ETV Bharat / state

ಚುನಾವಣೆ ಬಳಿಕ ಸಾರಿಗೆ ನೌಕರರ ಸಂಬಳ ಹೆಚ್ಚಿಸಲು ಬದ್ಧ : ಸಚಿವ ಲಕ್ಷ್ಮಣ ಸವದಿ - dcm lakshamana savadi news

Lakshmana Sawadi
Lakshmana Sawadi
author img

By

Published : Apr 5, 2021, 6:00 PM IST

Updated : Apr 5, 2021, 8:02 PM IST

17:53 April 05

ಒಂದು ವೇಳೆ ಸಾರಿಗೆ ಮುಷ್ಕರ ಆಗಿದ್ದೇ ಆದರೆ ಪರ್ಯಾಯ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ‌. ಬೆಂಗಳೂರು ನಗರವೊಂದಕ್ಕೆ ಐದು ಸಾವಿರ ಬಸ್‌ಗಳು ಬೇಕು‌..

ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿ

ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಾರಿಗೆ ನೌಕರರ ಸಂಬಳ ಹೆಚ್ಚಿಸಲು ಸರ್ಕಾರ ಬದ್ಧ. ಹಾಗಾಗಿ, ಏಪ್ರಿಲ್‌ 7ರಂದು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಒಂದು ವೇಳೆ ಚುನಾವಣಾ ಆಯೋಗ ಅನುಮತಿ ಕೊಟ್ಟರೆ ತಕ್ಷಣ ನಿಮ್ಮ ಬೇಡಿಕೆ ಈಡೇರಿಸಲು ಸಿದ್ಧ ಎಂದರು. 

9 ರೊಳಗೆ ಸಾರಿಗೆ ನೌಕರರಿಗೆ ನಾವು ನೀಡಿದ್ದ ಭರವಸೆಗಳಲ್ಲಿ ಎಂಟನ್ನು ಈಡೇರಿಸಿದ್ದೇವೆ‌. ಕೋವಿಡ್ ಅವಧಿಯಲ್ಲಿ ನಿಲ್ಲಿಸಲಾಗಿದ್ದ ಭತ್ಯೆ ಪುನಾರಂಭಿಸುವುದು‌. ಕೋವಿಡ್​ನಿಂದ ಮೃತಪಟ್ಟವರಿಗೆ 30 ಲಕ್ಷ ಪರಿಹಾರ, ಅಂತರ ನಿಗಮ ವರ್ಗಾವಣೆ, ಹಿರಿಯ ಅಧಿಕಾರಿಗಳ ದಬ್ಬಾಳಿಕೆ ನಿಲ್ಲಿಸುವುದು, ತರಬೇತಿ ಅವಧಿ ಎರಡರಿಂದ ಒಂದು ವರ್ಷಕ್ಕೆ ಇಳಿಸುವ ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.

ಇನ್ನು, ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಸರಿ ಸಮನಾಗಿ ವೇತನ ಪರಿಷ್ಕರಣೆ ಮಾಡುವಂತೆ ಸಾರಿಗೆ ನೌಕರರು ಬೇಡಿಕೆ ಮುಂದಿಟ್ಟಿದ್ದಾರೆ. ಪ್ರಸಕ್ತ ಸಾರಿಗೆ ಇಲಾಖೆಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಶೇ.60ರಷ್ಟು ಮಾತ್ರ ಆದಾಯ ಬರುತ್ತಿದೆ. 1962 ಕೋಟಿ ರೂ‌. ಮಾತ್ರ ಆದಾಯವಿದೆ. 

ಆದರೂ ಮುಖ್ಯಮಂತ್ರಿಗಳಿಂದ ಅನುದಾನ ಪಡೆದು ವೇತನ ವಿತರಣೆ ಮಾಡಿದ್ದೇವೆ. ಈಗ ವೇತನ ಪರಿಷ್ಕರಣೆ ಮಾಡಬೇಕೆಂದು ಮನಸ್ಸಿದ್ದರೂ ಉಪ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದು ರಿಲಾಕ್ಸೇಷನ್‌ಗೆ ಮನವಿ ಮಾಡಿದ್ದೇವೆ‌. ಸಾರಿಗೆ ನಿಗಮಗಳಿಗೆ ನಷ್ಟವಾದರೂ, ಹೊರೆಯಾದರೂ ವೇತನ ಪರಿಷ್ಕರಣೆ ಮಾಡಲು ಉದ್ದೇಶಿಸಿದ್ದೇವೆ. ಮೇ 4ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಏಪ್ರಿಲ್ 7ರಂದು ಸಾರಿಗೆ ಮುಷ್ಕರ ಮಾಡಿದರೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಬಡ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಕಳೆದ ಬಾರಿ ನಾಲ್ಕು ದಿನ ಪ್ರತಿಭಟನೆ ಮಾಡಿದಾಗ 7 ಕೋಟಿ ರೂ. ನಷ್ಟವಾಗಿದೆ. ಇದನ್ನು ಮುಷ್ಕರ ಮಾಡಿದವರಿಂದಲೇ ವಸೂಲಿ ಮಾಡಬೇಕೆಂದು ಸಾರ್ವಜನಿಕರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ ಎಂದರು.

ನಾವೇ‌ ಮುಷ್ಕರ ಮಾಡಿ ನಮ್ಮ ನಿಗಮಗಳು ಚೇತರಿಸಿಕೊಳ್ಳಲು ಸಾಧ್ಯವಾಗದಂತೆ ಮಾಡುವುದು ಬೇಡ ಎಂದು ನಮ್ಮ ಸಿಬ್ಬಂದಿಗೆ ವಿನಂತಿ‌ ಮಾಡುತ್ತೇನೆ. ಏಪ್ರಿಲ್ 7ರ ಮುಷ್ಕರವನ್ನು ಮುಂದೂಡಿ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಇಬ್ಬರು ಕೂತು ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳೋಣ. 

ಒಂದು ವೇಳೆ ನೀವು ಏ.7ರಂದು ಪ್ರತಿಭಟಿಸಿದರೂ, ಮೇ 4ರವರೆಗೆ ನಾವು ಯಾವುದೇ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ನೀವೂ ಕೂಡ ಪ್ರತಿಭಟನೆ ನಿಲ್ಲಿಸಲೂ ಆಗದೆ, ಮುಂದುವರಿಸಲೂ ಆಗದ ಪರಿಸ್ಥಿತಿ ಬರಬಹುದು ಎಂದು ನೌಕರರಿಗೆ ಸಲಹೆ ನೀಡಿದರು.

ಸರ್ಕಾರಿ ನೌಕರರಿಗೆ ನೀಡುವ ಆರನೇ ವೇತನ ಆಯೋಗದ ಶಿಫಾರಸುಗಳಿಗೆ ಸಮಾನಾಂತರ ವೇತನ ಕೊಡ ಬೇಕಾದರೆ, ಈಗಾಗಲೇ ಸಾರಿಗೆ ನೌಕರರಿಗೆ ನೀಡಲಾಗುತ್ತಿರುವ ಕೆಲವು ವಿಶೇಷ ಭತ್ಯೆಗಳ ಬಗ್ಗೆ ಏನು‌ ಮಾಡಬೇಕು ಎಂಬ ಪ್ರಶ್ನೆ ಬರುತ್ತದೆ. ಈಗ ನಮಗೆ ಬರುತ್ತಿರುವ ಆದಾಯ ಸಿಬ್ಬಂದಿ ವೇತನ ಮತ್ತು ಇಂಧನಕ್ಕೆ ಸಾಲುತ್ತಿಲ್ಲ. 

ಆರನೇ ವೇತನೆ ಆಯೋಗದ ಶಿಫಾರಸು ಜಾರಿ ಮಾಡಲು 3,800 ಕೋಟಿ ರೂ. ಹೆಚ್ಚುವರಿ ಹೊರೆಯಾಗುತ್ತದೆ. ಈ ಹೊರೆಯನ್ನು ಯಾವ ಮೂಲದಿಂದ ಭರಿಸಬೇಕು ಎಂಬುದರ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದು ಹೇಳಿದರು.

ಸಾರಿಗೆ ನೌಕರರು ತಮ್ಮ ವೇತನ ಪರಿಷ್ಕರಣೆಯ ಬೇಡಿಕೆ ಮುಂದಿಟ್ಟಿರುವುದು ನ್ಯಾಯಯುತವೇ ಆಗಿದೆ. ನಮಗೂ ವೇತನ ಪರಿಷ್ಕರಣೆ ಮಾಡುವ ಮನಸ್ಸಿದೆ. ಆದರೆ, ಸಮಯ ಸರಿಯಿಲ್ಲ‌. ಮೇ 4ರ ನಂತರ ಅವರ ವೇತನ ಹೆಚ್ಚಳ ಮಾಡಿ ಕೊಡುವುದು ನಿಶ್ಚಿತ. ಅಷ್ಟರೊಳಗೆ ಚುನಾವಣಾ ಆಯೋಗದ ಅನುಮತಿ ಸಿಕ್ಕರೆ ಯಾವುದೇ ಕ್ಷಣದಲ್ಲಾದರೂ ವೇತನ ಹೆಚ್ಚಳ ಘೋಷಣೆ ಮಾಡಲು ನಾವು ಸಿದ್ಧ ಎಂದರು.

ಒಂದು ವೇಳೆ ಸಾರಿಗೆ ಮುಷ್ಕರ ಆಗಿದ್ದೇ ಆದರೆ ಪರ್ಯಾಯ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ‌. ಬೆಂಗಳೂರು ನಗರವೊಂದಕ್ಕೆ ಐದು ಸಾವಿರ ಬಸ್‌ಗಳು ಬೇಕು‌. ಸುಮಾರು ಮೂರು ಸಾವಿರ ಖಾಸಗಿ ಬಸ್‌ಗಳು ಹಾಗೂ ಟೆಂಪೋ ಟ್ರಾವಲರ್​ಗಳು, ಮಿನಿ ಬಸ್​ಗಳನ್ನ ಪಟ್ಟಿ ಮಾಡಿದ್ದೇವೆ‌. ಅವರಿಗೂ ಬೆಂಗಳೂರು ನಗರದಲ್ಲಿ ವಾಹನ ಓಡಿಸಲು ಆಹ್ವಾನ ನೀಡಿದ್ದೇವೆ ಎಂದು ಹೇಳಿದರು.

ಪ್ರಸಕ್ತ ಪ್ರತಿಭಟನೆ ಧರಣಿ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ‌. ಕಾರ್ಮಿಕ ನ್ಯಾಯಾಲಯದ ಆದೇಶವೂ ಇದೆ‌. ಇದು ಕೂಡ ಪ್ರತಿಭಟನಾಕಾರರಿಗೆ ತೊಂದರೆಯಾಗಬಹುದು ಎಂದರು.

Last Updated : Apr 5, 2021, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.