ETV Bharat / state

ನಾಳೆ ಜೆಡಿಎಸ್ ಸಮಾವೇಶ: ಪದಾಧಿಕಾರಿಗಳನ್ನು ನೇಮಿಸಿದ ಶಾಸಕ - ಪದಾಧಿಕಾರಿಗಳ ನೇಮಕ

ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್​ ಬೃಹತ್ ಸಮಾವೇಶ ಏರ್ಪಡಿಸಿದೆ. ಸಮಾವೇಶಕ್ಕೆ ಅಧಿಕ ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿ ವಹಿಸಿರುವ ಕ್ಷೇತ್ರದ ಮುಖಂಡರು ಪದಾಧಿಕಾರಿಗಳನ್ನು ನೇಮಿಸಿದ್ದಾರೆ.

Legislator appointed by Infantry
author img

By

Published : Aug 6, 2019, 7:41 PM IST

ಬೆಂಗಳೂರು: ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿರುವ ಜೆಡಿಎಸ್​, ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಹೆಚ್ಚು ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಮುಖಂಡರಿಗೆ ವಹಿಸಲಾಗಿದೆ.

ಅದಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜ್‌ ಎಂ‌. ನೇತೃತ್ವದಲ್ಲಿ ನಡೆದ ಸಭೆಯಲ್ಲಿ 12 ಮಂದಿ ಜಿಲ್ಲೆಯ ಪದಾಧಿಕಾರಿಗಳಾಗಿ ನೇಮಕವಾಗಿದ್ದಾರೆ.

ಪದಾಧಿಕಾರಿಗಳ ನೇಮಕ

ಪದಾಧಿಕಾರಿಗಳು: ಮಾಳಿಗೇನಹಳ್ಳಿಯ ರಾಮಯ್ಯ (ಉಪಾಧ್ಯಕ್ಷ), ಶ್ಯಾಮಣ್ಣ, ವೆಂಕಟೇಶ್ (ಕಾರ್ಯದರ್ಶಿ), ಪಿಳ್ಳಮುನಿಯಪ್ಪ, ನಾರಾಯಣಸ್ವಾಮಿ ಮತ್ತು ನಾರಾಯಣಸ್ವಾಮಿ (ಸಂಘಟನಾ ಕಾರ್ಯದರ್ಶಿ), ಮಂಜುನಾಥ್, ವೆಂಕಟೇಶ್, ಶಾಂತಮೂರ್ತಿ, ಕೃಷ್ಣಪ್ಪ, ರಾಜಣ್ಣ ಹಾಗೂ ವೀರಭದ್ರಯ್ಯ (ಜಿಲ್ಲಾ‌ ಸಮಿತಿಯ ಸದಸ್ಯರು).

ಈ ವೇಳೆ ಅಧ್ಯಕ್ಷ ನಾಗರಾಜ್ ಮಾತನಾಡಿ, ಉಪಚುನಾವಣೆ ಹಿನ್ನೆಲೆ ಪಕ್ಷವನ್ನು ಹೆಚ್ಚು ಸಂಘಟಿಸಬೇಕಿದೆ. ಅದಕ್ಕಾಗಿ ಇಂದು ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಾಳೆ‌ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಹೆಚ್ಚು ಕಾರ್ಯಕರ್ತರನ್ನು ಕರೆತರಲು ಹೈಕಮಾಂಡ್​ ಸೂಚಿಸಿದೆ. ನಾವೆಲ್ಲರು ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದರು.

Intro:ಜೆಡಿಎಸ್ ಸಮಾವೇಶಕ್ಕೆ ತಯರಾದ ಪದಾಧಿಕಾರಿಗಳು
ಪದಾಧಿಕಾರಿಗಳ ಆಯ್ಕೆ ಮಾಡಿದ ಶಾಸಕರು

ಬೆಂಗಳೂರು: ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಮುಂದಾಗಿರುವ ಜೆಡಿಎಸ್ ಪಕ್ಷ‌ ನಾಳೆ ಅಂದರೆ ಆಗಸ್ಟ್ ೦೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದೆ.. ಈ ಹಿನ್ನೆಲೆ ಸಮಾವೇಶದಲ್ಲಿ ಹೆಚ್ಚು ಜನರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಆಯಾ ಕ್ಷೇತ್ರದ ಮುಖಂಡರ ಮೇಲಿದೆ.. ಇದರ ಜೊತೆಯಲ್ಲಿ ಹೆಚ್ಚು ಜನರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೆಲಸ ಮಾಡಲು ಸೂಕ್ತ ಪದಾಧಿಕಾರಿಗಳು ಪಕ್ಷಕ್ಕೆ ಬೇಕಾಗಿದ್ದು, ಹಾಗು ಕೆಲಸ ಮಾಡುವಂತವವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಯ್ತು...

ಕ್ಷೇತ್ರದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ಜಿಲ್ಲಾ ಅಧ್ಯಕ್ಷರಾದ ನಾಗರಾಜ್‌ ಎಂ‌. ಬಿದಲೂರು ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ೧೩ ಜನರಿ ಜಿಲ್ಲೆಯ ಜೆಡಿಎಸ್ ನ ಪದಾಧಿಕಾರಿಗಳಾಗಿ ನೇಮಕ ಮಾಡಲಾಯ್ತು.. ಮಾಳಿಗೇನಹಳ್ಳಿಯ ರಾಮಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ್ರೆ, ಶ್ಯಾಮಣ್ಣ ಮತ್ತು ವೆಂಕಟೇಶ್ ಕಾರ್ಯದರ್ಶಿಯಾಗಿ ಆಯ್ಕೆಯಾದ್ರು.. ಪಿಳ್ಳಮುನಿಯಪ್ಪ,, ನಾರಾಯಣಸ್ವಾಮಿ ಮತ್ತು ನಾರಾಯಣಸ್ವಾಮಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ್ರೆ, ಮಂಜುನಾಥ್, ವೆಂಕಟೇಶ್, ಶಾಂತಮುರ್ತಿ, ಕೃಷ್ಣಪ್ಪ, ರಾಜಣ್ಣ ಹಾಗೂ ವೀರಭದ್ರಯ್ಯನವರು ಜಿಲ್ಲಾ‌ಸಮಿತಿಯ ಸದಸ್ಯರಾಗಿ ಆಯ್ಕೆಯಾದ್ದು..

ಇದೇ ವೇಳೆ ಮಾತನಾಡಿದ ಅಧ್ಯಕ್ಷರಾದ ನಾಗರಾಜ್ ಅವರು, ಉಪಚುನಾವಣೆ ಹಿನ್ನೆಲೆ ಪಕ್ಷವನ್ನು ಬಲವರ್ಧನೆ ಮಾಡುವ ಕೆಲಸ‌ಮಾಡಬೇಕಿದೆ.. ಅದಕ್ಕಾಗಿ ಇಂದು ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ನಾಳೆ‌ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಹೆಚ್ಚು ಜನರನ್ನು ಕರೆದುಕೊಂಡು ಹೋಗುವ ಜವಬ್ದಾರಿ ಇದೆ..‌ನಾವೆಲ್ಲಾ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಸಕ್ಸಸ್ ಮಾಡುತ್ತೇವೆ ಎಂದರು..

Body:no

Conclusion:no
ETV Bharat Logo

Copyright © 2025 Ushodaya Enterprises Pvt. Ltd., All Rights Reserved.