ETV Bharat / state

ಗೆದ್ದರೂ ಗದ್ದುಗೆ ಸಿಗಲಿಲ್ಲ.. ನಲಪಾಡ್‌ಗೆ ಬೆಂಬಲಿಗರಿಂದ ಅಬ್ಬರದ ಸ್ವಾಗತ.. ಕೆಲಕಾಲ ಟ್ರಾಫಿಕ್‌ ಜಾಮ್.. - ಮಹಮ್ಮದ್ ನಲಪಾಡ್ ಮೆರವಣಿಗೆ

ಪಕ್ಷದ ಹೈಕಮಾಂಡ್ ನಾಯಕರನ್ನು ಸಾಕಷ್ಟು ಮನವೊಲಿಸುವ ಪ್ರಯತ್ನ ಮಾಡಿರುವ ನಲಪಾಡ್, ಇದರಲ್ಲಿ ಯಶಸ್ಸು ಕಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಚುನಾವಣೆಯಲ್ಲಿ ತಮ್ಮನ್ನ ಬೆಂಬಲಿಸಿದ ಡಿ ಕೆ ಶಿವಕುಮಾರ್ ಅವರನ್ನ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ..

traffic jam during mohmed  nalpad  returns to bengluru
ಬೆಂಗಳೂರು
author img

By

Published : Feb 7, 2021, 7:24 PM IST

ಬೆಂಗಳೂರು : ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅನರ್ಹಗೊಂಡ ಮಹಮ್ಮದ್ ನಲಪಾಡ್ ಹ್ಯಾರಿಸ್ ಮೂರು ದಿನಗಳ ನಂತರ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ವೇಳೆ ಅವರ ಬೆಂಬಲಿಗರು ನಡೆಸಿದ ಮೆರವಣಿಗೆಯಿಂದಾಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆಯಾಗಿತ್ತು.

ಗೆದ್ದರೂ ಗದ್ದುಗೆ ಸಿಗದಿದ್ರೇನಂತೆ, ಬೆಂಬಲಿಗರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿತು..

ತಮ್ಮ ಸ್ಪರ್ಧೆ ಅನರ್ಹಗೊಂಡ ಹಿನ್ನೆಲೆ ಅತಿ ಹೆಚ್ಚು ಮತಗಳಿಸಿದರೂ ಅಧ್ಯಕ್ಷರಾಗುವ ಅವಕಾಶದಿಂದ ವಂಚಿತರಾದ ನಲಪಾಡ್, ಪಕ್ಷದ ಹೈಕಮಾಂಡ್ ನಾಯಕರ ಭೇಟಿಗಾಗಿ ಕಳೆದ ಮೂರು ದಿನಗಳಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದರು. ಇಂದು ಮಧ್ಯಾಹ್ನ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಬೃಹತ್ ಮೆರವಣಿಗೆ ಮೂಲಕ ರಾಜಧಾನಿಯನ್ನು ಪ್ರವೇಶ ಮಾಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರಾರು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಬೆಂಗಳೂರಿಗೆ ಆಗಮಿಸಿದ್ದರಿಂದ, ಮಾರ್ಗ ಮಧ್ಯೆ 2 ರಿಂದ 3 ಗಂಟೆ ಸಂಚಾರ ದಟ್ಟಣೆ ಉಂಟಾಯ್ತು. ಈ ಮಾರ್ಗದಲ್ಲಿ ಸಾಗಬೇಕಿದ್ದ ಸಾಕಷ್ಟು ಮಂದಿ ಹಾಗೂ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಇತರ ಮಾರ್ಗಗಳು ನಾಲ್ಕೈದು ಗಂಟೆಗಳ ಕಾಲ ಸಂಚಾರ ದಟ್ಟಣೆ ಸಮಸ್ಯೆಗೆ ಒಳಗಾಗಿದ್ದವು.

ಇನ್ನು, ನಲಪಾಡ್​ ವಿಮಾನ ನಿಲ್ದಾಣದಿಂದ ನೇರ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದರು. ಸುದೀರ್ಘ ಸಮಾಲೋಚನೆಯಲ್ಲಿ ತೊಡಗಿದರು. ಯುವ ಅಧ್ಯಕ್ಷರಾಗುವ ಅವಕಾಶದಿಂದ ವಂಚಿತರಾದರೂ ಅತಿ ಹೆಚ್ಚು ಮತ ಪಡೆದಿರುವ ಹಿನ್ನೆಲೆ ನಲಪಾಡ್ ಇಂದು ಡಿಕೆಶಿ ಜೊತೆ ನಡೆಸುವ ಸಭೆಯ ನಂತರ ಮಾಧ್ಯಮಗಳಿಗೆ ಮಾತನಾಡುವ ಸಾಧ್ಯತೆ ಇದೆ.

ಪಕ್ಷದ ಹೈಕಮಾಂಡ್ ನಾಯಕರನ್ನು ಸಾಕಷ್ಟು ಮನವೊಲಿಸುವ ಪ್ರಯತ್ನ ಮಾಡಿರುವ ನಲಪಾಡ್, ಇದರಲ್ಲಿ ಯಶಸ್ಸು ಕಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಚುನಾವಣೆಯಲ್ಲಿ ತಮ್ಮನ್ನ ಬೆಂಬಲಿಸಿದ ಡಿ ಕೆ ಶಿವಕುಮಾರ್ ಅವರನ್ನ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಕೆಲ ಮೂಲಗಳ ಪ್ರಕಾರ ತಮ್ಮ ಆಯ್ಕೆ ಅಸಿಂಧುಗೊಂಡಿರುವುದನ್ನು ರದ್ದುಪಡಿಸಿ ಮತ್ತೆ ತಮಗೆ ಅಧ್ಯಕ್ಷರಾಗುವ ಅವಕಾಶ ನೀಡುವಂತೆ ನಲಪಾಡ್ ಹೈಕಮಾಂಡ್ ನಾಯಕರಿಗೂ ಒತ್ತಾಯ ಮಾಡಿದ್ದು, ಇದೀಗ ಅದೇ ವಿಚಾರವನ್ನು ಡಿ ಕೆ ಶಿವಕುಮಾರ್​ ಅವರಿಗೂ ತಿಳಿಸಲು ಆಗಮಿಸಿದ್ದಾರೆ ಎಂಬ ಮಾಹಿತಿ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.