ಬೆಂಗಳೂರು: ದೆಹಲಿಯ ತಬ್ಲಿಘಿ ಜಮಾತ್ಗೆ ಭೇಟಿ ನೀಡಿದ್ದವರಲ್ಲಿ 5 ಜನರಿಗೆ ಸೋಂಕು ಪತ್ತೆಯಾಗಿದೆ. ಅಲ್ಲಿಗೆ ರಾಜ್ಯದಲ್ಲಿ ತಬ್ಲಿಘಿಯಲ್ಲಿ ಭಾಗವಹಿಸಿದ ಒಟ್ಟು 21 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 4 ಜನ ಬೆಳಗಾವಿಯಲ್ಲಿ ಮತ್ತು ಒಬ್ಬರು ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ 151ಕ್ಕೆ ಏರಿಕೆಯಾಗಿದ್ದು, 4 ಸಾವು, 3 ಐಸಿಯು ಮತ್ತು 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಬಳ್ಳಾರಿಯಲ್ಲಿರುವ ವ್ಯಕ್ತಿಯಲ್ಲಿ ಇನ್ನೂ ಸೋಂಕು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಹಾಗಾಗಿ ಸದ್ಯ ಆತನನ್ನು ಪ್ರತ್ಯೇಕವಾಗಿ ಇರಿಸಿ ಕ್ವಾರಂಟೈನ್ ಮಾಡಲಾಗಿದೆ. ಸೋಂಕು ಖಚಿತ ಎಂದು ಹೇಳಲು ಎರಡು ಹಂತಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಈ ವ್ಯಕ್ತಿ ಮೊದಲನೇ ಹಂತದಲ್ಲಿ ಪಾಸಿಟಿವ್ ಬಂದಿದ್ದರೂ ಎರಡನೇ ಹಂತದಲ್ಲಿ ಫಲಿತಾಂಶ ಬಂದಿಲ್ಲ. ಎರಡೂ ಹಂತದಲ್ಲಿ ಪಾಸಿಟಿವ್ ಬಂದರಷ್ಟೇ ಸೋಂಕಿತ ಎಂದು ಪರಿಗಣಿಸಲಾಗುತ್ತದೆ.
ಟ್ರಾವೆಲ್ ಹಿಸ್ಟರಿ ಹೀಗಿದೆ..
*ರೋಗಿ- 145*: 68 ವರ್ಷದ ಬೆಂಗಳೂರಿನ ನಿವಾಸಿಯಲ್ಲಿ ಸೋಂಕು ಪತ್ತೆ. ದುಬೈನಿಂದ ಟ್ರಾವೆಲ್ ಮಾಡಿದ್ದ ವ್ಯಕ್ತಿ, ಮಾರ್ಚ್ 22 ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ.. ಸೋಂಕಿತನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..
*ರೋಗಿ-146* : 62 ವರ್ಷದ ಮಹಿಳೆಗೆ ಸೋಂಕು ದೃಢ. ರೋಗಿ 145 ರ ಪತ್ನಿಗೆ ಸೋಂಕು ದೃಢವಾಗಿದ್ದು, ಪತಿಯ ಜೊತೆ ದುಬೈಗೆ ತೆರಳಿದ್ದ ಮಹಿಳೆ.. ಒಂದೇ ಕುಟುಂಬದ ಇಬ್ಬರಿಗೆ ತಗುಲಿರುವ ಕೊರೋನಾ ಸೋಂಕು. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-147* : ಬೆಳಗಾವಿಯ 36 ವರ್ಷದ ಮಹಿಳೆಗೆ ಕೊರೋನಾ ಸೋಂಕು.. ಮಾರ್ಚ್ 13 ರಿಂದ 18ರ ವರೆಗೆ ದೆಹಲಿಯ ಧರ್ಮ ಸಭೆಯಲ್ಲಿ ಭಾಗಿಯಾಗಿದ್ದರು.. ಸದ್ಯ ಸೋಂಕಿತೆಗೆ ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-148*: ಬೆಳಗಾವಿಯ 40 ವರ್ಷದ ವ್ಯಕ್ತಿಗೆ ಸೋಂಕು, ದೆಹಲಿಗೆ ತೆರಳಿದ್ದ ವ್ಯಕ್ತಿಯಲ್ಲಿ ಸೋಂಕು ಧೃಡ.. ದೆಹಲಿಯ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-149*: 67 ವರ್ಷದ ಬೆಳಗಾವಿಯ ಮಹಿಳೆಗೆ ಸೋಂಕು ಪತ್ತೆಯಾಗಿದ್ದು, ದೆಹಲಿಯ ಸಭೆಯಲ್ಲಿ ಭಾಗಿಯಾಗಿದ್ದು, ಮಹಿಳೆಗೆ ಸೋಂಕು ಇರುವುದು ಧೃಡವಾಗಿದೆ.. ಮಾರ್ಚ್ 13ರಿಂದ 18 ರವರೆಗೆ ದೆಹಲಿಯಲ್ಲಿ ಇದ್ದರು. ಸದ್ಯ ಬೆಳಗಾವಿ ಆಸ್ಪತ್ರೆ ಚಿಕಿತ್ಸೆ ಮುಂದುವರಿದೆ.
*ರೋಗಿ-150*: ದೆಹಲಿಗೆ ತೆರಳಿದ್ದ 41 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗದವರು, ಮಾರ್ಚ್ 13 ರಿಂದ 18 ರವೆಗೂ ದೆಹಲಿಯಲ್ಲಿದ್ದ ಮಹಿಳೆ, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ- 151* : ಬಳ್ಳಾರಿಯ 41 ವರ್ಷದ ಪುರುಷನಿಗೆ ಸೋಂಕು, ದೆಹಲಿಯ ಧರ್ಮ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಸದ್ಯ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಒಟ್ಟು ರಾಜ್ಯದಲ್ಲಿ 151 ಪ್ರಕರಣ ಪತ್ತೆ
ಬೆಂಗಳೂರು - 57
ಬೆಂಗಳೂರು ಗ್ರಾಮಾಂತರ - 01
ಮೈಸೂರು - 28
ಬೀದರ್ - 10
ಚಿಕ್ಕಬಳ್ಳಾಪುರ - 7
ದಕ್ಷಿಣ ಕನ್ನಡ - 12
ಉತ್ತರ ಕನ್ನಡ - 8
ಕಲಬುರಗಿ - 5
ದಾವಣಗೆರೆ - 3
ಉಡುಪಿ - 3
ಬೆಳಗಾವಿ - 7
ಬಳ್ಳಾರಿ - 6
ಕೊಡಗು - 1
ಧಾರವಾಡ - 1
ತುಮಕೂರು - 1
ಬಾಗಲಕೋಟೆ - 1