ETV Bharat / state

ಪಕ್ಷ ಸಂಘಟನೆ ದೃಷ್ಟಿಯಿಂದ ಕೋಲಾರದ ಗೋವಿಂದರಾಜ್​​​​​ಗೆ ಟಿಕೆಟ್: ಎಚ್​​ಡಿಕೆ

author img

By

Published : Jun 18, 2020, 12:39 PM IST

Updated : Jun 18, 2020, 1:02 PM IST

ನಮ್ಮ ಪಕ್ಷದಿಂದ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ ಅವರು. ಅವರೊಬ್ಬ ಪ್ರಗತಿ ಪರ ರೈತರಾಗಿದ್ದಾರೆ. ಕೋಲಾರದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ‌ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದ ಕಾರಣ ಚಿಕ್ಕಬಳ್ಳಾಪುರ - ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕೋಲಾರ ಭಾಗದಲ್ಲಿ ಪಕ್ಷದ ಸಂಘಟನೆ ಉದ್ದೇಶದಿಂದ ಗೋವಿಂದರಾಜ್ ಅವರಿಗೆ ಪರಿಷತ್ ಟಿಕೆಟ್ ನೀಡಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ ಅವರು. ಅವರೊಬ್ಬ ಪ್ರಗತಿ ಪರ ರೈತರಗಿದ್ದಾರೆ. ಕೋಲಾರದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ‌ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದ ಕಾರಣ ಚಿಕ್ಕಬಳ್ಳಾಪುರ- ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿ:

ಕಳೆದ ಹಲವು ದಿನಗಳಿಂದ ಗಡಿ ಭಾಗದಲ್ಲಿ ಭಾರತ- ಚೀನಾ ನಡುವೆ ಸಂಘರ್ಷ ಆಗುತ್ತಿದೆ. ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಭಾರತಕ್ಕೆ ಇದು ಸಂಕಷ್ಟದ ಸಮಯ ಕೊರೊನಾ ದಿಂದ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಇದು ಯುದ್ಧ ಮಾಡುವ ಸಮಯ ಅಲ್ಲ ಎಂದು ಇದೇ ವೇಳೆ ತಿಳಿಸಿದರು.

ಮಾತುಕತೆ ಮುಖಾಂತರ ಶಾಂತಿ ಕಾಪಾಡಬೇಕಿದೆ. ಇದು ನನ್ನ ಸಲಹೆ. ಇಂತಹ ಸಂದರ್ಭದಲ್ಲಿ ವೀರಾವೇಶದ ಮಾತುಗಳನ್ನು ಆಡಬಾರದು. ಆದಷ್ಟು ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಸಕೊಳ್ಳಬೇಕು. ಹುತಾತ್ಮರಾದ ಯೋಧರಿಗೆ ಸರ್ಕಾರಗಳು ಹೆಚ್ಚಿನ ನೆರವು ನೀಡಬೇಕು ಎಂದರು.

ಪ್ರಚಾರಕ್ಕೆ ಸೀಮಿತವಾಗಬಾರದು:

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಆಂದೋಲನ ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು. ಚೀನಾ ದೇಶದ ಉತ್ಪನ್ನ ಬಹಿಷ್ಕರಿಸುವ ಮುನ್ನ ನಾವು ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು‌. ಅದು ಬಿಟ್ಟು ಪ್ರಚಾರಕ್ಕೊಸ್ಕರ ಹೇಳಿಕೆಗಳನ್ನು ನೀಡಬಾರದು. ಸದ್ದಿಲ್ಲದೇ ನಮ್ಮ ದೇಶದಲ್ಲೇ ಚೀನಾ ಉತ್ಪನ್ನಗಳಿಗೆ ಪರ್ಯಾಯವಾಗಿ ದೇಶಿ ಉತ್ಪನ್ನಗಳನ್ನು ಉತ್ಪಾದಿಸಬೇಕು ಎಂದು ಸಲಹೆ ನೀಡಿದರು.

Last Updated : Jun 18, 2020, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.