶಿಕ್ಷಣ ಸಾಲದಲ್ಲಿ ಶೇಕಡಾ 100, ರಫ್ತುವಲಯದ ಯೋಜನೆಗಳಿಗೆ ಸಂಬಂಧಿಸಿ ಶೇಕಡಾ 142, ಕೃಷಿ ವಲಯದಲ್ಲಿ ಶೇಕಡಾ 116 ಹಾಗೂ ಸಣ್ಣ ಮತ್ತು ಅತಿಸಣ್ಣ ಕೈಗಾರಿಗಳಿಗೆ (ಎಂಎಸ್‌ಎಂಇ) ಸಂಬಂಧಿಸಿ ಶೇಕಡಾ 168ರಷ್ಟು ಗುರಿಸಾಧನೆಯಾಗಿತ್ತು. ಈ ಅವಧಿಯಲ್ಲಿ ಪ್ರಮುಖವಾಗಿ ಕೆನರಾ ಬ್ಯಾಂಕ್‌ 4,861 ಕೋಟಿ ರೂಪಾಯಿ, ಎಸ್‌ಬಿಐ 14,744ಕೋಟಿ ರೂ, ಎಚ್‌ಡಿಎಫ್‌ಸಿ 4,810 ಕೋಟಿ ರೂ, ಎಕ್ಸಿಸ್‌ ಬ್ಯಾಂಕ್‌ 3,704 ಕೋಟಿ ರೂ ಹಾಗೂ ಐಸಿಐಸಿಐ ಬ್ಯಾಂಕ್‌ 4,499 ಕೋಟಿ ರೂ ಸಾಲ ವಿತರಿಸಿದ್ದವು.

ಆದರೆ, ಕೊರೊನಾದಿಂದಾಗಿ ಮುಂದಿನ ಎರಡು ತ್ರೈಮಾಸಿಕದಲ್ಲಿ ವಹಿವಾಟು ಕುಸಿಯಿತು. ಆದಾಗ್ಯೂ ಕೃಷಿ ಮತ್ತು ಎಂಎಸ್‌ಎಂಇ ವಲಯಗಳ ಸಾಲ ನೀಡಿಕೆ ಕ್ರಮವಾಗಿ ಶೇಕಡಾ 99 ಹಾಗೂ ಶೇಕಡಾ 90ರಷ್ಟು ಪ್ರಗತಿಯಾಗಿವೆ. ಕೊರೊನಾ ಪರಿಣಾಮವಾಗಿ ಶೈಕ್ಷಣಿಕ ಹಾಗೂ ವಸತಿ ಸಾಲಕ್ಕೆ ಬೇಡಿಕೆ ಕುಸಿದಿದ್ದು ಬ್ಯಾಂಕುಗಳು ಕೇವಲ ಶೇಕಡಾ 21 ಹಾಗೂ ಶೇಕಡಾ 20 ಗುರಿ ಸಾಧಿಸಿವೆ. ಆದರೆ ಈಚಿನ ದಿನಗಳಲ್ಲಿ ಸಾಲ ಯೋಜನೆಗಳು ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇದು ಆರ್ಥಿಕತೆ ಚೇತರಿಕೆಯ ಶುಭ ಸೂಚನೆಯಾಗಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಕೆ.ಎಸ್‌ ನಾಯಕ್‌ ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.