ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನವೂ ಧಾರಾಕಾರ ಮಳೆಯಾಗುತ್ತಿದ್ದು, ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಗರದೆಲ್ಲೆಡೆ ಮಳೆಯಾಗುತ್ತಿದೆ.
ಮಳೆ ದೀಪಾವಳಿ ಸಂಭ್ರಮ ಕಸಿದಿದ್ದು, ಹೊರಗಡೆ ಓಡಾಡದಂತೆ ಮಾಡಿದೆ. ಇನ್ನು ದೀಪಾವಳಿ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ವ್ಯಾಪಾರಸ್ಥರಿಗೂ ಮಳೆ ನಷ್ಟ ತಂದಿದೆ. ಸಂಜೆ ವೇಳೆಗೆ ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ.
ನಗರದ ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಹೆಬ್ಬಾಳ, ಜಯನಗರ, ಕಾರ್ಪೊರೇಷನ್, ಕೋರಮಂಗಲ, ಆಡುಗೋಡಿ, ಬಿಟಿಎಂ ಲೇಔಟ್, ಇಂದಿರಾನಗರ, ಶಾಂತಿನಗರದಲ್ಲಿ ಎಡೆಬಿಡದೆ ಮಳೆ ಸುರಿದಿದೆ. ಸದ್ಯ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.