ಬೆಂಗಳೂರು: ಲಾಕ್ಡೌನ್ ವೇಳೆ ಅನಗತ್ಯವಾಗಿ ರಸ್ತೆಗಿಳಿದು ಜಪ್ತಿಯಾಗಿದ್ದ ವಾಹನಗಳ ರಿಲೀಸ್ ಪ್ರಕ್ರಿಯೆ ಆರಂಭವಾಗಿದೆ. ವಾಹನಗಳನ್ನು ಬಿಡಿಸಿಕೊಳ್ಳಬೇಕಾದರೆ ದಾಖಲಾಗಿರುವ ಸಂಚಾರಿ ನಿಯಮ ಉಲ್ಲಂಘನೆ ಕೇಸ್ಗಳ ದಂಡವನ್ನು ಮಾಲೀಕರು ಕಟ್ಟಬೇಕಿದೆ.
ಹೈಕೋರ್ಟ್ ನಿರ್ದೇಶನ ಮೇರೆಗೆ ನಗರ ವಿವಿಧ ಪೊಲೀಸ್ ಠಾಣೆಗಳಿಗೆ ವಾಹನ ಬಿಡಿಸಿಕೊಳ್ಳಲು ಮಾಲೀಕರು ಬರುತ್ತಿದ್ದಾರೆ. ಲಾಕ್ಡೌನ್ನಲ್ಲಿ ಸುಮಾರು 40 ಸಾವಿರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಹಳೆ ಕೇಸ್ ಕ್ಲಿಯರ್ ಮಾಡುವುದರ ಜೊತೆಗೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ದಂಡ ಪಾವತಿಸಿದರೆ ಮಾತ್ರ ವಾಹನ ಬಿಡಿಸಿಕೊಳ್ಳಬಹುದಾಗಿದೆ.
ನಿಮ್ಮ ವಾಹನ ರಿಲೀಸ್ ಮಾಡಲು ಏನುಬೇಕು.?
ಜಪ್ತಿಯಾದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ 500 ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1 ಸಾವಿರ ದಂಡ ರೂಪದಲ್ಲಿ ಕಟ್ಟಬೇಕು. ವಾಹನಗಳ ಮೇಲೆ ಕೇಸ್ಗಳಿದ್ದರೆ ಕಡ್ಡಾಯವಾಗಿ ಕ್ಲಿಯರ್ ಮಾಡಿಕೊಳ್ಳಬೇಕು. ಇದರ ಜೊತೆಗೆ ಖಾಸಗಿ ಜಾಗಗಳಲ್ಲಿ ಸೀಜ್ ಮಾಡಿರುವ ವಾಹನಗಳನ್ನು ಪೊಲೀಸರು ಪಾರ್ಕ್ ಮಾಡಿದ್ದರೆ ಅದರ ಪಾರ್ಕಿಂಗ್ ಚಾರ್ಜ್ ಕೂಡ ಪಾವತಿಸಬೇಕಿದೆ.
100 ರೂಪಾಯಿ ಮೌಲ್ಯದ ಬಾಂಡ್ ಪೇಪರ್-(ಕೋ ಆಪರೇಟಿವ್ ಬ್ಯಾಂಕ್ಗಳಿಂದ ತರಬೇಕು) ಆಧಾರ್ ಕಾರ್ಡ್ ಪ್ರತಿ, ವಾಹನ ಪರವಾನಗಿ ಹಾಗೂ ವಾಹನದ ಆರ್ಸಿ ದಾಖಲೆ ಜೆರಾಕ್ಸ್ ಹಾಗೂ ಒಂದು ಫೋಟೋ ಜೊತೆ ಖುದ್ದು ವಾಹನದ ಮಾಲೀಕರು ಕೂಡ ಠಾಣೆಗೆ ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಕೋವಿಡ್ ಸೋಂಕು ನಿರ್ವಹಣೆಗೆ ತರಬೇತಿ : ಮಾದರಿ ಹೈಟೆಕ್ ಆಸ್ಪತ್ರೆ ಸಜ್ಜು