ಬೆಂಗಳೂರು: ಕೊರೊನಾ ಪ್ರೇರಿತ ಲಾಕ್ಡೌನ್ ಸಡಿಲಿಕೆಯ ನಂತರ ಬೆಂಗಳೂರಿನಲ್ಲಿ ಮೊದಲಿನಂತೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಜನರು ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಜೀವನದ ಬಂಡಿ ಸಾಗಿಸಲು ಹೊರಗಡೆ ಹೋಗಬೇಕಾದದ್ದು ಅನಿವಾರ್ಯವಾಗಿದೆ. ಆದ್ದರಿಂದ ಖಾಲಿಯಿದ್ದ ರಸ್ತೆಗಳಲ್ಲಿ ಈಗ ವಾಹನಗಳ ದಟ್ಟಣೆ ಕಂಡು ಬರ್ತಿದೆ. ಇದು ಕೊರೊನಾಕ್ಕೆ ಆಹ್ವಾನ ನೀಡಿದಂತಾಗಿದೆ. ಆದ್ದರಿಂದ ಪೊಲೀಸರು ಹೆಚ್ಚಿನ ಗಮನ ವಹಿಸಿದ್ದಾರೆ.
ಕೆಲವರು ರಸ್ತೆ ಬಳಿ ವಿನಾಕಾರಣ ಪಾರ್ಕಿಂಗ್ ಮಾಡಿ ಜನರಿಗೆ ಕಿರಿಕಿರಿ ಮಾಡಿ, ಗುಂಪು ಸೇರುವ ಹಾಗೆ ಮಾಡುವುದು ಅಥವಾ ರಸ್ತೆ ಬಳಿ ಉಗುಳುವುದು ಮಾಡ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿ, ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ನಗರದ ಅನೇಕ ಕಡೆ ಬೀದಿಗಳಲ್ಲಿ ಬಟ್ಟೆ ವ್ಯಾಪಾರ ಹಾಗೂ ಇತರೆ ವಸ್ತು ವ್ಯಾಪಾರ ಶುರುವಾದ ಕಾರಣ, ರಸ್ತೆಗಳ ಬಳಿ ಟ್ರಾಫಿಕ್ ಜಾಂ ಆಗ್ತಿದೆ. ಇದರಿಂದ ಕೊರೊನಾ ಸಮುದಾಯಕ್ಕೆ ಹರಡುವ ಸಾದ್ಯತೆಯಿದ್ದು, ಪೊಲೀಸರ ಜೊತೆ ಬಿಬಿಎಂಪಿ ಮಾರ್ಷಲ್ಸ್ ಜನರಿಗೆ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಣೆ ಮಾಡಲು ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ಕೆಲವರು ಪೊಲೀಸರ ಎದುರು ನಿಯಮ ಪಾಲನೆ ಮಾಡಿ, ಮತ್ತೆ ಅದೇ ತಪ್ಪನ್ನು ಮಾಡ್ತಿದ್ದಾರೆ. ಹೀಗಾಗಿ ಸರ್ಕಾರದ ನಿಯಮ ಪಾಲನೆ ಕಡ್ಡಾಯವಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಮುಖ ಸಿಗ್ನಲ್ ಬಳಿ 10 ರಿಂದ 20 ಸೆಕೆಂಡ್ಗೆ ವಾಹನಗಳನ್ನ ನಿಲ್ಲಿಸಲಾಗುತ್ತದೆ. ಹೀಗಾಗಿ ಮುಂಜಾಗ್ರತೆಯಿಂದ ಪ್ರತಿಯೊಬ್ಬರು ಮನೆಯಿಂದ ವಾಹನದಲ್ಲಿ ಹೊರಡುವಾಗ ಹೆಲ್ಮೆಟ್ ಜೊತೆ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ.
ಮಾರ್ಕೆಟ್ ಸೇರಿದಂತೆ ಅನೇಕ ಕಡೆಯಲ್ಲಿ ಜನರು ದೈಹಿಕ ಅಂತರ ಕಾಪಾಡ್ತಿಲ್ಲ. ಜನ ನಿಯಮ ಉಲ್ಲಂಘನೆ ಮಾಡುವುದರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್ ಬಳಸದೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಹೀಗಾಗಿ ಬಹಳ ಜಾಗ್ರತೆಯಿಂದ ಇರೋದು ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇದಕ್ಕೆ ಖಾಕಿ ಪಡೆಯು ಅಲರ್ಟ್ ಆಗಿ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.