ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಗಣೇಶ ಹಬ್ಬವನ್ನು ಹಿಂದೂ ಸಮುದಾಯದವರು ಬಹಳ ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಆದ್ರೆ ಇಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಒಟ್ಟಾಗಿ ಸೇರಿ ಗಣೇಶೋತ್ಸವ ಆಚರಿಸಿದ್ದಾರೆ. ತ್ರಿವರ್ಣ ಗಣಪ ಎಲ್ಲರ ಗಮನ ಸೆಳೆದಿದೆ.
ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ನ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ವತಿಯಿಂದ ಮೊದಲ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲಾಯಿತು. ಭಾವಕೈತೆ ಸಾರುವ ಮೂರು ಧರ್ಮಗಳ ಪ್ರತೀಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ತ್ರಿವರ್ಣ ಗಣಪ ಮೂರು ಧರ್ಮಗಳ ಸಾಮರಸ್ಯ ಸಾರುವಂತಿತ್ತು. ಗಣೇಶನ ಒಂದು ಕೈಯಲ್ಲಿ ಶಿಲುಬೆ, ಮತ್ತೊಂದು ಕೈಯಲ್ಲಿ ಮುಸ್ಲಿಂ ಸಮುದಾಯದ ಚಿಹ್ನೆ, ಹಣೆಯಲ್ಲಿ ವಿಭೂತಿ ಹಾಕಿದ್ದ ಗಣೇಶ ಎಲ್ಲರ ಮೆಚ್ಚುಗೆಗೆ ಗಳಿಸಿದೆ.
ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಕ್ರಿಶ್ಚಿಯನ್ ಸಮುದಾಯದವರು ಸಹ ಗಣೇಶನ ಪೂಜಾ ವಿಧಾನಗಳಲ್ಲಿ ಭಾಗಿಯಾಗಿದ್ದರು. ಗಣೇಶ ಮೂರ್ತಿ ನಿಮಜ್ಜನ ವೇಳೆ ತಮಟೆ ಸೌಂಡಿಗೆ ಮುಸ್ಲಿಂ ಸಮುದಾಯದವರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಶಾಸಕ ಟಿ. ವೆಂಕಟರಮಣಯ್ಯ ಸಹ ಭಾಗಿಯಾಗಿದ್ದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಸೆಪ್ಟೆಂಬರ್ 1 ರಂದು 45 ಸಾವಿರ ಗಣೇಶ ಮೂರ್ತಿಗಳ ನಿಮಜ್ಜನ: ಬಿಬಿಎಂಪಿ