ಬೆಂಗಳೂರು: ನಗರದಲ್ಲಿ ಮತ್ತೊಂದು ಶಂಕಿತ ಕೊರೊನಾ ಚಿಕಿತ್ಸೆಗಾಗಿ ಮಹಿಳೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಫ್ರಾನ್ಸ್ ನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಥರ್ಮಲ್ ಸ್ಕ್ರೀನಿಂಗ್ ವೇಳೆ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ಜ್ವರ ಇದ್ದ ಕಾರಣ ಬೌರಿಂಗ್ ಆಸ್ಪತ್ರೆಗೆ ಕರೆತಂದು ಆರೋಗ್ಯಾಧಿಕಾರಿಗಳು ಚಿಕಿತ್ಸೆ ಮುಂದುವರಿಸಿದ್ದಾರೆ.
ಈಗಾಗಲೇ ಸ್ಯಾಂಪಲ್ಗಾಗಿ ರಕ್ತದ ಮಾದರಿ, ಕಫದ ದ್ರವ ಲ್ಯಾಬ್ಗೆ ಕಳಿಸಲಾಗಿದೆ. ವರದಿ ಬರುವವರೆಗೂ ಬೌರಿಂಗ್ ಆಸ್ಪತ್ರೆಯ ವಿಶೇಷ ಕೊರೊನಾ ವಾರ್ಡ್ನಲ್ಲಿ ನಿಗಾ ವಹಿಸಲಾಗುತ್ತಿದ್ದು, ಸದ್ಯಕ್ಕೆ ಶಂಕಿತ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಲ್ಯಾಬ್ ನಿಂದ ಬರುವ ವರದಿ ಆಧರಿಸಿ, ನೆಗೆಟಿವ್ ಬಂದರೆ ಮಹಿಳೆಯನ್ನು ಬಿಟ್ಟುಕೊಡಲು ಅಥವಾ ಕೊರೊನಾ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಚಿಕಿತ್ಸೆ ಮುಂದುವರಿಸಲು ಸಿದ್ಧತೆ ನಡೆಸಲಾಗಿದೆ.