ಬೆಂಗಳೂರು: ನೋವೆಲ್ ಕೊರೊನಾ ವೈರಸ್ ಕಾಲಿಟ್ಟ ದಿನದಿಂದಲೂ ಒಂದಂಕಿಯಲ್ಲಿದ್ದರೂ ಸಾವು ಪ್ರಕರಣಗಳು ವರದಿ ಆಗುತ್ತಿದ್ದವು. ಆದರೆ ಕೋವಿಡ್ ಮೂರನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ಕೋವಿಡ್ ಸಾವು ದಾಖಲಾಗಿದೆ.
ಕಳೆದೊಂದು ವಾರದಿಂದ ಬೆರಳೆಣಿಕೆಯಷ್ಟು ಮಂದಿ ಕೋವಿಡ್ಗೆ ಬಲಿಯಾಗುತ್ತಿದ್ದರು. ಇದೀಗ ಸಾವಿನ ಪ್ರಮಾಣ ಶೂನ್ಯ ದಾಖಲಾಗಿದ್ದು, ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
-
ಇಂದಿನ 13/03/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/3ZlXPuBBQg @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/2mkmKG9SBB
— K'taka Health Dept (@DHFWKA) March 13, 2022 " class="align-text-top noRightClick twitterSection" data="
">ಇಂದಿನ 13/03/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/3ZlXPuBBQg @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/2mkmKG9SBB
— K'taka Health Dept (@DHFWKA) March 13, 2022ಇಂದಿನ 13/03/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/3ZlXPuBBQg @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/2mkmKG9SBB
— K'taka Health Dept (@DHFWKA) March 13, 2022
ರಾಜ್ಯದಲ್ಲಿಂದು 36,623 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 164 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,43,806 ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರವೂ 0.44% ರಷ್ಟಿದೆ. ಇತ್ತ 130 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,01,093 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 2,656 ಸಕ್ರಿಯ ಪ್ರಕರಣಗಳಿವೆ.
ಇಂದು ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಈ ತನಕ 40,018 ಮಂದಿ ಮೃತಪಟ್ಟಿದ್ದಾರೆ. ಇವತ್ತಿನ ಡೆತ್ ರೇಟ್ 0.00% ರಷ್ಟಿದೆ. ವಿಮಾನ ನಿಲ್ದಾಣದಿಂದ 2,773 ಪ್ರಯಾಣಿಕರು ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ 112 ಮಂದಿಗೆ ಸೋಂಕು ತಗುಲಿದ್ದು 17,80,336ಕ್ಕೆ ಏರಿಕೆ ಆಗಿದೆ. 87 ಮಂದಿ ಡಿಸ್ಚಾರ್ಜ್ ಆಗಿದ್ದು, ಈ ತನಕ 17,61,271 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಸಾವಿನ ಸಂಖ್ಯೆ 16,942 ರಷ್ಟಿದ್ದು, ಸದ್ಯ 2,122 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ವೈರಸ್ ಅಪಡೇಟ್ಸ್:
ಅಲ್ಪಾ- 156
ಬೇಟಾ-08
ಡೆಲ್ಟಾ ಸಬ್ ಲೈನೇಜ್- 4,431
ಇತರೆ- 286
ಒಮಿಕ್ರಾನ್-1,115
BAI.1.529- 807
BA1- 89
BA2-219
ಒಟ್ಟು- 5,996
ಕಳೆದೊಂದು ವಾರದಿಂದ 20 ಜಿಲ್ಲೆಗಳಲ್ಲಿ ಶೂನ್ಯ ಸಾವು :
ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ,ಹಾಸನ, ಹಾವೇರಿ ಹಾಗೂ ಕೊಡುಗು, ಕೋಲಾರ,ಕೊಪ್ಪಳ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯಪುರ, ಯಾದಗಿರಿಯಲ್ಲಿ ಕಳೆದೊಂದು ವಾರದಿಂದ ಯಾವುದೇ ಸೋಂಕಿತರು ಬಲಿಯಾಗಿಲ್ಲ.