ETV Bharat / state

ಜಿಎಸ್​​ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್ ಬಂದರೆ ಒಳ್ಳೆಯದು: ಡಿ.ವಿ. ಸದಾನಂದಗೌಡ

ಪೆಟ್ರೋಲ್ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಜಿಎಸ್​​ಟಿ ವ್ಯಾಪ್ತಿಯಲ್ಲಿ ಇದನ್ನು ತಂದರೆ ಒಳ್ಳೆಯದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.

Union Minister DV Sadananda Gowda
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
author img

By

Published : Jun 12, 2021, 6:10 PM IST

ಬೆಂಗಳೂರು: ಪೆಟ್ರೋಲ್ ದರ ಏರಿಕೆ ವಿಚಾರವಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ ಪೆಟ್ರೋಲ್ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಜಿಎಸ್​​ಟಿ ವ್ಯಾಪ್ತಿಯಲ್ಲಿ ಇದನ್ನು ತಂದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಎಸ್​​ಟಿ ಅಟೋನಮಸ್ ಬಾಡಿ ಆಗಿದೆ. ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ. ಎಲ್ಲ ವಿತ್ತ ಸಚಿವರು ಇರುತ್ತಾರೆ. ಅಲ್ಲಿ ಇದರ ದರ ನಿಗದಿಯಾಗಲಿದೆ ಎಂದು ಗೃಹ ಕಚೇರಿಯಲ್ಲಿ ನ್ಯಾನೋ ಉರಿಯಾ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಪ್ರತಿ ರಾಜ್ಯಕ್ಕೆ ಉಸ್ತುವಾರಿ ಇರ್ತಾರೆ. ಕೇಂದ್ರದ ವರಿಷ್ಠರು ನೀಡಿದ ಮಾಹಿತಿಯನ್ನು ರಾಜ್ಯಗಳಿಗೆ ನೀಡ್ತಾರೆ. ಹಾಗೆಯೇ ಅರುಣ್ ಸಿಂಗ್ ಕೂಡ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳು ಕೂಡ ಬಿಎಸ್​​ವೈ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎಂದರು.

ನೈಸರ್ಗಿಕ ಗೊಬ್ಬರ ಬಳಕೆಗೆ ನಿರ್ಧಾರ:

ರಾಸಾಯನಿಕ ಗೊಬ್ಬರದಿಂದ ಫಲವತ್ತತೆ ಕಡಿಮೆಯಾಗುತ್ತಿದೆ. ಆಹಾರ ಉತ್ಪಾದನೆಗಾಗಿ ಅದು ಅವಶ್ಯಕ ಇತ್ತು. ಆದರೆ, ಫಲವತ್ತತೆ ಕಡಿಮೆಯಾಗಿ ಫಸಲು ಕೂಡ ಕಡಿಮೆಯಾಗುತ್ತಿದೆ. ಮಣ್ಣಿನ ಆರೋಗ್ಯ ಕಾರ್ಡ್ ನೀಡಲಾಗಿದೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಲು ತೀರ್ಮಾನಿಸಿದ್ದು, ಸಾವಯವ, ನೈಸರ್ಗಿಕ ಗೊಬ್ಬರ ಬಳಕೆಗೆ ನಿರ್ಧರಿಸಿದೆ ಎಂದರು.

ಯೂರಿಯಾ ಬೆಲೆ 420ಕ್ಕೆ ಏರಿಕೆಯಾಗಿದೆ. ಮುಚ್ಚಿದ್ದ ಐದು ಯೂರಿಯಾ ಪ್ಲಾಂಟ್‌ಗಳಲ್ಲಿ 12.7ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ರೈತನಿಗೆ ಉತ್ಪಾದನೆ ಹೆಚ್ಚಳ ಆಗಬೇಕು. ಉತ್ಪಾದನಾ ವೆಚ್ಚ ಕಡಿಮೆ ಆಗಬೇಕು. ಈ‌ ಕಾರಣದಿಂದ ನ್ಯಾನೋ ಫರ್ಟಿಲೈಸರ್ ಉತ್ಪಾದನೆ ಅವಶ್ಯ ಹಾಗೂ ರಾಜ್ಯದಲ್ಲೇ ಉತ್ಪಾದಿಸಲು ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

ಓದಿ: ಕೋವಿಡ್​ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಕಡಿತ: ಸೀತಾರಾಮನ್ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.