ETV Bharat / state

ಸಹಚರರನ್ನು ಬಿಟ್ಟು ಮಹಿಳೆಗೆ ಧಮ್ಕಿ ಹಾಕಿದ ಆರೋಪ: ರೀಲ್ಸ್‌ ದಾಸ ಸೆರೆ - Reels maker Daasa arrested

Reels maker Daasa arrested: ಎಸ್ಸಿ ಕುಟುಂಬವೊಂದಕ್ಕೆ ಕಿರುಕುಳ ನೀಡಿರುವ ಆರೋಪದಡಿ ದಾಸ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Arrested Accused Daasa
ರೀಲ್ಸ್ ಮಾಡುತ್ತಿದ್ದ ದಾಸ
author img

By ETV Bharat Karnataka Team

Published : Dec 8, 2023, 6:35 PM IST

ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಹೇಳಿಕೆ

ಬೆಂಗಳೂರು: ಮೈಮೇಲೆ ಸದಾ ಕೆ.ಜಿಗಟ್ಟಲೆ ಚಿನ್ನಾಭರಣ ಧರಿಸಿ, ರೀಲ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಬೆಂಬಲಿಗರ ಬಳಗ ಹೊಂದಿದ್ದ ದಾಸ ಎಂಬಾತನನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಮೀನು ವ್ಯಾಜ್ಯದಲ್ಲಿ ತನ್ನ ಸಹಚರರನ್ನು ಕಳುಹಿಸಿ ಮಹಿಳೆಗೆ ಬೆದರಿಕೆ ಹಾಕಿಸಿ, ಹಲ್ಲೆ ಮಾಡಿಸಿದ್ದ ಆರೋಪದಡಿ ದಾಸನನ್ನು ಬಂಧಿಸಲಾಗಿದೆ.

ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮಹಿಳೆ ಹಾಗೂ ರಾಮಮೂರ್ತಿ ಎಂಬಾತನ ನಡುವೆ ಜಮೀನಿನ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ರಾಮಮೂರ್ತಿಯ ಕೋರಿಕೆಯ ಮೇರೆಗೆ ದಾಸ ತನ್ನ ಸಹಚರರನ್ನು ಕಳುಹಿಸಿಕೊಟ್ಟಿದ್ದ. ಈತನ ಸಹಚರರು ಮಹಿಳೆಗೆ ಧಮ್ಕಿ ಹಾಕಿ, ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಮಹಿಳೆ ಕೊಟ್ಟ ದೂರಿನನ್ವಯ ಯಲಹಂಕ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಸೆರೆಹಿಡಿದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್, "ಭೂಮಿ ನೋಂದಣಿ ವಿವಾದ ಸಂಬಂಧ ಹಲ್ಲೆ ಹಾಗೂ ದೌರ್ಜನ್ಯವಾಗಿರುವ ಕುರಿತು ಎಫ್​ಐಆರ್​ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗಿತ್ತು. ಪ್ರಕರಣದಲ್ಲಿ ಎಸ್ಸಿ ಕುಟುಂಬವೊಂದಕ್ಕೆ ಇನ್ನೊಂದು ಪಾರ್ಟಿಯವರು ಕಿರುಕುಳ ಕೊಟ್ಟಿರುವ ಬಗ್ಗೆ ಪ್ರಕರಣದಲ್ಲಿ ದಾಖಲಾಗಿದೆ. ಆ ದಿನ ಮಹಿಳೆಯೊಬ್ಬರಿಗೆ ಕೆನ್ನೆಗೆ ಹೊಡೆದು, ಕಿವಿಗೂ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ದೂರು ದಾಖಲಿಸಿಕೊಂಡಿದ್ದೆವು. ತನಿಖೆ ಸಮಯದಲ್ಲಿ ಪ್ರಮುಖ ಆರೋಪಿ ರಾಮಮೂರ್ತಿ ಎನ್ನುವವನು, ರೌಡಿಸಂ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ದಾಸ ಎನ್ನುವ ವ್ಯಕ್ತಿ ಸಹಾಯ ತೆಗೆದುಕೊಂಡಿದ್ದಾನೆ. ದಾಸ ಕಡೆಯ ವ್ಯಕ್ತಿಗಳನ್ನು ಕರೆಯಿಸಿ ಎಸ್ಸಿ ಕುಟುಂಬಕ್ಕೆ ಬೆದರಿಕೆ ಹಾಕುವಂತೆ ಹೇಳಿದ್ದಾನೆ ಎನ್ನುವುದು ತಿಳಿದು ಬಂದಿದೆ." ಎಂದು ಹೇಳಿದರು.

"ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪಟ್ಟಿ ಮಾಡಿದ್ದೇವೆ. ಅವರ ಹಿಂದಿರುವ ಪ್ರಮುಖ ವ್ಯಕ್ತಿ, ರೌಡಿಸಂ ಕೃತ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದ ದಾಸ ಎನ್ನುವವನನ್ನು ನಾವು ಬಂಧಿಸಿದ್ದೇವೆ. ಅವನ ಮೇಲೆ ಇನ್ನೂ ರೌಡಿಶೀಟರ್​ ಪಟ್ಟಿ ದಾಖಲಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಸದ್ಯಕ್ಕಿರುವ ಮಾಹಿತಿ ಪ್ರಕಾರ ಈತನ ಮೇಲೆ ಎರಡು ವರ್ಷಗಳ ಹಿಂದೆ ಚಿಂಚಲ ಪೊಲೀಸ್​ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿ ಈತನ ಮೇಲೆ ಚಾರ್ಜ್​ಶೀಟ್​ ಆಗಿತ್ತು. ಈತನ ಮೇಲೆ ಆಸ್ತಿ ವ್ಯಾಜ್ಯ ವಿಷಯದಲ್ಲಿ ಬೆದರಿಕೆ ಹಾಕುವ ಬಗ್ಗೆ ನಮಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದೇವೆ." ಎಂದು ತಿಳಿಸಿದರು.

ಇದನ್ನೂ ಓದಿ: ಚಿಕ್ಕಮಗಳೂರು ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣ ಸಿಐಡಿಗೆ ಹಸ್ತಾಂತರ: ಹೈಕೋರ್ಟ್​ಗೆ ರಾಜ್ಯ ಸರ್ಕಾರದ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.